ಪುರುಷರೇ ನಿಮ್ಮ ಈ ಸಮಸ್ಯೆಗೆ ಹಾಲು ಮತ್ತು ಖರ್ಜೂರ ಸೂಪರ್! ಬನ್ನಿ ಹೇಗೆಂದು ತಿಳಿಯೋಣ!
ಚಳಿಗಾಲದಲ್ಲಿ ಬಹಳ ಬೇಗ ನಮ್ಮ ಆರೋಗ್ಯ ಹದಗೆಡುತ್ತದೆ. ಹಾಗಾಗಿ ಗಮನ ಕೊಡುವುದು ಬಹಳ ಮುಖ್ಯ. ನಮ್ಮ ದಿನಚರಿ ಹಾಗೂ ನಾವು ಸೇವಿಸುವ ಆಹಾರ ಕ್ರಮದ ಮೇಲೆ ನಮ್ಮ ಆರೋಗ್ಯ ನಿಂತಿದೆ. ಸಮಯಕ್ಕೆ ಸರಿಯಾಗಿ ನಾವು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು, ಇಲ್ಲವಾದರೆ ಗಂಭೀರ ಕಾಯಿಲೆಗಳು ಉಂಟಾಗಬಹುದು. ಡ್ರೈ ಫ್ರೂಟ್ಸ್ ಗಳು ನಮಗೆ ಎಂದಿಗೂ ಆರೋಗ್ಯಕರವೇ. ಎಲ್ಲಾ ವಯಸ್ಸಿನವರಿಗೂ ಡ್ರೈ ಫ್ರೂಟ್ಸ್ ಸೇವನೆ ತುಂಬಾ ಒಳ್ಳೆಯದು.
ನೀವು ದೈಹಿಕವಾಗಿ ದೌರ್ಬಲ್ಯರಾಗಿದ್ದರೆ ಹಾಲು ಮತ್ತು ಖರ್ಜೂರವನ್ನು ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು. ಈ ಎರಡು ವಸ್ತುಗಳ ಸೇವನೆಯು ಪುರುಷರಿಗೆ ತುಂಬಾ ಉಪಯುಕ್ತವಾಗಿದೆ. ಹೇಗೆ ಅಂತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ಖರ್ಜೂರದಲ್ಲಿ ಸಾಕಷ್ಟು ಕ್ಯಾಲ್ಸಿಯಂ, ಫೈಬರ್, Zinc, ಮೆಗ್ನಿಸಿಯಮ್ ಮತ್ತು ಕಬ್ಬಿಣಗಳ ಅಂಶಗಳು ಹೇರಳವಾಗಿದೆ. ಇದಲ್ಲದೆ, ಇದು ವಿಟಮಿನ್ ಎ, ಸಿ, ಇ, ಕೆ, ಬಿ2, ಬಿ 6, ನಿಯಾಸಿನ್ ಮತ್ತು ಥಯಾಮಿನ್ ಸೇರಿದಂತೆ ಅನೇಕ ವಿಟಮಿನ್ ಗಳನ್ನೂ ಹೊಂದಿದೆ. ಇದು ಪುರುಷರಲ್ಲಿ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಖರ್ಜೂರವನ್ನು ಹಾಲಿನಲ್ಲಿ ಕುದಿಸಿ ಸೇವಿಸುವುದರಿಂದ, ಅನೇಕ ಗಂಭೀರ ಕಾಯಿಲೆಗಳಿಂದ ದೂರವಿರಬಹುದು.
ಖರ್ಜೂರ ದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಹೆಚ್ಚಿಸುವ ಗುಣವಿರುತ್ತದೆ. ಇದು ಪುರುಷರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ತೆಗೆದುಕೊಳ್ಳುವುದರಿಂದ ಪುರುಷರಿಗೆ ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸಬಹುದು.
ಲೈಂಗಿಕ ಆರೋಗ್ಯ:- ಲೈಂಗಿಕ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಹಾಲು ಮತ್ತು ಡೇಟ್ಸ್(ಖರ್ಜೂರ) ಪ್ರಮುಖ ಪಾತ್ರವಹಿಸುತ್ತದೆ.ಪುರುಷರಿಗೆ ಮತ್ತು ಮಹಿಳೆಯರಿಗೆ ಮದುವೆಯಾದ ಬಳಿಕ ಲೈಂಗಿಕ ಜೀವನ ಸಂತೃಪ್ತಿ ಕೊಡಬೇಕು ಮತ್ತು ಜನನಾಂಗಗಳ ಆರೋಗ್ಯಕ್ಕೆ ಯಾವುದೇ ತೊಂದರೆ ಎದುರಾಗಬಾರದು. ಹಾಗಾಗಿ ಹಾಲು ಮತ್ತು ಖರ್ಜೂರಗಳು ಒಟ್ಟಿಗೆ ನಮ್ಮ ದೇಹ ಸೇರುವುದರಿಂದ ಸಾಕಷ್ಟು ಪ್ರಯೋಜನ ಉಂಟಾಗಲಿದೆ. ಖರ್ಜೂರವು ಅಮೈನೊ ಆಮ್ಲಗಳನ್ನು ಹೊಂದಿರುತ್ತದೆ, ಇದು ಪುರುಷರ ತ್ರಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪುರುಷರು ಹಾಲಿನಲ್ಲಿ ಡೇಟ್ಸ್ ಅನ್ನು ಸೇರಿಸಿ ಕುದಿಸಿ ಸೇವಿಸಿದರೆ, ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ.
ಆಸ್ತಮಾ:- ಉಸಿರಾಟ ಸಂಬಂಧಿಸಿದ ಕಾಯಿಲೆಗಳಿದ್ದರೆ ಖರ್ಜೂರ ಮತ್ತು ಹಾಲು ತೆಗೆದುಕೊಳ್ಳಬೇಕು. ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ಸೇವಿಸುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಅಸ್ತಮಾ ರೋಗಿಗಳಿಗೆ ಹಾಲು ಮತ್ತು ಖರ್ಜೂರ ತುಂಬಾ ಪ್ರಯೋಜನಕಾರಿ.
ಸಕ್ಕರೆ ಮಟ್ಟ:- ಹಾಲು ಮತ್ತು ಖರ್ಜೂರವು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೂರರಿಂದ ನಾಲ್ಕು ಡೇಟ್ಸ್ ಅನ್ನು ಒಂದು ಲೋಟ ಹಾಲಿನಲ್ಲಿ ಸೇರಿಸಿ ಸೇವಿಸಿದರೆ ಉತ್ತಮ ಫಲಿತಾಂಶ ನೀಡುತ್ತದೆ.
ಹೊಳಪಿನ ಚರ್ಮ:- ಮುಖದ ಭಾಗದಲ್ಲಿ ಸುಕ್ಕುಗಳು, ಮೊಡವೆಗಳು ಮತ್ತು ಇನ್ನಿತರ ಚರ್ಮದ ಸಮಸ್ಯೆಗಳು ಕಂಡು ಬರುತ್ತವೆ. ಅವರು ಖರ್ಜೂರವನ್ನು ಮತ್ತು ಹಾಲನ್ನು ಮಿಶ್ರಣ ಮಾಡಬೇಕು. ಖರ್ಜೂರ ಮಿಶ್ರಿತ ಹಾಲು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡುತ್ತದೆ. ಇದರಿಂದ ಮುಖದ ಭಾಗಕ್ಕೆ ಮತ್ತು ದೇಹದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರ ಸರಾಗವಾಗಿ ಆಗುವುದರ ಮೂಲಕ ಸುಕ್ಕುಗಳ ನಿವಾರಣೆ ಆಗುತ್ತದೆ. ಇದರ ಜೊತೆಗೆ ಹೊಳಪಿನ ಚರ್ಮ ಕೂಡ ನಿಮ್ಮದಾಗುತ್ತದೆ.