

ರಕ್ತದ ಸಕ್ಕರೆ ನಿಯಂತ್ರಿಸಲು ಕೆಲವು ತರಕಾರಿ ಸೇವನೆ ಸಹಕಾರಿ. ಹಾರ್ವರ್ಡ್ ವರದಿ ಪ್ರಕಾರ, ಪ್ರತಿದಿನ ವಿವಿಧ ರೀತಿಯ ತರಕಾರಿ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆ ಅಪಾಯ ಶೇ. 4 ರಷ್ಟು ಕಡಿಮೆ ಮಾಡಬಹುದಂತೆ. ಜೊತೆಗೆ ತರಕಾರಿಗಳು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತವೆ. ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು, ಮಧುಮೇಹ, ಸ್ಥೂಲಕಾಯ, ಹೊಟ್ಟೆ ಕಾಯಿಲೆ, ಕಣ್ಣಿನ ಸಮಸ್ಯೆ ಕಡಿಮೆ ಮಾಡಲು ಚಿಕಿತ್ಸೆ ನೀಡಲು ಹಸಿರು ಸೊಪ್ಪು ತರಕಾರಿ ಸೇವನೆ ಪ್ರಯೋಜನಕಾರಿ.
ಇಷ್ಟೆಲ್ಲಾ ತರಕಾರಿಗಳು ಆರೋಗ್ಯಕ್ಕೆ ಪ್ರಯೋಜನದ ಜೊತೆಗೆ ಕೆಲವು ಅಡ್ಡ ಪರಿಣಾಮವನ್ನೂ ಉಂಟು ಮಾಡುತ್ತವೆ. ಕೆಲವು ತರಕಾರಿಗಳಲ್ಲಿ ಅನೇಕ ರೀತಿಯ ವಿಷಗಳಿವೆ. ಇದರ ತಪ್ಪಾದ ಬಳಕೆ ಅನೇಕ ಗಂಭೀರ ಸಮಸ್ಯೆ ಉಂಟು ಮಾಡುತ್ತದೆ. ದಿನನಿತ್ಯ ಸೇವಿಸುವ ತರಕಾರಿಗಳಲ್ಲಿ ಯಾವ ರೀತಿಯ ವಿಷಕಾರಿ ವಸ್ತುಗಳಿವೆ ಎಂದು ಇಲ್ಲಿ ನೋಡೋಣ.
ಕ್ಯಾರೆಟ್ ಮತ್ತು ಅಜ್ವೈನ್ ತರಕಾರಿಗಳಲ್ಲಿ Furocoumarins ಎಂಬ ವಿಷಕಾರಿ ವಸ್ತುವಿದೆ ಎಂದು ಡಬ್ಲು ಎಚ್ ಒ ಹೇಳಿದೆ. ಕ್ಯಾರೆಟ್ ಮತ್ತು ಅಜ್ವೈನ್ ನ್ನು ಕಚ್ಚಾ ಅಥವಾ ಅತಿಯಾಗಿ ತಿಂದರೆ ಹೊಟ್ಟೆ ಮತ್ತು ಕರುಳಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚುತ್ತದೆ. ಈ ವಿಷವು ನಿಂಬೆ ಮತ್ತು ದ್ರಾಕ್ಷಿ ಸೇರಿ ಕೆಲ ಸಿಟ್ರಸ್ ಹಣ್ಣುಗಳಲ್ಲಿಯೂ ಇದೆ.
ಅನೇಕ ವಿಧದ ದ್ವಿದಳ ಧಾನ್ಯಗಳಲ್ಲಿ ಲೆಕ್ಟಿನ್ ಎಂಬ ವಿಷವಿದೆ. ಕೆಂಪು ಕಿಡ್ನಿ ಬೀನ್ಸ್ ಹೆಚ್ಚಿನ ಪ್ರಮಾಣ ಹೊಂದಿದೆ. ಹಸಿಯಾಗಿ ಕೆಂಪು ಕಿಡ್ನಿ ಬೀನ್ಸ್ ನ 5 ಹಸಿ ಕಾಳು ತಿಂದರೆ ತೀವ್ರ ಹೊಟ್ಟೆ ನೋವು, ವಾಂತಿ ಮತ್ತು ಭೇದಿ ಆಗುತ್ತದೆ. ಒಣಗಿದ ಕಾಳುಗಳನ್ನು ಕನಿಷ್ಠ 12 ಗಂಟೆ ನೆನೆಸಿ, ನಂತರ ಕನಿಷ್ಠ 10 ನಿಮಿಷ ಕುದಿಸಿ ಸೇವಿಸಿ.
ಕಾಡು ಅಣಬೆಯಲ್ಲಿ ಮಸ್ಕಿಮೋಲ್ ಮತ್ತು ಮಸ್ಕರಿನ್ ಎಂಬ ವಿಷಕಾರಿ ಅಂಶವಿದೆ. ಇದು ವಾಂತಿ, ಅತಿಸಾರ, ಹೊಟ್ಟೆ ಮತ್ತು ಕರುಳಿನ ಅಸ್ವಸ್ಥತೆ, ಜೊಲ್ಲು ಸುರಿಸುವುದು ಮತ್ತು ಭ್ರಮೆ ಸಮಸ್ಯೆ ಉಂಟು ಮಾಡುತ್ತದೆ. ಅಣಬೆ ತಿಂದ 24 ಗಂಟೆಯೊಳಗೆ ಲಕ್ಷಣಗಳು ಕಂಡು ಬರುತ್ತವೆ.
ಸೋಲನೈನ್ ಮತ್ತು ಚಾಕೋನೈನ್ ಎಂಬ ವಿಷಕಾರಿ ಅಂಶವು ಟೊಮೆಟೊ, ಆಲೂಗಡ್ಡೆ ಮತ್ತು ಬಿಳಿಬದನೆ ಸಸ್ಯಗಳಲ್ಲಿದೆ. ಮೊಳಕೆಯೊಡೆದ ಆಲೂಗಡ್ಡೆ ಮತ್ತು ಹಸಿರು ಚರ್ಮದ ಆಲೂಗಡ್ಡೆ, ಹಸಿರು ಟೊಮೆಟೊಗಳಲ್ಲಿ ಹೆಚ್ಚಿರುತ್ತೆ. ವಿಷಕಾರಿ ಅಂಶ ಕಡಿಮೆ ಮಾಡಲು ಅವುಗಳನ್ನು ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಶೇಖರಿಸಿಡಿ. ಅವುಗಳ ಹಸಿರು ಭಾಗ ಅಥವಾ ಮೊಗ್ಗು ಸೇವಿಸಬೇಡಿ.













