ಇದೊಂದು ನೃತ್ಯ ಪ್ರದರ್ಶನ ಕಲೆ ನೀವು ನೋಡಿರಲು ಸಾಧ್ಯವಿಲ್ಲ!
ಮನುಷ್ಯರಲ್ಲಿ ಒಂದಲ್ಲಾ ಒಂದು ಪ್ರತಿಭೆಗಳು ಇದ್ದೇ ಇರುತ್ತದೆ. ಅಸಾಧ್ಯ ಆದುದನ್ನು ಸಾಧ್ಯ ಆಗಿಸುವುದಲ್ಲಿ ಮನುಷ್ಯ ಎತ್ತಿದ ಕೈ. ಉದಾಹರಣೆಗೆ ನೃತ್ಯದಲ್ಲಿ ಎಷ್ಟೊಂದು ಬಗೆಗಳಿವೆ. ಇದರ ಹೊರತಾಗಿಯೂ ಅಸಾಮಾನ್ಯ ಎನ್ನುವ ನೃತ್ಯ ಪ್ರದರ್ಶನಗಳು ಅಲ್ಲಲ್ಲಿ ನಡೆಯುತ್ತಲೇ ಇರುವುದು ನಾವು ಈಗಾಗಲೇ ಕೆಲವೊಂದು ವೀಡಿಯೋ ಗಳಲ್ಲಿ ಅಥವಾ ನೇರವಾಗಿ ನೋಡಿರಬಹುದು. ಆ ಕುರಿತು ಒಂದು ನೃತ್ಯ ಇದೀಗ ವೈರಲ್ ಆಗಿದೆ.
ನೃತ್ಯ ಸಂಯೋಜಕರಾದ ನಾಡೆಝಾ ನಡೆಝಿನಾ ಅವರ ಕಲ್ಪನೆಯ ನೃತ್ಯ ಇದಾಗಿದೆ. ವೇದಿಕೆ ಮೇಲೆ ಮಾಡಿರುವ ಈ ನೃತ್ಯವನ್ನು “ತೇಲುವ ಹೆಜ್ಜೆ” ಎಂದು ಕರೆಯಲಾಗುತ್ತದೆ.
ಬೆರೆಜಾ ಡ್ಯಾನ್ಸ್ ಎನ್ಸೆಂಬಲ್ ಎಂದು ಕರೆಯಲ್ಪಡುವ ಮಹಿಳಾ ನೃತ್ಯ ಗುಂಪಿನ ಪ್ರದರ್ಶನ ಇದಾಗಿದೆ. ಈ ನೃತ್ಯ ರಷ್ಯಾದಲ್ಲಿ ನಡೆದಿದ್ದು, ಎಲ್ಲರೂ ರಷಿಯನ್ ನರ್ತಕಿಯರು ಆಗಿದ್ದರು. ಅಲ್ಲದೆ ಈ ಕಲಾ ಪ್ರಕಾರವನ್ನು ಪ್ರದರ್ಶಿಸುವಾಗ, ಮಹಿಳೆಯರು ತುಂಬಾ ಚಿಕ್ಕ ಹೆಜ್ಜೆಗಳನ್ನು ಇಡುತ್ತಾರೆ, ನೃತ್ಯ ಮಾಡುವಾಗ ಗಾಳಿಯಲ್ಲಿ ತೇಲುತ್ತಿರುವಂತೆ ಭ್ರಮೆಯನ್ನು ಉಂಟುಮಾಡುತ್ತದೆ.
ಮಹಿಳೆಯರು ವೇದಿಕೆಯ ಮೇಲೆ ಗಾಳಿಯಲ್ಲಿ ತೇಲುವಂತೆ ನೃತ್ಯ ಮಾಡಿದ್ದು, ಬಹಳ ಕುತೂಹಲ ಮೂಡಿಸಿದೆ. ಗೊಂಬೆಗಳಂತೆ ನಿಂತಿರುವ ಮಹಿಳೆಯರು ವೇದಿಕೆ ಮೇಲೆ ಗಾಳಿಯಲ್ಲಿ ತೇಲಿದಂತೆ ನರ್ತಿಸುತ್ತಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ವೀಕ್ಷಕರು ಮೆಚ್ಚುಗೆ ನೀಡಿರುವುದು ಅಲ್ಲದೆ ಹಲವಾರು ಬಾರಿ ಈ ವೀಡಿಯೋ ವೀಕ್ಷಣೆ ಆಗಿರುತ್ತದೆ.