Wrist Lines: ನಿಮ್ಮ ಆಯಸ್ಸು ಅಂಗೈನಲ್ಲಿ ಮಾತ್ರ ಅಡಗಿದೆ ಅಂದ್ಕೊಂಡ್ರಾ ? ಅಲ್ಲ ಈ ರೇಖೆಯಲ್ಲಿ ಕೂಡ ಅಡಗಿದೆ ನಿಮ್ಮ ಆಯಸ್ಸು
ಹಸ್ತಸಾಮುದ್ರಿಕ ಶಾಸ್ತ್ರ ಪ್ರಕಾರ ಅಂಗೈ, ಹೆಬ್ಬೆರೆಳು, ಬೆರಳುಗಳ ರೇಖೆ ಮತ್ತು ಬೆರಳುಗಳನ್ನು ನೋಡುವ ಮೂಲಕ ಭವಿಷ್ಯವನ್ನು ಮುನ್ಸೂಚಿಸುವ ಪ್ರಾಚೀನ ಅಭ್ಯಾಸವಾಗಿದೆ. ಅವುಗಳ ಆಕಾರ, ಉದ್ದ ಇತ್ಯಾದಿಗಳನ್ನು ನೋಡಿ ಭವಿಷ್ಯವನ್ನು ಊಹಿಸಬಹುದು. ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ, ವಿವಿಧ ಅಂಗೈ ರೇಖೆಗಳು ಮತ್ತು ಬೆರಳುಗಳು, ಮಣಿಕಟ್ಟು ಮತ್ತು ಅಂಗೈ ವೈಶಿಷ್ಟ್ಯಗಳ ಮೂಲಕ ಮದುವೆ, ಸಂತತಿ, ವೃತ್ತಿ, ಆರೋಗ್ಯ, ಯಶಸ್ಸು ಇತ್ಯಾದಿಗಳಂತಹ ಜೀವನದಲ್ಲಿ ಕೆಲವು ಘಟನೆಗಳ ಬಗ್ಗೆ ತಿಳಿದುಕೊಳ್ಳಬಹುದು.
ಅದಲ್ಲದೆ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಅಂಗೈ ರೇಖೆಗಳು ಭವಿಷ್ಯದ ಆಗು ಹೋಗುಗಳ ಬಗ್ಗೆ ತಿಳಿಸುತ್ತವೆ. ಹಸ್ತ ರೇಖೆಗಳು ಹಣ, ಆಸ್ತಿ, ವೃತ್ತಿ, ಮದುವೆ, ಮಕ್ಕಳು, ಆರೋಗ್ಯ ಹೀಗೆ ಜೀವನದ ಪ್ರಮುಖ ಮಾಹಿತಿಯನ್ನು ನೀಡುತ್ತವೆ. ಈ ಹಸ್ತಮುದ್ರಿಕಾ ಶಾಸ್ತ್ರವು ಪ್ರಪಂಚದಾದ್ಯಂತ ಪ್ರಸಿದ್ದವಾಗಿದ್ದು, ಹಾಗೆಯೇ ನಾವು ನಮ್ಮ ಮಣಿಕಟ್ಟಿನ ಮೇಲಿರುವ ರೇಖೆಯಿಂದ ಸಹ ನಾವು ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು ಎನ್ನಲಾಗುತ್ತದೆ. ಈ ಮಣಿಕಟ್ಟಿನ ರೇಖೆ ನಿಮ್ಮ ಆರೋಗ್ಯ ಹಾಗೂ ಬದುಕಿನ ವಿಚಾರವಾಗಿ ಏನು ಹೇಳುತ್ತದೆ ಎಂಬುದು ಇಲ್ಲಿ ತಿಳಿಸಲಾಗಿದೆ.
