ಮದುವೆಯಾದ ಒಂದೇ ಗಂಟೆಯಲ್ಲಿ ವಧುವಿಗೆ ಡೈವೋರ್ಸ್‌ ನೀಡಿದ ವರ | ಅನಂತರ ಆತ ನಡೆದುಕೊಂಡ ರೀತಿಗೆ ಪ್ರಶಂಸೆ| ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಮದುವೆ ಎಂಬ ಸುಂದರ ಬೆಸುಗೆಗೆ ಮುನ್ನುಡಿ ಬರೆಯುವಾಗ ನೂರಾರು ಕನಸುಗಳ ಜೊತೆಗೆ ಬೆಸೆದುಕೊಂಡು ಹಸೆಮಣೆ ಏರುವ ಜೋಡಿಗೆ ಮದುವೆ ಜೀವನದ ಮುಖ್ಯ ಘಟ್ಟವಾಗಿ ಪರಿಣಮಿಸುತ್ತದೆ. ಮದುವೆ ಎಂಬ ವಿಚಾರ ಕೆಲವರ ಪಾಲಿಗೆ ನವೀನ ಅನುಭವದ ಜೊತೆಗೆ ನೂರಾರು ಕನಸುಗಳ ಸಂಗಮ. ಆದ್ರೆ ಅದೆ ತಾಳಿ ಎಂಬುದು ಜೀವನದ ಉರುಳಿನ ರೀತಿ ಭಾಸವಾಗುವ ಪ್ರಕರಣಗಳು ಇವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದು ಒಂದು ರೀತಿಯ ಫ್ಯಾಷನ್ ಆಗಿ ಬಿಟ್ಟಿದ್ದು, ಬೆಳಗ್ಗೆ ಎಂಗೇಜ್ ಮೆಂಟ್ ಮುಗಿಸಿ ಮದ್ಯಾಹ್ನದ ಹೊತ್ತಿಗೆ ಮದುವೆ ಆದರೆ ಮರುದಿನ ಡೈವೋರ್ಸ್ ಆಗಿ ಅಲ್ಲಿಗೆ ಆ ಸಂಬಂಧ ಕೊನೆಗೊಳ್ಳುತ್ತದೆ. ಅದರಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಎಂಬ ಪದದ ಲವಲೇಶವೂ ಜನರಲ್ಲಿ ಇರದೆ ಇರುವುದು ವಿಪರ್ಯಾಸ. ಅದರಲ್ಲಿಯೂ ಮದುವೆಯ ಸಮಾರಂಭ ಹೆತ್ತವರ ಕನಸು ಎಲ್ಲವೂ ನೀರ ಮೇಲಿನ ಗುಳ್ಳೆಯಂತೆ ಸಣ್ಣ ಪುಟ್ಟ ಕಾರಣಕ್ಕೂ ಮದುವೆ ಅರ್ಧದಲ್ಲಿ ನಿಂತು ಹೋಗಿಬಿಡುವ ಪ್ರಕರಣ ಹೆಚ್ಚಾಗಿ ನಡೆಯುತ್ತಿವೆ.

ಇವತ್ತಿನ ದಿನಗಳಲ್ಲಿ ಮದುವೆಯ ಮೊದಲು ಎಷ್ಟೇ ಸಿದ್ಧತೆ ಮಾಡಿಕೊಂಡರು ಕೂಡ ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಹೇಳಲಾಗದು. ಹಾಗೆಯೇ ಇಲ್ಲೊಂದು ಮದುವೆ ಮಂಟಪದಲ್ಲಿ ಅರ್ಧದಲ್ಲೇ ನಿಂತು ಹೋಗಿದ್ದು, ಸಾಮಾನ್ಯವಾಗಿ ಹೀಗೆ ಅರ್ಧದಲ್ಲೇ ಮದುವೆ ನಿಂತು ಹೋದರೆ, ಆ ಹುಡುಗಿಗೆ ಮತ್ತೆ ಸಂಬಂಧ ಕೂಡಿಬರುವ ಹಾಗೂ ಮರು ಮದುವೆಯಾಗುವುದು ತುಸು ಕಷ್ಟ ಎಂದರೂ ತಪ್ಪಾಗಲಾರದು.

ಹೆಚ್ಚಿನ ಸಂದರ್ಭದಲ್ಲಿ ಮದುವೆ ಮಂಟಪದಲ್ಲಿ ವಧು, ಇಲ್ಲವೇ ವರ ಮದುವೆ ಬೇಡ ಎಂದು ಕ್ಯಾನ್ಸಲ್ ಮಾಡಿದರೆ ಹೆಚ್ಚು ಆಘಾತ ಆಗುವುದು ವಧು ಹಾಗೂ ಎರಡು ಮನೆಯ ಪೋಷಕರಿಗೆ. ಆದ್ರೆ, ಹೆಚ್ಚಿನವರು ಮದುವೆ ಕ್ಯಾನ್ಸಲ್ ಮಾಡುವಾಗ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ.

