Shaving Tips : ಪುರುಷರೇ ಶೇವಿಂಗ್ ಬಳಿಕ ತುರಿಕೆ-ಉರಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭೋಪಾಯ!!!

ಪುರುಷರೆಲ್ಲರಿಗೂ ತಾನು ಹ್ಯಾಂಡ್‌ಸಮ್ ಆಗಿ ಕಾಣಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಹಾಗಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಶೇವಿಂಗ್ ಮಾಡಿಕೊಳ್ಳುತ್ತಾರೆ. ಇನ್ನೂ ಶೇವಿಂಗ್ ಮಾಡಿದ ಬಳಿಕ ಹಲವರಿಗೆ ಮುಖದಲ್ಲಿ ಉರಿ-ತುರಿಕೆಯ ಅನುಭವವಾಗುತ್ತಿದ್ದರೆ ಅದಕ್ಕೆಂದು ಇಲ್ಲಿದೆ ಪರಿಹಾರ.

ಶೇವಿಂಗ್ ಮಾಡುವ ರೇಝರ್‌ ನ ಗುಣಮಟ್ಟವನ್ನು ನೋಡಿಕೊಂಡು ಖರೀದಿ ಮಾಡಿ. ಹಾಗೇ ಒಂದು ರೇಝರ್ ಅನ್ನು 3-4 ಬಾರಿ ಮರುಬಳಕೆ ಮಾಡಬಹುದು. ಇದಕ್ಕಿಂತ ಹೆಚ್ಚು ಬಾರಿ ಬಳಕೆ ಮಾಡಿದರೆ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗುತ್ತದೆ. ಅಲ್ಲದೆ, ನೀವೇನಾದರೂ ಲೋಕಲ್‌ ರೇಝರ್ ಬಳಸಿದರೆ ಶೇವಿಂಗ್ ಮಾಡಿದ ಬಳಿಕ ಮುಖದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಶೇವಿಂಗ್ ಮಾಡಬೇಕಾದರೆ ಗಮನಿಸಬೇಕಾದ ವಿಷಯಗಳು, ಮೊದಲು ನಿಮ್ಮ ತ್ವಚೆಯನ್ನು ಮೃದು ಮಾಡಿ. ನಂತರ ಶೇವಿಂಗ್‌ ಮಾಡುವಾಗ ಸೋಪ್‌ ಅಥವಾ ಶೇವಿಂಗ್‌ ಕ್ರೀಮ್ ಮಾತ್ರ ಬಳಸಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.

ಹಾಗೇ, ಶೇವಿಂಗ್ ಮಾಡಿದ ಬಳಿಕ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ. ಇದರಿಂದ ತ್ವಚೆಯಲ್ಲಿ ಉಂಟಾಗುವ ಅಲರ್ಜಿ ಸಮಸ್ಯೆ ದೂರವಾಗುತ್ತದೆ.

Leave A Reply

Your email address will not be published.