Home Interesting ಬೆಳ್ತಂಗಡಿ : ಟಿವಿ ನೋಡಲು ಬರುತ್ತಿದ್ದ ಬಾಲಕಿ ಮೇಲೆ ರೇಪ್‌ | ಗರ್ಭಪಾತ ಮಾಡಿಸಿ, ಆರೋಪಿ...

ಬೆಳ್ತಂಗಡಿ : ಟಿವಿ ನೋಡಲು ಬರುತ್ತಿದ್ದ ಬಾಲಕಿ ಮೇಲೆ ರೇಪ್‌ | ಗರ್ಭಪಾತ ಮಾಡಿಸಿ, ಆರೋಪಿ ಎಸ್ಕೇಪ್‌

Hindu neighbor gifts plot of land

Hindu neighbour gifts land to Muslim journalist

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ಹೆಚ್ಚುತ್ತಿದ್ದು, ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡುವ ವಿಕೃತ ಕಾಮಿ ವ್ಯಕ್ತಿತ್ವದವರು ನಮ್ಮ ನಡುವೆ ಇದ್ದಾರೆ. ಕೆಲ ಮಹಿಳೆಯರು ತಮ್ಮ ಮೇಲೆ ನಡೆಯುವ ಹಲ್ಲೆ ಪ್ರಕರಣದ ಬಗ್ಗೆ ದ್ವನಿ ಎತ್ತಿದರೆ ಮತ್ತೆ ಕೆಲವರು ಮನೆಯ ಮರ್ಯಾದೆಗೆ ಅಂಜಿ ಮೌನ ತಾಳುತ್ತಾರೆ. ಇದೇ ರೀತಿಯ ಪ್ರಕರಣವೊಂದು ಕರಾವಳಿ ಭಾಗದಲ್ಲಿ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ವ್ಯಾಪ್ತಿಯ ಬಾಲಕಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರವೆಸಗಿ ವಿಕೃತ ಮೆರೆದಿದ್ದು ಮಾತ್ರವಲ್ಲದೇ, ಗರ್ಭವತಿಯಾದ ಬಳಿಕ ಗರ್ಭಪಾತ ಕೂಡ ಮಾಡಿಸಿರುವ ಘಟನೆ ವರದಿಯಾಗಿದೆ.

ಬಾಲಕಿ ತನ್ನ ಮನೆಯ ಸಮೀಪದಲ್ಲಿರುವ ಸುಧೀರ್ ಎಂಬವರ ಮನೆಗೆ ರಜಾದಿನಗಳಲ್ಲಿ ಟಿವಿ ವೀಕ್ಷಣೆಗೆಂದು ಹೋಗುತ್ತಿದ್ದಳು ಎನ್ನಲಾಗಿದೆ. ಈ ವೇಳೆ ಆ ಸಮಯವನ್ನು ದುರ್ಬಳಕೆ ಮಾಡಿಕೊಂಡು ಬಾಲಕಿಯನ್ನು ಸುಧೀರ್ ಸಮೀಪದಲ್ಲಿರುವ ಈತನ ಅಜ್ಜಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಕಳೆದೊಂದು ವರ್ಷದಿಂದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಹಿನ್ನಲೆ ಬಾಲಕಿ ಗರ್ಭವತಿಯಾಗಿದ್ದಳು ಎನ್ನಲಾಗಿದ್ದು, ಆರೋಪಿಯು ಪಾರ್ವತಿ, ಮನೋಹರ ಮತ್ತು ಮಾದು ಎಂಬವರ ನೆರವಿನಿಂದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ಬಾಲಕಿಗೆ ಗರ್ಭಪಾತ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಈ ವಿಚಾರದ ಕುರಿತಂತೆ ಡಿಸೆಂಬರ್ 30ರಂದು ಚೈಲ್ಡ್‌ಲೈನ್‌ನಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಇದರ ಸತ್ಯಾಸತ್ಯತೆಯ ಬಗ್ಗೆ ಪರಾಮರ್ಶೆ ನಡೆಸಲು ಸಿಡಿಪಿಒ ಕಚೇರಿ ಅಧಿಕಾರಿಗಳೊಂದಿಗೆ ಮಹಿಳಾ ಪೊಲೀಸ್ ಸಿಬ್ಬಂದಿ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ.

ಸದ್ಯ ಮಕ್ಕಳ ಕಲ್ಯಾಣ ಸಮಿತಿ ಆದೇಶದ ಅನುಸಾರ ಮೂಡುಬಿದಿರೆಯ ಪ್ರಜ್ಞಾ ಮಕ್ಕಳ ಕುಟೀರದಲ್ಲಿ ಬಾಲಕಿ ಆಪ್ತ ಸಮಾಲೋಚನೆ ನಡೆಸಿದ ನಂತರ ಪ್ರಮುಖ ಆರೋಪಿಯ ಸಹಿತ ಗರ್ಭಪಾತಕ್ಕೆ ಸಹಾಯ ಮಾಡಿದ ಮೂವರ ವಿರುದ್ಧ ಪೋಕ್ಸ್ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಗಳು ನಾಪತ್ತೆಯಾಗಿದ್ದು, ಆರೋಪಿಗಳ ಹೆಡೆಮುರಿ ಕಟ್ಟಲು ಖಾಕಿ ಪಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ.