Real Driving Emissions : ಗಮನಿಸಿ : ಈ ಹೊಸ ನಿಯಮ ಜಾರಿಯಾದರೆ ಬಂದ್ ಆಗಲಿದೆ ಸಣ್ಣ ಡೀಸೆಲ್ ಕಾರುಗಳ ಮಾರಾಟ!!!
ದೇಶದಾದ್ಯಂತ ಸತತವಾಗಿ ಹೆಚ್ಚಳವಾಗುತ್ತಿರುವ ವಾಹನಗಳ ಸಂಖ್ಯೆಯು ಮಾಲಿನ್ಯ ಉತ್ಪಾದನೆಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ರಿಯಲ್ ಡ್ರೈವಿಂಗ್ ಎಮಿಷನ್(Real Driving Emissions) ಜಾರಿಗೆ ತರುತ್ತಿದೆ.
ಈ ಹೊಸ ಮಾಲಿನ್ಯ ನಿಯಂತ್ರಣ ನಿಯಮವನ್ನು ಕೇಂದ್ರ ಸರ್ಕಾರವು 2023ರ ಏಪ್ರಿಲ್ 1 ರಿಂದ ಜಾರಿಗೆ ತರಲಿದೆ. ಈ ಹೊಸ ನಿಯಮದಿಂದ ಸಣ್ಣ ಡೀಸೆಲ್ ಕಾರುಗಳ ಮಾರಾಟ ಬಂದ್ ಆಗಲಿದೆ.
ಇನ್ನೂ ಈ ರಿಯಲ್ ಡ್ರೈವಿಂಗ್ ಎಮಿಷನ್ ಅಂದ್ರೆ ಏನು ಎಂದು ಇಲ್ಲಿದೆ ಮಾಹಿತಿ. ಕಾರು ತಯಾರಕ ಕಂಪನಿಗಳು ಹೊಸ ವಾಹನಗಳಿಗೆ ಎಲೆಕ್ಟಿಫೈಡ್ ಪ್ರೊಪಲ್ಟನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಮಾಲಿನ್ಯವನ್ನು ತಗ್ಗಿಸಬಹುದಾಗಿದೆ.
ರಿಯಲ್ ಡ್ರೈವಿಂಗ್ ಎಮಿಷನ್ ಜಾರಿಗೆ ಬಂದರೆ ಹೊಸದಾಗಿ ನಿರ್ಮಾಣವಾಗಲಿರುವ ಡೀಸೆಲ್ ಕಾರುಗಳು ಕೂಡ ಈ ನಿಯಮವನ್ನು ಪಾಲಿಸಬೇಕಿದೆ. ಹೊಸ ಮಾನದಂಡ ಪೂರೈಸಲು ಡೀಸೆಲ್ ಎಂಜಿನ್ ಕಾರುಗಳಲ್ಲಿ ಹಲವು ಬದಲಾವಣೆಗಳು ಆಗಬೇಕಾಗುತ್ತದೆ. ಈ ಹೊಸ ಬದಲಾವಣೆಯನ್ನು
ಅಳವಡಿಸಿಕೊಂಡು ಮಾರಾಟ ಮುಂದುವರಿಸಿದರೆ ಕಾರುಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ.
ಹಾಗೇ ರಿಯಲ್ ಡ್ರೈವಿಂಗ್ ಎಮಿಷನ್ ಮಾನದಂಡ ಪೂರೈಸುವ ಮಧ್ಯಮ ಕ್ರಮಾಂಕದ ಡೀಸೆಲ್ ಕಾರುಗಳು ಸದ್ಯ ಮಾರುಕಟ್ಟೆಯ ಬೆಲೆಗಿಂತ ಹೆಚ್ಚಳವಾಗಿ ರೂ. 2 ಲಕ್ಷದಿಂದ ರೂ. 2.50 ಲಕ್ಷದಷ್ಟು ಹೆಚ್ಚಳವಾಗಬಹುದು. ಹಾಗಾಗಿ ಈ ಹೊಸ ರಿಯಲ್ ಡ್ರೈವಿಂಗ್ ಏಮಿಷನ್ ಮಾನದಂಡಗಳನ್ನು ಪೂರೈಸಲು ಮಧ್ಯಮ ಕ್ರಮಾಂಕದ ಕಾರು ಉತ್ಪಾದನಾ ಕಂಪನಿಗಳು ಸೇರಿದಂತೆ ಐಷಾರಾಮಿ ಕಾರು ಉತ್ಪಾದನಾ ಕಂಪನಿಗಳು ಕೂಡ ಹಿಂದೆ ಸರಿಯುತ್ತಿದೆ. ಈಗಾಗಲೇ ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಾರುಗಳ ಕಂಪನಿಗಳು ಪರಿಸರ ಸ್ನೇಹಿ ಹಾಗೂ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್ ಜಿ ಗಳ ತಯಾರಿಯತ್ತ ತಮ್ಮ ಪಯಣ ಬೆಳೆಸುತ್ತಿದೆ.
ಇದೀಗ ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಸಿಎನ್ ಜಿ ಮಾದರಿಗಳ ಮಾರಾಟವು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. ಡೀಸೆಲ್ ಕಾರುಗಳ ಮಾರಾಟವು ನಿಧಾನವಾಗಿ ಕಡಿಮೆಯಾಗಲಿದೆ. ಈ ಹೊಸ ರಿಯಲ್ ಡ್ರೈವಿಂಗ್ ಎಮಿಷನ್ ನಿಂದಾಗಿ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸುವುದಾಗಿ ಹೋಂಡಾ ಕಾರ್ಸ್ ಕಂಪನಿಯು ಅಧಿಕೃತವಾಗಿ ಹೇಳಿಕೊಂಡಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್, ಸಿಎನ್ ಜಿ ಮತ್ತು ಎಲೆಕ್ಟಿಕ್ ಕಾರುಗಳು ಮಾತ್ರ ಖರೀದಿ ಮಾಡಬಹುದು, ಅವುಗಳು ಮಾತ್ರ ಲಭ್ಯವಿದೆ ಎನ್ನಲಾಗಿದೆ.