Skin Care Tips: ನಿಮ್ಮ ಮುಖದ ಕಾಂತಿ ಹೆಚ್ಚಾಗಲು ಈ ವಸ್ತುಗಳನ್ನು ಬಳಸ್ತಿರಾ? ಹಾಗಿದ್ರೆ ಈ ಕೂಡಲೇ ನಿಲ್ಲಿಸಿ
ಪ್ರತಿಯೊಬ್ಬರು ತಮ್ಮ ಮುಖದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಯಾಕಂದ್ರೆ ಎಲ್ಲರಲ್ಲೂ ತಾನು ಚೆನ್ನಾಗಿ ಕಾಣಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಅದರಲ್ಲೂ ಹೊಳೆಯುವ ಚರ್ಮ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಹಾಗೇ ಚರ್ಮದ ಡೆಡ್ ಸ್ಕಿನ್ ತೆಗೆಯಲು, ಚರ್ಮದ ಸುಕ್ಕು ತಡೆಗಟ್ಟಲು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸಲು ಹಲವು ಬಗೆಯ ರಾಸಾಯನಿಕಯುಕ್ತ ಕ್ರೀಮ್ ಗಳು ಹಾಗೂ ಸೀರಂಗಳನ್ನು ಬಳಸುತ್ತಾರೆ. ಆದರೆ ಇದರ ಬಳಕೆ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೆಟಿನಾಯ್ಡ್ಗಳು ಸಾಕಷ್ಟು ಜನಪ್ರಿಯವಾಗಿವೆ. ಜನರು ರೆಡಿನಾಯ್ಡ್ ಹೊಂದಿರುವ ಕ್ರೀಂ, ಸೇರಂ ಗಳ ಖರೀದಿಗೆ ಮುನ್ನುಗ್ಗುತ್ತಿದ್ದಾರೆ. ಬಹಳಷ್ಟು ಜನರು ಚರ್ಮದ ರಕ್ಷಣೆ ಮತ್ತು ಸೌಂದರ್ಯದ ಕುರಿತು ವೀಡಿಯೊಗಳನ್ನು ವೀಕ್ಷಿಸಿ, ಅದರಿಂದ ಪ್ರಭಾವಿತರಾಗಿ, ತಮ್ಮ ಚರ್ಮಕ್ಕೆ ಹೊಂದಿಕೆಯಾಗದ ಉತ್ಪನ್ನಗಳನ್ನು ಖರೀದಿಸುತ್ತಾರೆ. ಅದರಲ್ಲಿ 0.05 ರಿಂದ 10 ಪ್ರತಿಶತದಷ್ಟು ರೆಟಿನಾಯ್ಡ್ಗಳನ್ನು ಹೊಂದಿರುವ ಉತ್ಪನ್ನಗಳಾಗಿವೆ. ಆದರೆ ಇಂತಹ ಉತ್ಪನ್ನಗಳನ್ನು ಬಳಸುವ ಮುನ್ನ ವೈದ್ಯರ ಸಲಹೆ ಅಗತ್ಯವಾಗಿ ಪಡೆಯಬೇಕು ಎಂದು ಡಾ. ಜಂಗಿಡ್ ಹೇಳುತ್ತಾರೆ.
ಹಾಗೇ ಅತಿಯಾಗಿ ಎಕ್ಸ್ಫೋಲಿಯೇಟಿಂಗ್ ಮಾಡುವುದು ತಪ್ಪು. ಅಂದ್ರೆ ಯಾವುದೇ ಕ್ರೀಮ್ ಅಥವಾ ಹರಳನ್ನು ತೆಗೆದುಕೊಂಡು ಒಣ ಅಥವಾ ಡೆಡ್ ಸೆಲ್ಸ್ ಅನ್ನು ತೆಗೆದುಹಾಕುವುದು. ಏಕೆಂದರೆ ಒಣ ಮತ್ತು ಒರಟಾದ ಚರ್ಮವನ್ನು ಹೊಂದಿರುವ ಜನರು ಹೆಚ್ಚಾಗಿ ತುರಿಕೆಯನ್ನು ಅನುಭವಿಸುತ್ತಾರೆ. ಇನ್ನೂ, ಈ ರೆಟಿನಾಯ್ಡ್ಗಳು ಚರ್ಮದಿಂದ ಡೆಡ್ ಸೆಲ್ಸ್ ಅನ್ನು ತೆಗೆದುಹಾಕುತ್ತದೆ ಹಾಗಾಗಿ ಇದನ್ನು ಹೆಚ್ಚಾಗಿ ಅಪ್ಲೈ ಮಾಡುತ್ತಾರೆ. ಆದರೆ ಇದರ ಅತಿಯಾದ ಬಳಕೆ ಚರ್ಮಕ್ಕೆ ಒಳ್ಳೆಯದಲ್ಲ.
ಇನ್ನೂ, ಆರೋಗ್ಯಕರ ಸ್ಕಿನ್ ಕೇರ್ ಅಭ್ಯಾಸಗಳ ಬಗ್ಗೆ ಡಾ. ಜಂಗಿಡ್ ಅವರು ಕೆಲವು ಸಲಹೆಗಳನ್ನ ನೀಡಿದ್ದಾರೆ. ಪ್ರತಿದಿನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ಹಾಗೂ ಚರ್ಮವನ್ನು ಒಣಗದಂತೆ ಹೈಡ್ರೇಟ್ ಆಗಿ ಇಟ್ಟುಕೊಳ್ಳಿ. ಹಾಗೇ ಪ್ರತಿಯೊಬ್ಬ ಮನುಷ್ಯನಿಗೂ ಹೊಳೆಯುವ ಚರ್ಮಕ್ಕಿಂತ ಆರೋಗ್ಯಕರವಾಗಿ ಕಾಣುವ ಚರ್ಮ ಮುಖ್ಯ. ಹಾಗಾಗಿ ವರ್ಷಕ್ಕೆ 2-3 ಬಾರಿ ಚರ್ಮಶಾಸ್ತ್ರಜ್ಞರನ್ನು ಭೇಟಿ ಮಾಡಿದರೆ ಉತ್ತಮ.
ಹಾಗೇ ಪ್ರಭಾವಿಗಳು ಮತ್ತು ಇನ್ಸ್ಟಾಗ್ರಾಮರ್ಗಳಿಂದ ಸಲಹೆಗಳನ್ನು ಪಡೆಯುವುದು ತಪ್ಪು. ಬದಲಾಗಿ ನೀವು ಚರ್ಮರೋಗ ವೈದ್ಯರನ್ನು ಭೇಟಿಯಾಗಿ, ಆಗ ಅವರು ನಿಮ್ಮ ಚರ್ಮಕ್ಕೆ ಸೂಕ್ತವಾದ ಕ್ರೀಂ ಗಳನ್ನು ಬಳಸಲು ಹಾಗೂ ಇನ್ನೂ ಇತರ ಚರ್ಮಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಹೇಳುತ್ತಾರೆ ಎಂದು ವೈದ್ಯರು ಹೇಳುತ್ತಾರೆ.