Home Fashion ಬೈಕ್‌ ಖರೀದಿಯ ಯೋಚನೆಯಲ್ಲಿದ್ದೀರಾ ? ಹಾಗಾದರೆ ಈ ಬೈಕ್‌ ಖರೀದಿಸಿ, 1.24 ಲಕ್ಷ ರಿಯಾಯಿತಿ ಪಡೆಯಿರಿ

ಬೈಕ್‌ ಖರೀದಿಯ ಯೋಚನೆಯಲ್ಲಿದ್ದೀರಾ ? ಹಾಗಾದರೆ ಈ ಬೈಕ್‌ ಖರೀದಿಸಿ, 1.24 ಲಕ್ಷ ರಿಯಾಯಿತಿ ಪಡೆಯಿರಿ

Hindu neighbor gifts plot of land

Hindu neighbour gifts land to Muslim journalist

ನೀವು ಹೊಸ ಬೈಕ್ ಖರೀದಿಸಲು ಯೋಚಿಸುತ್ತಿದ್ದೀರಾ?ಹಾಗಿದ್ರೆ..ಈ ಸುದ್ಧಿ ನೀವು ಗಮನಿಸಲೇಬೇಕು.. ಹೊಸ ವರ್ಷದ ಸಂಭ್ರಮದ ನಡುವೆ ಭರ್ಜರಿ ಆಫರ್ ಜೊತೆಗೆ ದೊಡ್ದ ರಿಯಾಯಿತಿ ದರದಲ್ಲಿ ದ್ವಿಚಕ್ರ ವಾಹನ ನಿಮ್ಮ ಮನೆಗೆ ತರಲು ಇದು ಸುವರ್ಣ ಅವಕಾಶ.. ಯಾಕೆಂದರೆ ಬೈಕ್ ಖರೀದಿ ಮೇಲೆ ನಿಮಗೆ ಸಿಗಲಿದೆ ಬಂಪರ್ ಕೊಡುಗೆ ಹಾಗೂ ದೊಡ್ಡ ರಿಯಾಯಿತಿ. ಹಾಗಿದ್ರೆ.. ಈಗಲೇ ಬುಕ್ ಮಾಡಿ ಬೈಕ್ ಖರೀದಿ ಮಾಡಿ ಆಫರ್ ನಿಮ್ಮದಾಗಿಸಿಕೊಳ್ಳಿ!!!.

ಬೈಕ್ ಖರೀದಿ ಮಾಡುವ ಯೋಜನೆಯಲ್ಲಿದ್ದವರಿಗೆ ಭರ್ಜರಿ ಬಂಪರ್ ಆಫರ್… ಯಾರಿಗುಂಟು ಯಾರಿಗಿಲ್ಲ ಅನ್ನೋ ಹಾಗೇ.. ಈ ರೀತಿ ಆಫರ್​ ನಿಮಗೆ ಈ ಹಿಂದೆಯೂ ಸಿಕ್ಕಿರಲಾರದು. ಈ ಬೈಕ್ ಖರೀದಿಸಿದರೆ ಬರೋಬ್ಬರಿ 1.24 ಲಕ್ಷ ರಿಯಾಯಿತಿ ನಿಮ್ಮದಾಗಿಸಿಕೊಳ್ಳಬಹುದು.

ಈಗಾಗಲೇ ಹಲವು ಕಂಪನಿಗಳು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮದ ನಡುವೆ ಅನೇಕ ಕೊಡುಗೆಗಳನ್ನು ಗ್ರಾಹಕರಿಗೆ ನೀಡಿವೆ. ಇದೀಗ ಈ ಕಂಪನಿಗಳ ಪಟ್ಟಿಗೆ ಕವಾಸಕಿ ಕೂಡ ಸೇರ್ಪಡೆಗೊಂಡಿದೆ. ಈ ಕಂಪನಿಯು ತನ್ನ ಬೈಕ್‌ಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತಿದ್ದು, ಅದರಲ್ಲೂ ಕೂಡ ಕವಾಸಕಿ ಡಬ್ಲ್ಯು800 ರೆಟ್ರೋ ಕ್ರೂಸರ್ ಬೈಕ್ ಮೇಲೆ ಭರ್ಜರಿ ಆಫರ್ ದೊರೆಯಲಿದೆ.

ಕವಾಸಕಿ W800 ರೆಟ್ರೋ ಕ್ರೂಸರ್ ಮೋಟಾರ್ ಸೈಕಲ್ ಎಕ್ಸ್ ಶೋ ರೂಂ ಬೆಲೆ ರೂ. 7.33 ಲಕ್ಷವಾಗಿದ್ದು, ಇದು 773 ಸಿಸಿ ಎಂಜಿನ್ ಹೊಂದಿದ್ದು, ಇದರಲ್ಲಿ ಏರ್ ಕೂಲ್ಡ್ ಫ್ಯೂಲ್ ಇಂಜೆಕ್ಟೆಡ್ ಎಂಜಿನ್ ಅಳವಡಿಸಲಾಗಿದೆ. ಇದು 47.5 HP ಪವರ್ ಮತ್ತು 62.9 Nm ಟಾರ್ಕ್ ಅನ್ನು ಒಳಗೊಂಡಿವೆ.

