ಸ್ವಪ್ನದಲ್ಲಿ ಆನೆ ಕಂಡರೆ ಅದರರ್ಥ ಏನು? ಗೊತ್ತಿದೆಯೇ?

ಪ್ರತಿಯೊಬ್ಬರೂ ಕನಸು ಕಾಣೋದು ಸಹಜ. ಆದರೆ, ಕಂಡ ಕನಸೆಲ್ಲ ನನಸಾಗಲು ಸಾಧ್ಯವಿಲ್ಲ. ಹಾಗೆಯೇ ಕೆಲವರು ಕನಸು ಕಂಡಾಗ ತಿರುಕನ ಕನಸಿನಂತೆ ಪ್ರಯತ್ನ ಪಡದೇ ಕೋಟ್ಯಾಧಿಪತಿ ಆಗುವ ಕನಸು ಕಾಣುವವರು ಇದ್ದಾರೆ.

ಇದರ ಜೊತೆಗೆ ಅನವರತ ಶ್ರಮ ವಹಿಸುವವರಿಗೆ ನೆಮ್ಮದಿಯ ನಿದ್ದೆಯೇ ಜೀವನ. ಆದ್ರೆ, ನಮಗೆ ಬೀಳುವ ಕನಸಲ್ಲಿ ಕೂಡ ಶುಭ ಶಕುನ ಇಲ್ಲವೇ ಅಶುಭ ಎಂಬ ಮಾತುಗಳು ನಾವು ಕೇಳಿರುತ್ತೇವೆ.

ನಾವು ಆಲೋಚನೆ ಮಾಡುವ ವಿಚಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಾಗ ಆ ವಿಚಾರದ ಕುರಿತ ಕನಸು ಬೀಳೋದು ಸಹಜ. ಪ್ರತಿಯೊಂದು ಕನಸು ನಮ್ಮ ಭವಿಷ್ಯಕ್ಕೆ ಸಂಬಂಧಿಸಿರುತ್ತದೆ.ಇದರ ಬಗ್ಗೆ ವಿವರವಾದ ಮಾಹಿತಿಯನ್ನು ಸ್ವಪ್ನ ಶಾಸ್ತ್ರದಲ್ಲಿ ನೀಡಲಾಗಿದೆ.

ನಿಮ್ಮ ಕನಸಿನಲ್ಲಿ ನೀವು ಅನೇಕ ಬಾರಿ ಪ್ರಾಣಿಗಳನ್ನು ಕಂಡಿರುತ್ತೀರಾ?? ಅಲ್ಲವೆ!! ಆದರೆ, ಅವುಗಳಿಗೂ ಕೆಲವು ಅರ್ಥಗಳಿವೆ ಎಂಬ ವಿಚಾರ ನಿಮಗೆ ತಿಳಿದಿದೆಯ? ಆನೆಯನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಕನಸಿನಲ್ಲಿ ಆನೆಯನ್ನು ನೋಡುವುದರ ಹಿಂದೆಯೂ ಸಹ, ಜೀವನದ ಸಂಕೇತವು ಅಡಗಿರುತ್ತದೆ. ಕನಸಿನಲ್ಲಿ ಆನೆ ಕಾಣಿಸಿಕೊಂಡರೆ, ಅದರ ಅರ್ಥವೇನು? ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಕನಸಿನಲ್ಲಿ ಸ್ವಿಂಗ್ ಆನೆ ಕಾಣಿಸಿಕೊಂಡರೆ, ನೀವು ಎಲ್ಲಾ ರೀತಿಯ ಸಮಸ್ಯೆಗಳನ್ನು ತೊಡೆದುಹಾಕಲಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಕನಸಿನಲ್ಲಿ ಆನೆಗಳ ಹಿಂಡನ್ನು ನೋಡುವುದು ಹಣದ ಲಾಭವನ್ನು ಸೂಚಿಸುತ್ತದೆ.

ಕನಸಿನ ವಿಜ್ಞಾನದ ಪ್ರಕಾರ, ಆನೆಯ ಕನಸು ಕಾಣುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದ್ದು, ಈ ಕನಸನ್ನು ನೋಡುವುದರಿಂದ ನೀವು ಶೀಘ್ರದಲ್ಲೇ ಗೌರವವನ್ನು ಪಡೆಯಲಿದ್ದೀರಿ ಜೊತೆಗೆ ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲಿದೆ ಎಂಬುದನ್ನು ಸೂಚಿಸುತ್ತದೆ.

ನಿಮ್ಮ ಕನಸಿನಲ್ಲಿ ಜೋಡಿ ಆನೆಗಳನ್ನು ಕಂಡರೆ, ಎರಡು ಆನೆ ಒಟ್ಟಿಗೆ ಕಾಣಿಸಿಕೊಂಡರೆ, ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷ ಬರಲಿದೆ ಎಂಬ ಅರ್ಥವನ್ನು ನೀಡುತ್ತದೆ. ಗರ್ಭಿಣಿ ಮಹಿಳೆ ತನ್ನ ಕನಸಿನಲ್ಲಿ ಆನೆಯನ್ನು ನೋಡಿದರೆ, ಅವಳ ಮಗು ಅದೃಷ್ಟಶಾಲಿಯಾಗಲಿದೆ ಎಂಬ ಮಾತಿದೆ.


ಮತ್ತೊಂದೆಡೆ, ನಿಮ್ಮ ಕನಸಿನಲ್ಲಿ ನೀವು ಆನೆಯ ಮೇಲೆ ಸವಾರಿ ಮಾಡುವಂತೆ ಸ್ವಪ್ನ ಕಂಡರೆ ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸನ್ನು ನೋಡುವುದು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ತರುತ್ತದೆ.

ಮತ್ತೊಂದೆಡೆ, ದೇವರಾಜ ಇಂದ್ರನ ವಾಹನ ಐರಾವತವನ್ನು ಕನಸಿನಲ್ಲಿ ಕಂಡರೆ, ಜೀವನದಲ್ಲಿ ದೊಡ್ಡ ಸಾಧನೆಯನ್ನು ಸಾಧಿಸಲಿದ್ದಿರಿ ಎಂಬ ಸೂಚನೆಯಾಗಿದೆ.

Leave A Reply

Your email address will not be published.