ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಸ್ಪೀಡ್ ಆಗ್ಬೇಕಾದ್ರೆ ಚೇಂಜ್ ಮಾಡಿಕೊಳ್ಳಿ ಈ ಸೆಟ್ಟಿಂಗ್!
ಇಂದಿನ ಇಂಟರ್ನೆಟ್ ಯುಗದಲ್ಲಿ ಮೊಬೈಲ್ ಫೋನ್ ಬಳಸದ ಜನರಿಲ್ಲ. ಹೀಗಿರುವಾಗ ಜನತೆಗೆ ಮುಖ್ಯವಾಗೋದು ಮೊಬೈಲ್ ಇಂಟರ್ನೆಟ್. ಇಂತಹ ಅಗತ್ಯ ಸಮಯದಲ್ಲಿ ನೆಟ್ವರ್ಕ್ ಸ್ಪೀಡ್ ಇಲ್ಲದಿದ್ದರೆ ಇದಕ್ಕಿಂತ ದೊಡ್ಡ ತೊಂದರೆ ಬೇರೊಂದಿಲ್ಲ. ಅದರಲ್ಲೂ ಈ ವರ್ಕ್ ಫ್ರಮ್ ಜಾಬ್ ಮಾಡೋರಿಗೆ ಅಂತೂ ಕೇಳೋದೇ ಬೇಡ. ಈ ಸಮಸ್ಯೆಯಿಂದ ಸೋತು ಹೋಗಿರುತ್ತಾರೆ.
ಇದರಿಂದಾಗಿ ಏನು ಮಾಡಲು ತೋಚದೆ ಸುಮ್ಮನಾಗಿರುತ್ತಾರೆ. ಹಾಗಾಗಿ ಇಂಟರ್ನೆಟ್ ಸ್ಪೀಡ್ ಕಡಿಮೆಯಾದಾಗ ಏನು ಮಾಡಬೇಕು ಎಂದು ಯೋಚಿಸುತ್ತಿರುವವರು ಹೆಚ್ಚು ತಲೆ ಕೆಡಿಸಿಕೊಳ್ಳದೆ ಈ ಮಾಹಿತಿಯನ್ನು ಬಳಸಿಕೊಂಡು ಉಪಯೋಗ ಪಡೆದುಕೊಳ್ಳಿ..
ಉತ್ತಮ ಇಂಟರ್ನೆಟ್ ವೇಗಕ್ಕಾಗಿ, ನೀವು ಬ್ಯಾಕ್ಗ್ರೌಂಡ್ನಲ್ಲಿ ರನ್ ಆಗುತ್ತಿರುವ ಕೆಲವು ಅಪ್ಲಿಕೇಶನ್ಗಳನ್ನು ಮುಚ್ಚಿ . ಏಕೆಂದರೆ ನಿಮ್ಮ ಫೋನ್ ಹಿಂದೆ ಈ ಅಪ್ಲಿಕೇಶನ್ಗಳು ಕಾರ್ಯನಿರ್ವಹಿಸುತ್ತಿದ್ದರೆ ಇದರಿಂದ ಇಂಟರ್ನೆಟ್ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ಅನ್ನು ಬಳಸಿದಾಗ, ಒಂದೇ ಸಮಯದಲ್ಲಿ ಎರಡು ಪೈಲ್ ಗಳನ್ನ ಡೌನ್ಲೋಡ್ ಮಾಡುವುದು. ಕೆಲವೊಮ್ಮೆ ಮೂರು ನಾಲ್ಕು ಫೈಲ್ಗಳನ್ನುಒಟ್ಟಿಗೆ ಓಪನ್ ಇರಿಸಬಾರದು.
ನೀವು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅನಗತ್ಯವಾದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿದ್ದಲ್ಲಿ, ನೀವು ಅವುಗಳನ್ನು ತಕ್ಷಣವೇ ತೆಗೆದುಹಾಕಬೇಕು ಏಕೆಂದರೆ ಅನಗತ್ಯ ಅಪ್ಲಿಕೇಶನ್ಗಳು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಚಾಲನೆಯಲ್ಲಿರುವ ಇಂಟರ್ನೆಟ್ ವೇಗವನ್ನು ಕಡಿಮೆಗೊಳಿಸುತ್ತದೆ.
ರೀಸ್ಟಾರ್ಟ್ ಮಾಡುವ ಮೂಲಕ ತಾಂತ್ರಿಕ ದೋಷಗಳು ಇದ್ದಲ್ಲಿ ಸಾಫ್ಟ್ವೇರ್ನಲ್ಲಿ ದೋಷಗಳು ಇದ್ದರೆ ನಿಧಾನವಾಗಿ ಅದನ್ನು ನೀವು ಒಮ್ಮೆ ಆಫ್ ಮಾಡಿ, ಆ ನಂತರ ಎಲೆಕ್ಟ್ರಿಕ್ ಪ್ಲಗ್ ಅನ್ನು ಅಳವಡಿಸಿ ರೀಸ್ಟಾರ್ಟ್ ಮಾಡಿ. ಇದರ ಮೂಲಕ ನಿಮ್ಮಲ್ಲಿ ಇರುವಂತಹ ಇಂಟರ್ನೆಟ್ ಸಮಸ್ಯೆಗಳ ಪರಿಹಾರ ಆಗುತ್ತವೆ ತುಂಬಾ ಚೆನ್ನಾಗಿ ಕೆಲಸ ಮಾಡಲು ಸಹಾಯ ಆಗುತ್ತದೆ.
ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಮತ್ತೊಂದು ಅತ್ಯಂತ ಪ್ರಭಾವಶಾಲಿ ಮಾರ್ಗವೆಂದರೆ ಸ್ಮಾರ್ಟ್ಫೋನ್ನಲ್ಲಿರುವ ಹೆಚ್ಚುವರಿ ಫೈಲ್ಗಳನ್ನು ತೆಗೆದುಹಾಕುವುದು. ಹಾಗಿದ್ರೆ ಇನ್ಯಾಕೆ ತಡ ಈ ಟಿಪ್ಸ್ ಬಳಸಿಕೊಂಡು ನಿಮ್ಮ ಇಂಟರ್ನೆಟ್ ಸ್ಪೀಡ್ ಮಾಡಿಕೊಳ್ಳಿ…