ಈ ಬೈಕ್ ಐದು ಗೇರ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ. ಸುರಕ್ಷತೆಯ ದೃಷ್ಟಿಯಲ್ಲಿ ಗಮನ ಹರಿಸಿದರೆ, ಈ ಬೈಕ್ ಎಲ್ ಇಡಿ ಹೆಡ್ ಲೈಟ್, ಸ್ಲಿಪ್ಪರ್ ಕ್ಲಚ್, ಡ್ಯುಯಲ್ ಚಾನೆಲ್ ಎಬಿಎಸ್ ಮೊದಲಾದ ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ನೀವು ಈ ಕವಾಸಕಿ W800 ರೆಟ್ರೋ ಬೈಕ್ ಕೊಂಡು ಕೊಂಡರೆ ಬರೋಬ್ಬರಿ 1.25 ಲಕ್ಷದವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ಈ ಆಫರ್ ಕೆಲವೇ ದಿನಗಳವರೆಗೆ ಮಾನ್ಯವಾಗಿರಲಿದೆ ಎಂಬುದನ್ನು ಗಮನಿಸಬೇಕು. ಈ ಡೀಲ್ ಅನ್ನು ಡಿಸೆಂಬರ್ 31 ರವರೆಗೆ ಮಾತ್ರ ಪಡೆಯಬಹುದಾಗಿದ್ದು, ಹಾಗಾಗಿ, ನಿಮಗೆ ಇನ್ನೂ ಕೇವಲ ಒಂದು ವಾರ ಮಾತ್ರ ಸಮಯವಿದೆ.

ಕವಾಸಕಿ ನಿಂಜಾ 300 ಬೈಕ್ ಕೂಡ ಆಫರ್ ಮೂಲಕ ಗ್ರಾಹಕರಿಗೆ ದೊರೆಯಲಿದ್ದು, ಇದರ ಮೇಲೆ ರೂ.10 ಸಾವಿರದವರೆಗೆ ರಿಯಾಯಿತಿ ಲಭ್ಯವಾಗಲಿದೆ. ಈ ಬೈಕ್ 296 ಸಿಸಿ ಪ್ಯಾರಲಲ್ ಟ್ವಿನ್ ಲಿಕ್ವಿಡ್ ಕೂಲ್ಡ್ 4 ಸ್ಟ್ರೋಕ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, ಇದು ಆರು ಗೇರ್‌ಗಳನ್ನು ಒಳಗೊಂಡಿವೆ.

ಅರೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದ್ದು, ಪೆಟಲ್ ಬ್ರೇಕ್ಗಳು ​​ಡ್ಯುಯಲ್ ಚಾನೆಲ್ ಎಬಿಎಸ್ ಆಗಿದ್ದು, ಹಾಗಾಗಿ ಆಫರ್ ಪಡೆಯಲು ಯೋಚಿಸುತ್ತಿರುವವರು ತಕ್ಷಣವೇ ಈ ಬೈಕ್ ಗಳಲ್ಲಿ ನಿಮ್ಮ ನೆಚ್ಚಿನ ಬೈಕ್ ಅನ್ನು ಆಫರ್ ಜೊತೆಗೆ ಖರೀದಿಸಿ ಆಫರ್ ನಿಮ್ಮದಾಗಿಸಿಕೊಳ್ಳಬಹುದು.

ಇದರ ಜೊತೆಗೆ, ಕವಾಸಕಿ Z650 ಬೈಕ್ ಮೇಲೆ ಆಫರ್ ಇದ್ದು, ಇದರ ಮೇಲೆ ರೂ. 35 ಸಾವಿರದವರೆಗೆ ರಿಯಾಯಿತಿ ದೊರೆಯಲಿದೆ. ಈ ಬೈಕ್‌ನ ತೂಕ 191 ಕೆ.ಜಿ.ಆಗಿದ್ದು, 15 ಲೀಟರ್ ಪೆಟ್ರೋಲ್ ಅನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರ ಎಕ್ಸ್ ಶೋ ರೂಂ ದರ ರೂ. 6.43 ಲಕ್ಷ ಆಗಿದೆ. ಈ ಬೈಕ್ 649 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು ,ಆರು ಗೇರ್‌ಗಳಿವೆ. ಇದು ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ ಹೊಂದಿದ್ದು, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿವೆ.