High-Tech Bus Stand: ದಕ್ಷಿಣ ಕನ್ನಡದಲ್ಲಿ ರಾಜ್ಯದ ಮೊದಲ ಹೈಟೆಕ್ ಬಸ್ ಸ್ಟಾಂಡ್!

ಕರಾವಳಿಯ ಜನತೆಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ದಕ್ಷಿಣ ಕನ್ನಡದಲ್ಲಿ ರಾಜ್ಯದ ಮೊತ್ತ ಮೊದಲ ಹೈಟೆಕ್ ಬಸ್ ಸ್ಟಾಂಡ್ ರೆಡಿಯಾಗಿದ್ದು, ಇನ್ನೂ ಮುಂದೆ ಮಹಿಳೆಯರಿಗೆ ರಾತ್ರಿ ಹೊತ್ತಲ್ಲಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾದರೆ ಎಷ್ಟೇ ರಾತ್ರಿಯಾದ್ರೂ​ ಸೇಫ್ ಆಗಿ ಬಸ್ ಸ್ಟ್ಯಾಂಡ್ ಅಲ್ಲಿ ನಿಲ್ಲಲು ಸುಸಜ್ಜಿತ ಸುರಕ್ಷತಾ ಕ್ರಮಗಳನ್ನು ಆಳವಡಿಸಲಾಗಿದೆ.

ರಾತ್ರಿ ಹೊತ್ತು ಬಸ್ ಸ್ಟಾಂಡ್​ನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದರೆ ಒಂದು ರೀತಿಯ ಭಯ, ಆತಂಕ ಆಗೋದು ಸಹಜ. ಅದರಲ್ಲಿ ಕೂಡ ವಿಶೇಷವಾಗಿ ಮಹಿಳೆಯರು ಒಬ್ಬಂಟಿಯಾಗಿದ್ದರೆ ಸಿಕ್ಕಿದ್ದೆ ಚಾನ್ಸ್ ಎಂದುಕೊಂಡು ಮಜಾ ತೆಗೆದುಕೊಳ್ಳುವ ಪುಂಡ ಪೋಕರಿಗಳು, ಕಳ್ಳರು, ದರೋಡೆಕೋರರ ಭೀತಿ ಕೂಡ ಹೆಚ್ಚಾಗಿ ನಡೆಯುತ್ತಿರುತ್ತವೆ. ಆದ್ರೆ,ಇನ್ನೂ ಮುಂದೆ ರಾತ್ರಿ ಎಷ್ಟೇ ಹೊತ್ತಾದರೂ ಕೂಡ ಬಸ್ ಸ್ಟಾಂಡಲ್ಲಿ ನಿಲ್ಲೋಕೆ ಹೆದರ ಬೇಕಾದ ಅವಶ್ಯಕತೆ ಇಲ್ಲ!!!! ಅರೇ! ಇದ್ಯಾಕಪ್ಪಾ… ಈ ಬಸ್ ಸ್ಟಾಂಡ್ ಅಲ್ಲಿ ಅಂತ (High-Tech Bus Stand) ವಿಶೇಷತೆ ಏನಿದೆ ಅಂತ ಯೋಚಿಸುತ್ತಿದ್ದೀರಾ??

ರಾಜ್ಯದ ಮೊದಲ ಹೈಟೆಕ್ ಬಸ್ ನಿಲ್ದಾಣ ದಕ್ಷಿಣ ಕನ್ನಡದ (Dakshina Kannada News) ಸುರತ್ಕಲ್​ನಲ್ಲಿ ಗೋವಿಂದ ದಾಸ್ ಕಾಲೇಜು ಮುಂಭಾಗದಲ್ಲಿ ಈ ಹೈಟೆಕ್ ಬಸ್ ಸ್ಟಾಂಡ್ (Surathkal Bus Stand) ನಿರ್ಮಾಣವಾಗಿದ್ದು, ರಾತ್ರಿ ಹೊತ್ತಲ್ಲಿ ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲುವ ಪ್ರಯಾಣಿಕರಿಗೆ ನೆರವಾಗುವುದರಲ್ಲಿ ಸಂಶಯ ವಿಲ್ಲ.

