Home Entertainment ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ 21 ವರ್ಷಕ್ಕೆ ನಿಧನ

ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ 21 ವರ್ಷಕ್ಕೆ ನಿಧನ

Hindu neighbor gifts plot of land

Hindu neighbour gifts land to Muslim journalist

ಸಣ್ಣ ಹರೆಯದಲ್ಲೇ ಜನಪ್ರಿಯತೆ ಗಳಿಸಿ ತನ್ನ ಟಿಕ್‌ ಟಾಕ್‌ ವಿಡಿಯೋ ಮೂಲಕವೇ ಲಕ್ಷಾಂತರ ಫಾಲೋವರ್ಸ್‌ ಗಳನ್ನು ಹೊಂದಿದ್ದ 21 ವರ್ಷದ ಯುವತಿ ಮೃತ ಪಟ್ಟಿದ್ದಾರೆ.

ಹೌದು!!!.ಕೆನಾಡ ಮೂಲದ ಮೇಘಾ ಠಾಕೂರ್ ಟಿಕ್‌ ಟಾಕ್‌ ವಿಡಿಯೋಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡಿದ್ದು,ಟಿಕ್‌ ಟಾಕ್‌ ನಲ್ಲಿ ಇವರಿಗೆ 9.30 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದರು. ಬಾಡಿ ಪಾಸಿಟಿವಿಟಿ ಬಗ್ಗೆ ಹೆಚ್ಚಿನ ವಿಡಿಯೋಗಳನ್ನು ಮಾಡುತ್ತಿದ್ದುದ್ದು ಮಾತ್ರವಲ್ಲದೇ, ಆಗಾಗ ನೃತ್ಯದ ವಿಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಿದ್ದರು.

ಮೇಘಾ ಠಾಕೂರ್ ಅವರ ನಿಧನದ ಮಾಹಿತಿಯನ್ನು ಆಕೆಯ ಪೋಷಕರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ದುಃಖದ ಸಂಗತಿಯನ್ನು ಭಾವನಾತ್ಮಕ ವಾಗಿ ಹೇಳಿದ್ದಾರೆ.ಮೇಘಾ ಅವರು ಆತ್ಮವಿಶ್ವಾಸಿ ಹಾಗೂ ಯುವ ಸ್ವಾವಲಂಬಿ ಮಹಿಳೆಯಾಗಿದ್ದು, ಅವಳನ್ನು ನಾವು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ಆಕೆ ಯಾವಾಗಲೂ ಅಭಿಮಾನಿಗಳನ್ನು ಇಷ್ಟಪಡುತ್ತಿದ್ದುದರಿಂದ ಮೇಘ ಗೆ ನಿಮ್ಮ ಆಶೀರ್ವಾದವನ್ನು ಬಯಸುತ್ತೇವೆ.

ಆಕೆಯ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವಳ ಮುಂದಿನ ಪ್ರಯಾಣದಲ್ಲಿ ಅವಳೊಂದಿಗೆ ಇರುತ್ತವೆ” ಎಂದು ಆಕೆಯ ಪೋಷಕರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ನಮ್ಮ ಜೀವ, ಕಾಳಜಿಯ ನಮ್ಮ ಸುಂದರ ಮಗಳು ಮೇಘಾ ಠಾಕೂರು ಹಠಾತ್‌ ಆಗಿ ಅನಿರೀಕ್ಷಿತವಾಗಿ ನ.24 ರ ಮುಂಜಾನೆ ನಿಧನರಾಗಿದ್ದಾಳೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ನ.24 ರಂದು ಮೇಘಾ ನಿಧನರಾಗಿದ್ದು, ಪೋಷಕರು ಈ ವಿಚಾರವನ್ನು ತಡವಾಗಿ ಬಹಿರಂಗ ಮಾಡಿದ್ದಾರೆ..