ಇದರಿಂದ ಹುಡುಗಿಯ ಮುಂದಿನ ಜೀವನದ ಮೇಲೆ ಅದು ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. (Life) ಈ ನಡುವೆ ಉತ್ತರಪ್ರದೇಶದ ಸಂಭಾಲ್‌ನಲ್ಲಿ ತದ್ವಿರುದ್ಧವಾಗಿರುವ ಘಟನೆಯೊಂದು ಮುನ್ನಲೆಗೆ ಬಂದಿದೆ. ಮಂಟಪದಲ್ಲೇ ಹುಡುಗ, ಹುಡುಗಿಯೊಂದಿಗೆ ಮದುವೆ ಬೇಡವೆಂದು ಹೇಳಿದ್ದು, ತಕ್ಷಣವೆ ಆಕೆಯನ್ನು ತನ್ನ ತಮ್ಮನ ಜೊತೆ ಹಸೆಮಣೆ ಏರುವಂತೆ ಮಾಡಿದ್ದಾನೆ.

ಉತ್ತರ ಪ್ರದೇಶದ ಸಂಭಾಲ್‌ನ ಅಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಘಟನೆ ನಡೆದಿದೆ. ಅಸ್ಮೋಲಿ ಪ್ರದೇಶದ ಹಳ್ಳಿಯೊಂದರಲ್ಲಿ ಯುವಕನೊಬ್ಬನ ಮದುವೆ ನಿಶ್ಚಯವಾಗಿ ಮದುವೆಗೆ ದಿನಾಂಕವೂ ನಿಗದಿಯಾಗಿ ಭರ್ಜರಿ ಸಿದ್ಧತೆ ಕೂಡ ನಡೆದಿದ್ದವು. ಈ ಶುಭ ಸಮಾರಂಭಕ್ಕೆ ಇಡೀ ನೆಂಟರು, ಸ್ನೇಹಿತರು ಎಲ್ಲ ಸೇರಿದ್ದರು. ಈ ನಡುವೆ ಸಿನಿಮಿಯ ಮಾದರಿಯಲ್ಲಿ ಪ್ರಹಸನ ನಡೆದಿದೆ.

ಹೌದು!!!. ಅಮ್ರೋಹಾ ಜಿಲ್ಲೆಯ ಸೈದ್ಗನಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ನಿವಾಸಿಯಾಗಿರುವ ಯುವಕ ನಾಲ್ಕು ವರ್ಷಗಳ ಹಿಂದೆ ಅದೇ ಪ್ರದೇಶದ ಯುವತಿಯನ್ನು ವಿವಾಹವಾಗಿದ್ದಾನೆ. ಮೊದಲನೇ ಪತ್ನಿ ಈ ಮದುವೆಗೆ ಅಸಮ್ಮತಿ ಸೂಚಿಸಿದ್ದು, ಹುಡುಗಿಯನ್ನು ಬಿಟ್ಟುಬಿಡುವಂತೆ ಒತ್ತಡ ಹೇರಿದ್ದಳು ಎನ್ನಲಾಗಿದೆ. ಹೀಗಾಗಿ, ಪಂಚಾಯಿತಿ ನಡೆದು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದರಿಂದ ವರ ತಕ್ಷಣವೆ ಮದುವೆಯಾದ ಕೇವಲ ಒಂದೇ ಗಂಟೆಯಲ್ಲಿ ವಧುವಿಗೆ ಡೈವೋರ್ಸ್ ನೀಡಿದ್ದಾನೆ ಎನ್ನಲಾಗಿದೆ.

ಯುವಕನು ಹೊಸದಾಗಿ ಮದುವೆಯಾದ ಹುಡುಗಿಗೆ ವಿಚ್ಛೇದನ (Divorce) ನೀಡಬೇಕು ಜೊತೆಗೆ ಅವಳನ್ನು ವರನ ಕಿರಿಯ ಸಹೋದರನಿಗೆ ಮದುವೆಯಾಗಬೇಕು ಎಂದು ನ್ಯಾಯಾಧೀಶರು ತೀರ್ಪು ನೀಡಿದ ಹಿನ್ನೆಲೆ ವರ ಪಂಚಾಯತ್ ನಿರ್ಧಾರದ ಅನುಸಾರ ಪತಿ ಒಂದು ಗಂಟೆಯೊಳಗೆ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ ಎಂದು ತಿಳಿದುಬಂದಿದೆ. ಹೀಗಾಗಿ,ವರನ ಕಿರಿಯ ಸಹೋದರನೊಂದಿಗೆ ವಧುವಿಗೆ ಮದುವೆ ಮಾಡಿಸಲಾಗಿದೆ.

ಆದರೆ ಏಕಏಕಿ ಮದುವೆ ಮಂಟಪದಲ್ಲೇ ವರ ಹುಡುಗಿಗೆ ಡಿವೋರ್ಸ್ ನೀಡಿದ್ದು ಎಲ್ಲರನ್ನು ಅಚ್ಚರಿಗೊಳಿಸಿದ್ದು, ಅಲ್ಲಿದ್ದ ವಧುವಿನ ಪರಿಸ್ಥಿತಿ ಮನಸ್ಥಿತಿ ಇದಕ್ಕೆ ಭಿನ್ನವಾಗಿರಲಿಲ್ಲ. ಮುಂದೇನು ಮಾಡ್ಬೇಕು ಎಂದು ತಿಳಿಯದೇ ಸ್ತಬ್ದಳಾಗಿದ್ದಳು. ಆದರೆ ವರ, ಹುಡುಗಿಗೆ ಡಿವೋರ್ಸ್ ನೀಡಿದ ಕೂಡಲೇ ತನ್ನ ಕಿರಿಯ ಸಹೋದರನೊಂದಿಗೆ ಆಕೆಯ ಮದುವೆ ಮಾಡಿಸಿದ್ದಾನೆ ಎಂದು ತಿಳಿದುಬಂದಿದೆ.

Leave A Reply

Your email address will not be published.