LPG Cylinder Offer: ಗ್ಯಾಸ್‌ ಸಿಲಿಂಡರ್‌ ಮೇಲೆ ಭರ್ಜರಿ ಆಫರ್‌ | ಗುಡ್‌ ನ್ಯೂಸ್‌ ಸಾರ್ವಜನಿಕರೇ, ಫ್ಲಿಪ್‌ ಕಾರ್ಟ್‌ ನಿಂದ ಅಮೋಘ ಕೊಡುಗೆ

Share the Article

ದಿನನಿತ್ಯದ ಪ್ರತಿ ವಸ್ತುಗಳ ಬೆಲೆ ದುಬಾರಿ ಎಂದು ಚಿಂತಿತರಾಗಿದ್ದರೆ, ಈ ಮಾಹಿತಿ ನೀವು ಗಮನಿಸಲೇಬೇಕು. ಗ್ಯಾಸ್ ಸಿಲಿಂಡರ್ ಮೇಲೆ ಭಾರೀ ಡಿಸ್ಕೌಂಟ್ ಸಿಗಲಿದ್ದು, ಫ್ಲಿಪ್​ಕಾರ್ಟ್​ ಬಂಪರ್​ ಆಫರ್ ನೀಡುತ್ತಿದೆ.
ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಚಿಂತಿಸುತ್ತಿದ್ದಿರಾ?? ಹಾಗಿದ್ದರೆ ನಿಮಗೆ ಸಿಹಿ ಸುದ್ದಿಯೊಂದು ಕಾದಿದೆ. ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದು, ಇನ್ನೇನು  ಹೊಸ ಗ್ಯಾಸ್​ ಬುಕ್​ ಮಾಡಬೇಕು ಎಂದುಕೊಂಡಿದ್ದರೆ,  ನಿಮಗೆ ಸೂಪರ್​ ಆಫರ್ ದೊರೆಯಲಿದ್ದು, ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ.

ನೀವು Paytm ಮತ್ತು Bajaj Finserv ನಂತಹ ಅಪ್ಲಿಕೇಶನ್‌ ಮುಖಾಂತರ ಗ್ಯಾಸ್ ಸಿಲಿಂಡರ್   ಬುಕ್ ಮಾಡಿದಾಗ ನಿಮಗೆ ಕ್ಯಾಶ್‌ಬ್ಯಾಕ್  ಆಫರ್ ಸಿಗಲಿದೆ. ಇದರ ಜೊತೆಗೆ  ಪ್ರಮುಖ ಇಕಾಮರ್ಸ್ ಕಂಪನಿಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್  ಮುಖಾಂತರ ಗ್ಯಾಸ್ ಸಿಲಿಂಡರ್ ಬುಕ್  ಮಾಡಬಹುದಾಗಿದೆ.

Flipkart Mobikwik ಸಹಭಾಗಿತ್ವದ ಜೊತೆಗೆ  ಸೇವೆಗಳನ್ನು ನೀಡಲಾಗುತ್ತಿದ್ದು, ಸೂಪರ್ ನಾಣ್ಯಗಳಿದ್ದಲ್ಲಿ  ಕಡಿಮೆ ಬೆಲೆಗೆ ಸಿಲಿಂಡರ್ ಲಭ್ಯವಾಗಲಿದೆ. ನಿಮ್ಮಲ್ಲಿರುವ ಸೂಪರ್ ನಾಣ್ಯಗಳ ಮೇಲೆ ನೀವು ಪಡೆಯುವ ರಿಯಾಯಿತಿ ಅವಲಂಬಿತವಾಗಿರುತ್ತದೆ.

ಸೂಪರ್ ನಾಣ್ಯಗಳು ಹೆಚ್ಚು ಇದ್ದಲ್ಲಿ ಹೆಚ್ಚು ರಿಯಾಯಿತಿ ನಿಮ್ಮದಾಗಿಸಿ ಕೊಳ್ಳಬಹುದು. ಅಂದರೆ,  ನೀವು 750 ಸೂಪರ್‌ಕಾಯಿನ್‌ಗಳನ್ನು ಹೊಂದಿದ್ದರೆ.. ನೀವು ಕೇವಲ ರೂ. 900ಕ್ಕೆ ಗ್ಯಾಸ್ ಸಿಲಿಂಡರ್ ಪಡೆಯಬಹುದು. ನೀವು ನೇರವಾಗಿ ರೂ. 200 ರಿಯಾಯಿತಿ ಸಿಗಲಿದ್ದು, ಹೆಚ್ಚಿನ ನಾಣ್ಯಗಳು ಹೆಚ್ಚಿನ ರಿಯಾಯಿತಿಯನ್ನು ಪಡೆಯಲು ನೆರವಾಗುತ್ತವೆ.

