Home Entertainment Love Jihad : ಹಿಂದೂ ಯುವಕರ ಮದುವೆಯಾದ ಮುಸ್ಲಿಂ ಯುವತಿಯರು

Love Jihad : ಹಿಂದೂ ಯುವಕರ ಮದುವೆಯಾದ ಮುಸ್ಲಿಂ ಯುವತಿಯರು

Hindu neighbor gifts plot of land

Hindu neighbour gifts land to Muslim journalist

ದಿನಂಪ್ರತಿ ಲವ್ ಜಿಹಾದ್ ಪ್ರಕರಣಗಳು ತೆರೆಮರೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಮತಾಂತರದ ನೆಪದಲ್ಲಿ ಹೆಣ್ಣಿನ ಭಾವನೆಯ ಜೊತೆಗೆ ಆಟವಾಡಿ ಭೀಕರ ಕೃತ್ಯ ಎಸಗಿ ಆಕೆಯನ್ನು ಕೊಲೆ ಮಾಡಲು ಹಿಂದು ಮುಂದು ನೋಡಲಾರರು ಎಂಬುದಕ್ಕೆ ನಿದರ್ಶನಗಳು ಕೂಡ ನಮ್ಮ ಕಣ್ಣ ಮುಂದೆಯೇ ಇವೆ.

ಪ್ರೀತಿ ಪ್ರೇಮ ಪ್ರಣಯ..ಎಂದು ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಯ ಬಲೆಗೆ ಸಿಲುಕಿ ಪ್ರಣಯ ಜೋಡಿಯಂತೆ ಗುರುತಿಸಿಕೊಂಡು ಪಂಜರದ ಹಕ್ಕಿಯಂತೆ ಬಂಧಿಯಾಗಿ ಮತಾಂತರವಾಗಿ ಸಾವಿನ ಕದ ತಟ್ಟಿದ ಅದೆಷ್ಟೋ ಘಟನೆಗಳು ದಿನಂಪ್ರತಿ ವರದಿಯಾಗುತ್ತಲೆ ಇದೆ. ಈ ನಡುವೆ ಮುಸ್ಲಿಂ ಸಮುದಾಯದ ಇಬ್ಬರು ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಪ್ರಕರಣ ವರದಿಯಾಗಿದೆ.

ಹಿಂದೂ ಹುಡುಗಿಯರನ್ನು ತಮ್ಮ ಮೋಹಕ ಮಾತಿನ ಜೊತೆಗೆ ಪ್ರೀತಿಯ ನಾಟಕವಾಡಿ ಮತಾಂತರ ಮಾಡುವ ಪ್ರಕರಣ ಹೆಚ್ಚಾಗಿ ನಡೆಯುತ್ತಿವೆ. ಈ ನಡುವೆ ಬರೇಲಿಯಲ್ಲಿ ಇಬ್ಬರು ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರನ್ನು ವಿವಾಹವಾಗಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಮದಿನಾಥದಲ್ಲಿರುವ ಅಗಸ್ಯ ಮುನು ಆಶ್ರಮದಲ್ಲಿ ಪಂಡಿತ್ ಕೆ.ಕೆ ಶಂಖಧರ್ ಅವರ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಮಹೋತ್ಸವ ಸಮಾರಂಭ ಜರುಗಿದೆ. ವಿವಾಹದ ನಂತರ ಇಬ್ಬರು ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದು, ಇಸ್ಲಾಂ ಧರ್ಮದ ಯುವತಿಯರಾದ ಇರಾಮ್ ಜೈದಿ ತನ್ನ ಹೆಸರನ್ನು ಸ್ವಾತಿ ಎಂದು ಬದಲಾಯಿಸಿಕೊಂಡಿದ್ದು, ಶಹನಾಜ್ ತನ್ನ ಹೆಸರನ್ನು ಸುಮನ್ ಎಂದು ಬದಲಾಯಿಸಿಕೊಂಡಿದ್ದಾರೆ.

ಯುವತಿಯರಾದ ಇರಾಮ್ ಜೈದಿ ಹಾಗೂ ಶಹನಾಜ್ ಅವರು, ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹೆಸರು ಬದಲಾಯಿಸಿಕೊಂಡಿದ್ದಾರೆ. ನಂತರ ವಿವಾಹವಾಗಿ ಹಿರಿಯರ ಆಶೀರ್ವಾದ ಪಡೆದುಕೊಂಡಿದ್ದಾರೆ. ಯುವತಿಯರಿಬ್ಬರು ಕೂಡ ಹಿಂದೂ ಧರ್ಮದ ಆಚರಣೆ ಸಂಪ್ರದಾಯಗಳ ಮೇಲೆ ಅಪಾರ ಗೌರವ ವಿಶ್ವಾಸ ಹೊಂದಿದ್ದು, ಈ ನಡುವೆ ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಗೌರವ ಸಿಗದ ಹಿನ್ನೆಲೆ ಜೊತೆಗೆ ಮುಸ್ಲಿಂ ಯುವಕರು ಬಯಸಿದಾಗೆಲ್ಲಾ ತಲಾಖ್ ನೀಡುವ ಕ್ರಮದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ವಿವಾಹದ ಬಳಿಕ ಸುಮನ್(ಶಹನಾಜ್) ಬರೇಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾಗಿ ಪೋಷಕರು ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಸಹೋದರನಿಂದ ಜೀವ ಬೆದರಿಕೆಯ ಭಯವಿದೆ ಎಂದು ಆತಂಕ ಹೊರ ಹಾಕಿದ್ದಾರೆ. ಈ ಕುರಿತಾಗಿ ಪೊಲೀಸರು ಮತಾಂತರಗೊಂಡು ಮದುವೆಯಾದ ಇಬ್ಬರು ಯುವತಿಯರಿಗೆ ಸಂಪೂರ್ಣ ರಕ್ಷಣೆ ನೀಡುವ ಅಭಯ ನೀಡಿದ್ದಾರೆ.