300 ರೂಪಾಯಿಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ | ಸಹೋದರನನ್ನೇ ಕೊಂದ ತಮ್ಮ!

ಮನೆಯಲ್ಲಿ ಅಣ್ಣ- ತಮ್ಮ ಅಂದ್ರೆ ಸಣ್ಣ ಪುಟ್ಟ ಜಗಳಗಳು ಇದ್ದೇ ಇರುತ್ತವೆ. ಕೆಲವೊಂದು ಬಾರಿ ಈ ಜಗಳಗಳು ಕೊಲೆಯ ಮಟ್ಟಕ್ಕೂ ಹೋಗಿರುವ ಎಷ್ಟೋ ಘಟನೆಗಳು ಕೂಡ ಇವೆ. ಹಾಗೇ ಇಲ್ಲಿ ಸಹೋದರರ ನಡುವೆ ಕೇವಲ 300 ರೂಪಾಯಿ ವಿಷಯಕ್ಕೆ ಜಗಳ ಉಂಟಾಗಿ ಕೊಲೆಯಲ್ಲಿ ಕೊನೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಈ ಆಘಾತಕಾರಿ ಘಟನೆ ಇಲ್ಲಿನ ಕುಪ್ಪಾ ಗ್ರಾಮದಲ್ಲಿ ನಡೆದಿದ್ದು,
ರಮೇಶ್ ಕಕೋಡಿಯಾ ಮತ್ತು ಸುಮನ್ ಸಿಂಗ್ ಕಕೋಡಿಯಾ ಸಹೋದರರಾಗಿದ್ದು, ಆರೋಪಿ ರಮೇಶ್ ಪತ್ನಿಯಿಂದ ಸುಮನ್ 300 ರೂಪಾಯಿ ಸಾಲ ಪಡೆದಿದ್ದರು.

ಈ ವಿಷಯಕ್ಕೆ ರಮೇಶ್ ಮತ್ತು ಸುಮನ್ ನಡುವೆ ಮಾತಿಗೆ ಮಾತು ಬೆಳೆದಿದೆ. ನಂತರ ಜಗಳ ಮಿತಿಮೀರಿದ್ದು, ರಮೇಶ್​ ಅಲ್ಲೆ ಇದ್ದ ಕಬ್ಬಿಣದ ಪೈಪ್​ನಿಂದ ಸುಮನ್​ ತಲೆಗೆ ಜೋರಾಗಿ ಹೊಡೆದಿದ್ದಾರೆ. ತಲೆಗೆ ಬಲವಾಗಿ ಹೊಡೆತ ಬಿದ್ದಿದ್ದರಿಂದ ಸುಮನ್ ನೆಲಕ್ಕೆ​ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸಹೋದರ ಸಾವನ್ನಪ್ಪಿದ್ದನ್ನು ಕಂಡು ರಮೇಶ್​ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಆತನ ಜಾಡು ಹಿಡಿದು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಹಾಗೇ ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಅಪಾಲ ಸಿಂಗ್ ತಿಳಿಸಿದ್ದಾರೆ.

Leave A Reply

Your email address will not be published.