ನೀವು ಫ್ಲಿಪ್‌ಕಾರ್ಟ್ ಮೂಲಕ ಗ್ಯಾಸ್ ಸಿಲಿಂಡರ್  ಬುಕ್ ಮಾಡಿದ್ದಲ್ಲಿ ನೀವು ದೊಡ್ಡ ರಿಯಾಯಿತಿ ಪಡೆಯುವ ಅವಕಾಶ ಇದ್ದು, ಆದರೆ ಈ ಕೊಡುಗೆಯು SuperCoins ಹೊಂದಿರುವವರಿಗೆ ಮಾತ್ರ ಅನ್ವಯವಾಗಲಿದೆ. ಹೀಗಾಗಿ, ಗ್ಯಾಸ್ ಸಿಲಿಂಡರ್ ಅನ್ನು ಸೂಪರ್ ಕಾಯಿನ್ ಮೂಲಕ ಬುಕ್ ಮಾಡಬಹುದಾಗಿದೆ.

ಹಾಗಿದ್ರೆ  ಫ್ಲಿಪ್‌ಕಾರ್ಟ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಹೇಗೆ ??

ನೀವು ಮೊದಲು ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ಗೆ ಹೋಗಬೇಕಾಗಿದ್ದು, ಈಗ ಸೂಪರ್ ಕಾಯಿನ್ ಮೇಲೆ ಕ್ಲಿಕ್ ಮಾಡಬೇಕು.ಆಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ನೀವು ಸೂಪರ್ ಕಾಯಿನ್ ಪೇ ಆಯ್ಕೆಯನ್ನು ಆಯ್ದು ಕೊಳ್ಳಬೇಕು. ನೀವು ಈ ಆಯ್ಕೆಯನ್ನು ಬಲಭಾಗದಲ್ಲಿ ನೋಡಬಹುದು. ಆಗ ಅದು ಹೊಸ ಪುಟವಾಗಲಿದ್ದು, ಈಗ ನೀವು ಮೊಬೈಲ್ ರೀಚಾರ್ಜ್, ನೀರು, ವಿದ್ಯುತ್ ಬಿಲ್, DTH ರೀಚಾರ್ಜ್, FASTAG, LPG ಬುಕಿಂಗ್, ಬ್ರಾಡ್‌ಬ್ಯಾಂಡ್‌ನಂತಹ ಆಯ್ಕೆಯನ್ನು ಗಮನಿಸಬಹುದು.

ಇವುಗಳಲ್ಲಿ ನೀವು LPG ಸಿಲಿಂಡರ್ ಬುಕಿಂಗ್ ಆಯ್ಕೆಯನ್ನು ಆಯ್ದುಕೊಂಡರೆ,  ಅದು ಹೊಸ ಪುಟವಾಗಲಿದ್ದು ಇಲ್ಲಿ ನೀವು ನಿಮ್ಮ ಗ್ಯಾಸ್ ಸಿಲಿಂಡರ್ ಕಂಪನಿಯನ್ನು ಆಯ್ಕೆ ಮಾಡಬೇಕು. ಬಳಿಕ, ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಜೊತೆಗೆ  ಮೇಕ್ ಪೇಮೆಂಟ್ ಮೇಲೆ ಕ್ಲಿಕ್ ಮಾಡಬೇಕು.ಆಗ  ನೀವು ಒಟ್ಟು ಬಿಲ್ ಅನ್ನು ನೋಡಬಹುದಾಗಿದೆ.

ನಿಮ್ಮ ಬಳಿ ಸೂಪರ್ ನಾಣ್ಯಗಳಿದ್ದಲ್ಲಿ ಎಷ್ಟು ರಿಯಾಯಿತಿ ನಿಮಗೆ ಲಭ್ಯವಾಗಲಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಈ ಮೂಲಕ ನೀವು ಕಡಿಮೆ ವೆಚ್ಚದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದಾಗಿದ್ದು,  ಸೂಪರ್ ನಾಣ್ಯಗಳನ್ನು ಹೊಂದಿರುವವರಿಗೆ ಹೆಚ್ಚಿನ ರಿಯಾಯಿತಿ ಅನ್ವಯವಾಗಲಿದೆ.

Leave A Reply