7th Pay Commission Latest Update : ಸರಕಾರಿ ನೌಕರರೇ ನಿಮಗೊಂದು ಭರ್ಜರಿ ಗುಡ್ ನ್ಯೂಸ್!
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ.ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಹೆಚ್ಚಳ ಮಾಡಿದ ಪರಿಣಾಮವಾಗಿ, ಕೇಂದ್ರ ಸರ್ಕಾರಿ ನೌಕರರ ಡಿಎ (DA) ಮೂಲವೇತನದಲ್ಲಿ ಶೇ.38ಕ್ಕೆ ಏರಿಕೆಯಾಗಿದೆ.
ಇದು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಎಲ್ಲ ನೌಕರರಿಗೂ ಅನ್ವಯವಾಗಿತ್ತು. ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರಕಾರಿ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಹೀಗಾಗಿ ಸರಕಾರಿ ನೌಕರರ ಡಿಎಯನ್ನು ಶೇಕಡಾ 34 ರಿಂದ 38 ಕ್ಕೆ ಏರಿಕೆ ಮಾಡಲಾಗಿದೆ. ಇದಕ್ಕೂ ಮೊದಲು ಮಾರ್ಚ್ 2022 ರಲ್ಲಿ ಡಿಎಯನ್ನು ಶೇಕಡಾ 3 ರಷ್ಟು ಏರಿಕೆ ಮಾಡಲಾಗಿದೆ.
ಕೇಂದ್ರ ಸರಕಾರಿ ನೌಕರರು ತಮ್ಮ ಮುಂದಿನ ಡಿಎ ಹೆಚ್ಚಳವನ್ನು ಮಾರ್ಚ್ 2023 ರಲ್ಲಿ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಲಕ್ಷಗಟ್ಟಲೆ ಕೇಂದ್ರ ಸರಕಾರಿ ನೌಕರರು ಫಿಟ್‌ಮೆಂಟ್ ಅಂಶ ಹೆಚ್ಚಳ ಮತ್ತು 18 ತಿಂಗಳ ಡಿಎ ಬಾಕಿಯ ಬಗ್ಗೆ ಎದುರು ನೋಡುತ್ತಿರುವಾಗ ಇದೀಗ ನೌಕರರು ಶೀಘ್ರದಲ್ಲೇ ಮತ್ತೊಂದು ಸಿಹಿ ಸುದ್ದಿಯನ್ನು ನೀಡುವ ಸಾಧ್ಯತೆ ದಟ್ಟವಾಗಿದೆ.
ಹಲವಾರು ಸರಕಾರಿ ನೌಕರರು ಮುಂದಿನ ತುಟ್ಟಿಭತ್ಯೆ ಹೆಚ್ಚಳವನ್ನು ಯಾವಾಗ ಸಿಗಲಿದೆ ಎಂದು ನಿರೀಕ್ಷೆ ಮಾಡುತ್ತಿರುವ ನಡುವೆ ನೌಕರರು ಸಂಬಳದಲ್ಲಿ ಯಾವಾಗ ಎಷ್ಟು ಹೆಚ್ಚಳವನ್ನು ಪಡೆಯುತ್ತಾರೆ ಎಂಬ ಪ್ರಶ್ನೆಯು ಮೂಡಿದೆ.
2016ರಲ್ಲಿ ಕೇಂದ್ರ ಸರಕಾರ 7ನೇ ವೇತನ ಆಯೋಗವನ್ನು ಜಾರಿಗೊಳಿಸಿದಾಗ ಡಿಎಯನ್ನು ಶೂನ್ಯಕ್ಕೆ ಇಳಿಸಲಾಗಿದ್ದು, ಆದ್ದರಿಂದ ಕೇಂದ್ರ ಸರಕಾರಿ ಉದ್ಯೋಗಿಯ ಮೂಲ ವೇತನವು 18000 ರೂ ಆಗಿದ್ದರೆ, ಪ್ರತಿ ಉದ್ಯೋಗಿಯು ರೂ 9000ರಷ್ಟು ಅಂದರೆ 50 ಪ್ರತಿಶತದಷ್ಟು ಡಿಎ ಪಡೆಯಲಿದ್ದಾರೆ.
ಇದರ ನಡುವೆ ಹಣದುಬ್ಬರ ದರವನ್ನು ಪರಿಗಣಿಸಿ ಮತ್ತು 7 ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸಿ ಕೇಂದ್ರವು ಡಿಎಯನ್ನು ಶೇಕಡಾ 3 ರಿಂದ 5 ರಷ್ಟು ಏರಿಕೆ ಮಾಡಬಹುದು ಎಂದು ಮೂಲಗಳು ಹೇಳಿವೆ.
ಡಿಎ ಹೆಚ್ಚಳವು ಶೇಕಡಾ 50 ರ ಸಮೀಪಕ್ಕೆ ತಲುಪಿದರೆ, ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಎಂದು ಇತರ ಮೂಲಗಳು ಹೇಳುತ್ತಿವೆ. ಪ್ರಸ್ತುತ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪಡೆಯುತ್ತಿರುವ ಸರಕಾರಿ ನೌಕರರು ಕೂಡ ಹೊಸ ವೇತನ ಆಯೋಗದ ಪ್ರಯೋಜನವನ್ನು ಪಡೆಯಲಿದ್ದಾರೆ ಎನ್ನಲಾಗಿದ್ದು, ನೌಕರರ ವೇತನ ಹೆಚ್ಚಳ ಅಥವಾ 8ನೇ ಸಿಪಿಸಿ ಜಾರಿಗೆ ತರುವಂತೆ ನೌಕರರ ಸಂಘ ಮನವಿ ಪತ್ರ ತಯಾರಿಸುತ್ತಿದ್ದು, ಆದರೆ 8ನೇ ವೇತನ ಆಯೋಗದ ಅನುಷ್ಠಾನದ ಬಗ್ಗೆ ಸರಕಾರದಿಂದ ಯಾವುದೇ ಮಾಹಿತಿ ದೃಢ ಪಡಿಸಿಲ್ಲ ಜೊತೆಗೆ ಯಾವುದೇ ಪ್ರಕಟಣೆಯನ್ನು ಕೂಡ ಹೊರಡಿಸಿಲ್ಲ. ಇದೆಲ್ಲದರ ನಡುವೆ ಸರಕಾರಿ ನೌಕರರಿಗೆ 18 ತಿಂಗಳಿಂದ ಬಾಕಿ ಇರುವ ಡಿಎ ಬಾಕಿಯನ್ನು ಶೀಘ್ರವೇ ದೊರೆಯಲಿದೆ ಎಂಬ ಮಾಹಿತಿ ಕೂಡ ಇದೆ.
Hey! Do you know if they make any plugins to help with SEO?
I’m trying to get my blog to rank for some targeted keywords but
I’m not seeing very good results. If you know of any please share.
Kudos! I saw similar text here: Bij nl