ಈ ಬಸ್ ನಿಲ್ದಾಣದ ವಿಶೇಷತೆ ಏನು ಅಂತ ಗಮನಿಸಿದರೆ, ಉಚಿತ ಅನ್​ಲಿಮಿಟೆಡ್ ವೈಫೈ, ಮೂರು ಸಿಸಿ ಕ್ಯಾಮೆರಾ, ಶುದ್ಧ ಕುಡಿಯುವ ನೀರು, ಎಫ್ಎಂ ರೇಡಿಯೋ, ಇನ್ವರ್ಟರ್ ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮೆರಾ ನೇರ ದೃಶ್ಯ ಪೊಲೀಸ್ ಠಾಣೆ, ಪಾಲಿಕೆಯ ಕಛೇರಿ ಮತ್ತು ಪೊಲೀಸ್ ಅಧಿಕಾರಿಗಳ ಮೊಬೈಲ್​ಗೆ ರವಾನೆಯಾಗಲಿದೆ. ಇದಿಷ್ಟೇ ಅಲ್ಲ ಕಣ್ರೀ!!. ಫ್ಯಾನ್, ಬೆಂಕಿ ನಿರೋಧಕ, ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್, ಪ್ರಥಮ ಚಿಕಿತ್ಸೆಯ ಬಾಕ್ಸ್, 12 ಚೇರ್​ಗಳ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

ಬಸ್ ಸ್ಟ್ಯಾಂಡ್​ನಲ್ಲಿ ಟಚ್ ಸ್ಕ್ರೀನ್ ಡಿಸ್​ಪ್ಲೇ ಅಳವಡಿಸಲಾಗಿದ್ದು, ಈ ಡಿಸ್ ಪ್ಲೇಯಲ್ಲಿ ಬಸ್​ಗಳ ಟೈಮಿಂಗ್, ಬಸ್ ಬರುತ್ತಿರುವ ನಿರ್ದಿಷ್ಟ ಸ್ಥಳ ಮತ್ತು ಸುತ್ತಮುತ್ತಲಿನ ಪ್ರವಾಸೋದ್ಯಮ ಸ್ಥಳಗಳ ಮಾಹಿತಿ ದೊರೆಯಲಿದೆ. ಇವುಗಳ ಹೊರತಾಗಿ ಐ ಲವ್ ಸುರತ್ಕಲ್ ಎಂಬ ಸೆಲ್ಫಿ ಪಾಯಿಂಟ್ ಕೂಡಾ ಬಸ್ ನಿಲ್ದಾಣದಲ್ಲಿದೆ.

ಸ್ಮಾರ್ಟ್ & ಡಿಜಿಟಲ್ ಸುರತ್ಕಲ್ ಧ್ಯೇಯದಡಿ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಮಹಿಳೆಯರ ಸುರಕ್ಷತೆ ಎಸ್ಒಎಸ್ ಅಳವಡಿಕೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಮಹಿಳೆಯರು SOS ಬಟನ್ ಒತ್ತಿದರೆ ಪೊಲೀಸರಿಗೆ ಅಟೋಮ್ಯಾಟಿಕ್ ಕಾಲ್ ಹೋಗಲಿದ್ದು, ಇದರ ಜೊತೆಗೆ, 5 ನಂಬರ್​ಗಳಿಗೆ ಅಟೋಮ್ಯಾಟಿಕ್ ಕಾಲ್, ಮೆಸೇಜ್ ಸಹ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇನ್ಸ್​ಪೆಕ್ಟರ್ ಎಸಿಪಿ, ಪಾಲಿಕೆ ಅಧಿಕಾರಿ ಸೇರಿದಂತೆ ಐದು ಮಂದಿ ಅಧಿಕಾರಿಗಳಿಗೆ ಕರೆ ಹೋಗಲಿದೆ.

Leave A Reply

Your email address will not be published.