High Cholesterol ನಿಯಂತ್ರಣ ಮಾಡಲು ಈ ಡ್ರೈಫ್ರೂಟ್ ಗಳು ಸಹಕಾರಿ

ಆಧುನಿಕ ಜಗತ್ತಿನಲ್ಲಿ ದೈಹಿಕ ಚಟುವಟಿಕೆಗಳು ತೀರಾ ಬಹಳಷ್ಟು ಕಡಿಮೆಯಾಗಿವೆ. ಜೊತೆಗೆ ಕಲಬೆರಕೆ ಇಲ್ಲದ ಆಹಾರ ದೊರೆಯುವುದು ಅತ್ಯಂತ ವಿರಳವಾಗಿದೆ. ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಸಿಹಿ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅಪಧಮನಿಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಪ್ರಸ್ತುತ ಮನುಷ್ಯ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವುದು ನಮಗೆ ಗೊತ್ತಿರುವ ವಿಚಾರ. ಮುಖ್ಯವಾಗಿ ಕೃತಕ ಸಿಹಿಕಾರಕಗಳು ಆರೋಗ್ಯಕ್ಕೆ ಬಹಳ ಪರಿಣಾಮ ಬೀರುವುದಲ್ಲದೆ ದೇಹದಲ್ಲಿ ಕೊಲೆಸ್ಟ್ರಾಲ್‌ನ ಹೆಚ್ಚಳ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ. ಹೀಗಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ತುಂಬಾ ಅವಶ್ಯಕ. ಇದಕ್ಕಾಗಿ ನೀವು ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಡ್ರೈ ಫ್ರೂಟ್ ಗಳನ್ನು ಸೇರಿಸಿಕೊಳ್ಳುವುದು ಸೂಕ್ತ.

ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಹೇಳುವ ಪ್ರಕಾರ, ನಾವು ಕೆಲ ವಿಶೇಷ ಡ್ರೈ ಫ್ರೂಟ್ ಗಳನ್ನು ಸೇವಿಸಿದರೆ, ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.

ಈ ಕೆಳಗಿನ ಡ್ರೈ ಫ್ರೂಟ್ ಗಳನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ

  • ನೀವು ಫಿಟ್ ಆಗಿರಲು ಬಯಸಿದರೆ, ಇಂದಿನಿಂದಲೇ ವಾಲ್‌ನಟ್‌ಗಳನ್ನು ಸೇವಿಸಲು ಪ್ರಾರಂಭಿಸಿ, ಏಕೆಂದರೆ ತನ್ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳು ಇದರಲ್ಲಿ ಕಂಡುಬರುತ್ತವೆ, ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
  • ಇತರೆ ಡ್ರೈ ಫ್ರೂಟ್ಸ್ ಗೆ ಹೋಲಿಸಿದರೆ ಶೇಂಗಾ ಖರೀದಿಸುವುದು ಜೇಬಿಗೆ ಹೆಚ್ಚಿನ ಹೊರೆ ಎನಿಸುವುದಿಲ್ಲ. ಹೀಗಾಗಿ ಎಲ್ಲರೂ ಸುಲಭವಾಗಿ ಅದನ್ನು ಸೇವಿಸಬಹುದು. ದಿನನಿತ್ಯದ ತಿಂಡಿಗಳಲ್ಲಿ ಶೇಂಗಾ ತಿಂದರೆ ಕೊಲೆಸ್ಟ್ರಾಲ್ ಕಡಿಮೆ ಆಗುವುದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳೂ ದೂರಾಗುತ್ತವೆ.
  • ಪಿಸ್ತಾ ಒಂದು ಅತ್ಯಂತ ಆರೋಗ್ಯಕರ ಡ್ರೈ ಫ್ರೂಟ್ ಆಗಿದೆ, ಅದರ ರುಚಿ ಅನೇಕ ಜನರನ್ನು ಆಕರ್ಷಿಸುತ್ತದೆ. ಪಿಸ್ತಾ ತಿನ್ನುವುದರಿಂದ ದೀರ್ಘಕಾಲದವರೆಗೆ ಹಸಿವಿನ ಅನುಭವ ಉಂಟಾಗುವುದಿಲ್ಲ, ಇದರಿಂದಾಗಿ ಬೊಜ್ಜು ಮತ್ತು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿತ್ತವೆ.
  • ಬಾದಾಮಿಯನ್ನು ಆರೋಗ್ಯದ ಕೀಲಿ ಎಂದು ಪರಿಗಣಿಸಲಾಗುತ್ತದೆ, ಬಾದಾಮಿಯನ್ನು ನೆನೆಹಾಕಿ ನೀವು ಸೇವಿಸಬಹುದು. ಇದು ಅಮೈನೋ ಆಮ್ಲವನ್ನು ಹೊಂದಿರುತ್ತದೆ, ಇದರಿಂದಾಗಿ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ನೀವು ಪ್ರತಿದಿನ ಒಂದು ಹಿಡಿ ಬಾದಾಮಿಯನ್ನು ಸೇವಿಸಿದರೆ, ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ತ್ವರಿತವಾಗಿ ಕಡಿಮೆಯಾಗುತ್ತದೆ.

ಈ ರೀತಿಯಾಗಿ ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಅವರು ಕೆಲ ವಿಶೇಷ ಡ್ರೈ ಫ್ರೂಟ್ ಗಳನ್ನು ಸೇವಿಸಿದರೆ, ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ ಎಂದು ಅಧ್ಯಯನ ಮೂಲಕ ಕಂಡು ಕೊಂಡಿದ್ದಾರೆ.

Leave A Reply

Your email address will not be published.