ನಾವೆಲ್ಲರೂ ನಮ್ಮ ಮಣಿಕಟ್ಟಿನಲ್ಲಿರುವ ರೇಖೆಯನ್ನು ಗಮನಿಸಿರುತ್ತೇವೆ, ಆದರೆ ಅದರಿಂದ ಸಹ ನಾವು ಭವಿಷ್ಯವನ್ನು ಸಹ ತಿಳಿದುಕೊಳ್ಳಬಹುದು. ಹೌದು ನಿಮ್ಮ ಮಣಿಕಟ್ಟಿನಲ್ಲಿರುವ ಈ ನಾಲ್ಕು ರೇಖೆಗಳು ಸಾವಿರಾರು ವಿಚಾರಗಳನ್ನು ನಮಗೆ ತಿಳಿಸುವುದಲ್ಲದೇ, ಕೆಲ ಮುನ್ನಚ್ಚರಿಕೆಗಳನ್ನು ಸಹ ನೀಡುತ್ತದೆ.
ಸಂಪತ್ತು ಹಾಗೂ ಆರೋಗ್ಯದ ಬಗ್ಗೆ ಹೇಳುತ್ತೆ ಈ ಲೈನ್ :
ನಿಮ್ಮ ಆರ್ಥಿಕ ಪರಿಸ್ಥಿತಿ, ಆರೋಗ್ಯ ಹೀಗೆ ಹತ್ತು ಹಲವಾರು ವಿಚಾರಗಳನ್ನು ಬಿಚ್ಚಿಡುತ್ತದೆ. ಹಾಗೆಯೇ ವ್ಯಕ್ತಿಯಿಂದ ವ್ಯಕ್ತಿಗೆ ಸಹ ಮಣಿಕಟ್ಟಿನ ರೇಖೆಗಳು ಬದಲಾಗುತ್ತದೆ. ಅರ್ಧ ರೇಖೆಗಳು, ಮುಕ್ಕಾಲು ರೇಖೆ ಹೀಗೆ ಬದಲಾಗುತ್ತದೆ. ಒಂದೊಂದು ರೇಖೆಗೂ ಒಂದೊಂದು ಅರ್ಥವಿರುತ್ತದೆ. ಮಣಿಕಟ್ಟಿನಲ್ಲಿರುವ ಈ ರೇಖೆಗಳ ಆಧಾರದಲ್ಲಿ ವ್ಯಕ್ತಿಯ ಆಯುಷ್ಯವನ್ನು ತಿಳಿದುಕೊಳ್ಳಬಹುದು.
ಕೆಲವರಿಗೆ ಮಣಿಕಟ್ಟಿನಲ್ಲಿ ಒಂದು ರೇಖೆ ಇದ್ದರೆ ಇನ್ನೂ ಕೆಲವರಿಗೆ ಎರಡು ರೇಖೆ ಇರುತ್ತದೆ. ಹಾಗೆಯೇ ಕೆಲವರಿಗೆ 3 ಮತ್ತು 4 ಇರುತ್ತದೆ. ಅದರಲ್ಲೂ ಮುಖ್ಯವಾಗಿ ಈ 4 ರೇಖೆಗಳು ಸ್ಪಷ್ಟವಾಗಿ ಕಂಡರೆ, ಇನ್ನು ಕೆಲವೊಮ್ಮೆ ಅಸ್ಪಷ್ಟವಾಗಿ ಕಾಣುತ್ತದೆ. ಇನ್ನು ಈ ರೇಖೆಗಳು ಜಾಸ್ತಿ ಇದ್ದರೆ ನಿಮ್ಮ ಆಯುಷ್ಯ ಜಾಸ್ತಿ ಇದೆ ಎಂದು ಅರ್ಥ, ಹಾಗೆಯೇ ಕಡಿಮೆ ಇದ್ದರೆ ಅಲ್ಪಾಯುಷ್ಯ ಎಂದು ಅರ್ಥವಾಗಿದೆ.
ಮತ್ತೊಂದು ಮುಖ್ಯವಾದ ಅಂಶವೆಂದರೆ ನಿಮ್ಮ ಮಣಿಕಟ್ಟಿನಲ್ಲಿ ಒಂದು ರೇಖೆ ಇದ್ದರೆ ನಿಮ್ಮ ಆಯುಷ್ಯ 30 ವರ್ಷವಂತೆ, ಎರಡು ರೇಖೆ ಇದ್ದರೆ 55-60 ವರ್ಷವಂತ, ಮೂರು ರೇಖೆಗಳಿದ್ದರೆ 75-80 ವರ್ಷವಂತೆ ಹಾಗೆಯೇ ನಾಲ್ಕು ರೇಖೆಗಳಿದ್ದರೆ ಶತಾಯುಷಿ ಎನ್ನುವ ನಂಬಿಕೆ ಇದೆ. ಆದರೆ ಈ ರೇಖೆ ಎಷ್ಟು ಸ್ಪಷ್ಟವಾಗಿ ಕಾಣುತ್ತದೆ ಎಂಬುದರ ಮೇಲೆ ಸಹ ಇದು ನಿರ್ಧಾರವಾಗುತ್ತದೆ.
ಮಣಿಕಟ್ಟಿನ ಮೊದಲ ರೇಖೆಯಲ್ಲಿದೆ ನಿಮ್ಮ ಆರೋಗ್ಯದ ರಹಸ್ಯ:
ನಿಮಗೆ ಈ ವಿಚಾರ ಗೊತ್ತಿಲ್ಲದಿರಬಹುದು, ನಿಮ್ಮ ಮಣಿಕಟ್ಟಿನ ಮೊದಲ ರೇಖೆ ಬಹಳ ಮುಖ್ಯವಾಗುತ್ತದೆ. ಇದು ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ. ನಿಮ್ಮ ಮಣಿಕಟ್ಟಿನ ರೇಖೆ ಎಲ್ಲಿಯೂ ತುಂಡಾಗದೇ ಸರಿಯಾಗಿ ಇದ್ದರೆ, ನೀವು ಆರೋಗ್ಯಕರ ಜೀವನ ನಡೆಸುತ್ತೀರಿ ಎಂದರ್ಥ. ಈ ರೀತಿಯ ರೇಖೆ ಇದ್ದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಯಾವುದೇ ಸಮಸ್ಯೆ ಬರುವುದಿಲ್ಲ ಎಂದರ್ಥ. ಆದರೆ ಈ ರೇಖೆ ಕಟ್ ಆಗಿದ್ದರೆ ಅವರಿಗೆ ಆರೋಗ್ಯ ಸಮಸ್ಯೆ ಇರುತ್ತದೆ ಎನ್ನಲಾಗುತ್ತದೆ.
ಹಾಗೆಯೇ ಈ ರೇಖೆಯು ಮಹಿಳೆಯರಿಗೆ ಯಾವ ರೀತಿ ಆರೋಗ್ಯ ಸಮಸ್ಯೆ ಇರುತ್ತದೆ ಎಂಬುದನ್ನ ಸಹ ತಿಳಿಸುತ್ತದೆ. ಈ ಶಾಸ್ತ್ರದ ಪ್ರಕಾರ ಮಹಿಳೆಯರ ಮೊದಲ ರೇಖೆ ತುಂಡಾಗಿದ್ದರೆ ಅಥವಾ ವಕ್ರವಾಗಿದ್ದರೆ ಸಂತಾನೋತ್ಪತ್ತಿ ಸಮಸ್ಯೆ ಅಥವಾ ಹೆರಿಗೆಯ ಸಮಯದಲ್ಲಿ ಏನಾದರೂ ತೊಂದರೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಹಾಗೆಯೇ ಪುರುಷರಿಗೆ ಈ ರೇಖೆ ತುಂಡಾಗಿದ್ದರೆ ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ ಬರುತ್ತದೆ.
ಈ ರೀತಿಯಾಗಿ ಹಣ, ಆಸ್ತಿ, ವೃತ್ತಿ, ಮದುವೆ, ಮಕ್ಕಳು, ಆರೋಗ್ಯ ಹೀಗೆ ಜೀವನದ ಪ್ರಮುಖ ಮಾಹಿತಿಯನ್ನು ನಮ್ಮ ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳನ್ನು, ನಮ್ಮ ಕೈ ಮಣಿಕಟ್ಟು ನಲ್ಲಿ ನಿರ್ಮಾಣಗೊಂಡ ಆಕೃತಿಗಳನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ.