1970ರ ಸ್ಟೀವ್ ಜಾಬ್ಸ್ ಚಪ್ಪಲಿ ಕೋಟಿಗಟ್ಟಲೇ ರೂಪಾಯಿಗೆ ಸೇಲಾಯ್ತು!
ಶ್ರೇಷ್ಠ ಮಹನೀಯರು ಬಳಸುವ ವಸ್ತುಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಡಿಮ್ಯಾಂಡ್ ಇರುವುದು ಸಹಜ. ಅದರಲ್ಲೂ ಪ್ರತಿಷ್ಟಿತ ಹುದ್ದೆಯಲ್ಲಿರುವ ಪಾಪ್ಯುಲರ್ ವ್ಯಕ್ತಿಗಳ ವಸ್ತುಗಳು ದುಬಾರಿ ಬೆಲೆಗೆ ಹರಾಜಿಗೆ ಬರುತ್ತವೆ. ಅದೇ ರೀತಿ, ಇದೀಗ,ಆಪಲ್ ಕಂಪನಿಯ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಧರಿಸುತ್ತಿದ್ದ ಕಂದು ಬಣ್ಣದ ಲೆದರ್ ಚಪ್ಪಲಿ ದುಬಾರಿ ಬೆಲೆಗೆ ಹರಾಜಿಗೆ ಇಡಲಾಗಿತ್ತು.
ಈ ಪಾದರಕ್ಷೆ ಹರಾಜಾದ ಬೆಲೆ ನೀವು ತಿಳಿದರೆ ಬೆರಗಾಗುವುದು ಖಚಿತ. ಹರಾಜು ಮನೆಯ ವೆಬ್‍ಸೈಟ್‍ನಲ್ಲಿನ ವಿವರಗಳ ಪ್ರಕಾರ, ಆಪಲ್ ಕಂಪನಿಯ ಇತಿಹಾಸದಲ್ಲಿ ಅನೇಕ ಪ್ರಮುಖ ಕ್ಷಣಗಳಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಗಳನ್ನು ಧರಿಸಿದ್ದರು ಎನ್ನಲಾಗಿದ್ದು, 1976ರಲ್ಲಿ ಲಾಸ್ ಆಲ್ಟೋಸ್ ಗ್ಯಾರೇಜ್‍ನಲ್ಲಿ ಆಪಲ್ ಕಂಪ್ಯೂಟರ್ ಅನ್ನು ಆನ್ ಮಾಡುವ ಸಂದರ್ಭದಲ್ಲಿ ಸ್ಟೀವ್ ಜಾಬ್ಸ್ ಇದೇ ಚಪ್ಪಲಿಯನ್ನು ಧರಿಸಿದ್ದರು ಜೊತೆಗೆ ಜಾಬ್ಸ್ ಬಿರ್ಕೆನ್‍ಸ್ಟಾಕ್ಸ್‍ನ ಜಾಣ್ಮೆ ಮತ್ತು ಪ್ರಾಯೋಗಿಕತೆಯನ್ನು ಕಂಡು ಜನ ಬೆರಗಾಗಿದ್ದರು.
ನವೆಂಬರ್ 11 ರಿಂದ ನೇರ ಪ್ರಸಾರವಾದ ಹರಾಜು ಪ್ರಕ್ರಿಯೆ ನವೆಂಬರ್ 13ಕ್ಕೆ ಮುಕ್ತಾಯವಾಗಿದ್ದು, ಒಂದು ಜೊತೆ ಕಂದು ಬಣ್ಣದ ಸ್ಯೂಡ್ ಲೆದರ್ ಬರ್ಕೆನ್‍ಸ್ಟಾಕ್ ಅರಿಜೋನಾ ಚಪ್ಪಲಿಯನ್ನು ಸ್ಟೀವ್ ಜಾಬ್ಸ್ ಅವರು ಧರಿಸುತ್ತಿದ್ದರು ಎನ್ನಲಾಗಿದೆ.
1970ರ ಮತ್ತು 1980ರ ದಶಕದಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಯನ್ನು ಧರಿಸುತ್ತಿದ್ದರು ಈ ಬಳಿಕ ಈ ಒಂದು ಜೊತೆ ಚಪ್ಪಲಿಯನ್ನು ಈಹಿಂದೆ ಸ್ಟೀವ್ ಜಾಬ್ಸ್ ಅವರ ಮನೆ ನಿರ್ವಾಹಕ ಆಗಿದ್ದ ಮಾರ್ಕ್ ಶೆಫ್ ಅವರ ಬಳಿ ಕೂಡ ಇತ್ತು ಎಂಬ ಮಾಹಿತಿ ಇದೆ.
ಈ ಪಾದರಕ್ಷೆ ಇದೀಗ ಬರೋಬ್ಬರಿ, 1.77 ಕೋಟಿಗೆ ($218,750) ಮಾರಾಟವಾಗಿದ್ದು, ಈ ಬಗ್ಗೆ ಹರಾಜು ಕಂಪನಿ ಜೂಲಿಯನ್ಸ್ ಮಾಹಿತಿ ನೀಡಿದೆ. ಈ ಚಪ್ಪಲಿಯನ್ನು ಇಟಲಿಯ ಮಿಲಾನೊದಲ್ಲಿನ ಸಲೋನ್ ಡೆಲ್ ಮೊಬೈಲ್‍ನಲ್ಲಿ ಮಾತ್ರವಲ್ಲದೇ, 2017 ರಲ್ಲಿ ಜರ್ಮನಿಯ ರಹ್ಮ್ಸ್‍ನಲ್ಲಿರುವ ