Winter Lip Care: ತುಟಿ ಒಡೆದು ರಕ್ತ ಬರ್ತಿದೆಯೇ? ಮನೆಮದ್ದು ಈ ರೀ ಮಾಡಿ ಹಚ್ಚಿ
ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಅದಲ್ಲದೆ ನಮ್ಮ ದೇಹದ ಪ್ರತಿಯೊಂದು ಭಾಗಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯು ಹೌದು. ಆರೋಗ್ಯವೇ ಭಾಗ್ಯ ಅನ್ನೋ ನುಡಿಮುತ್ತು ಕೇಳಿರಬಹುದು. ಹಾಗೆಯೇ ನಮಗೆ ಆರೋಗ್ಯ ಇದ್ದರೆ ಮಾತ್ರ ನಾವು ಪರಿಪೂರ್ಣ ತಾನೇ. ಚಳಿಗಾಲ ಬಂತು ಎಂದರೆ ಚರ್ಮದ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ಅದರಲ್ಲೂ ತುಟಿ ಒಡೆದು ಕೆಲವೊಮ್ಮೆ ರಕ್ತ ಸೋರುತ್ತದೆ. ಇದು ನೋವು, ಕಿರಿಕಿರಿ ಹೀಗೆ ಹಲವು ತೊಂದರೆ ಮಾಡುತ್ತದೆ.
ತುಟಿ ಒಡೆಯುವ ಸಮಸ್ಯೆಗೆ ಇಲ್ಲಿದೆ ಪರಿಹಾರ :
- ಆಲಿವ್ ಎಣ್ಣೆಯನ್ನು ಸ್ವಲ್ಪ ತೆಂಗಿನ ಎಣ್ಣೆಯ ಜೊತೆ ಮಿಕ್ಸ್ ಮಾಡಿ ಕಾಯಿಸಿ. ನಂತರ ಅದನ್ನು ತುಟಿಗೆ ಹಚ್ಚಿ ಮಸಾಜ್ ಮಾಡಿ. ದಿನಕ್ಕೆ 2 ರಿಂದ 3 ಬಾರಿ ಮಾಡುವುದು ಬೇಗ ಪರಿಹಾರ ನೀಡುತ್ತದೆ.
- ಸ್ವಲ್ಪ ಗುಲಾಬಿ ದಳಗಳನ್ನು ತೆಗೆದುಕೊಂಡು, ಚೆನ್ನಾಗಿ ತೊಳೆದುಕೊಳ್ಳಿ. ಅದನ್ನು ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ತುಟಿಗೆ ಹಚ್ಚಿ. ಸುಮಾರು 15 ನಿಮಿಷಗಳ ನಂತರ ತೊಳೆಯಿರಿ. ಈ ರೀತಿ ವಾರಕ್ಕೆ 4 ಬಾರಿ ಮಾಡಿ ನೋಡಿ.
- ಅಲೋವೆರಾ ಚರ್ಮದ ಸರ್ವ ಸಮಸ್ಯೆಗೆ ಪರಿಹಾರ ನೀಡುತ್ತದೆ. ನೀವು ತಾಜಾ ಅಲೋವೆರಾ ತೆಗೆದುಕೊಂಡು, ಅದನ್ನು ತುಟಿಗೆ ಹಚ್ಚಿ. ನೀವು ಇದನ್ನು ಪ್ರತಿದಿನ ಮಾಡಬಹುದು. ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ.
- ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಿದರೆ ಕಾಂತಿ ಹೆಚ್ಚಾಗುತ್ತದೆ ಎಂದು. ಕೇವಲ ಮುಖದ ಕಾಂತಿ ಮಾತ್ರವಲ್ಲದೇ ಒಡೆದ ತುಟಿಯ ಸಮಸ್ಯೆಗೆ ಸಹ ಈ ಹಾಲಿನ ಕೆನೆ ಪರಿಹಾರ ನೀಡುತ್ತದೆ.
- ನೀವು ಜೇನುತುಪ್ಪವನ್ನು ಚರ್ಮಕ್ಕೆ ಯಾವುದೇ ರೀತಿಯಲ್ಲಿ ಸಹ ಬಳಸಬಹುದು. ಆದರೆ ತುಟಿ ಒಡೆದು ಹೋಗಿದ್ದರೆ ಸ್ವಲ್ಪ ಸಕ್ಕರೆ ಹಾಕು ಜೇನುತುಪ್ಪ ಮಿಶ್ರಣ ಮಾಡಿ, ಅದನ್ನು ತುಟಿಗೆ ಹಚ್ಚಬೇಕು. ಹಚ್ಚಿದ 5 ನಿಮಿಷಗಳ ನಂತರ ಚೆನ್ನಾಗಿ ಉಜ್ಜಿ, ನಂತರ ತೊಳೆಯಿರಿ.
- ಗ್ರೀನ್ ಟೀ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಇದು ಒಡೆದ ತುಟಿಯ ಸಮಸ್ಯೆಗೆ ಸಹ ಪರಿಹಾರ ಕೊಡುತ್ತದೆ ಎಂದು ಹಲವರಿಗೆ ಗೊತ್ತಿಲ್ಲ. ಗ್ರೀನ್ ಟೀ ಬ್ಯಾಗ್ ಬಿಸಿ ಮಾಡಿ, ಅದನ್ನು ತುಟಿಯ ಮೇಲೆ 10 ನಿಮಿಷಗಳ ಇಟ್ಟುಕೊಳ್ಳಿ. ಈ ರೀತಿ ದಿನಕ್ಕೆ ಒಮ್ಮೆ ಮಾಡಿ ಸಾಕು.
- ನಿಂಬೆಹಣ್ಣಿನ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ, ಸ್ವಲ್ಪ ನಿಂಬೆರಸ ಹಾಗೂ ಜೇನುತುಪ್ಪ ಮಿಕ್ಸ್ ಮಾಡಿ, ಅದನ್ನು ತುಟಿಗೆ ಹಚ್ಚಿ 30 ನಿಮಿಷ ಬಿಡಿ. ಇದನ್ನು ದಿನಕ್ಕೆ ಒಮ್ಮೆ ಮಾಡಿದರೆ ಒಡೆದ ತುಟಿ ಬೇಗನೆ ಸರಿಯಾಗುತ್ತದೆ.
- ಬೀಟ್ ರೂಟ್ ತುಟಿಗೆ ಕೆಂಪು ಬಣ್ಣ ಕೊಡುತ್ತದೆ. ಆದರೆ ಈ ಬೀಟ್ರೂಟ್ ನಿಮ್ಮ ತುಟಿ ಒಡೆದಿದ್ದರೆ ಅದನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸ್ವಲ್ಪ ಬೀಟ್ರೂಟ್ ರಸ ತೆಗೆದುಕೊಂಡು ತುಟಿಗೆ ಹಚ್ಚುವುದು ಉತ್ತಮ.
ಮೇಲ್ನೋಟಕ್ಕೆ ತುಟಿ ಒಡೆಯುವ ಸಮಸ್ಯೆ ಸಣ್ಣದಾಗಿದ್ದರೂ ಸಹ ದಿನವಿಡಿ ನೋವು ಮತ್ತು ಆಹಾರ ಸೇವಿಸುವಾಗ ಉರಿಯುವ ಭಾದೆ ಅನುಭವಿಸಬೇಕಾಗುತ್ತದೆ ಆದ್ದರಿಂದ ಈ ಮೇಲಿನ ಸಲಹೆ ಅನುಸರಿಸುವುದು ಸೂಕ್ತ.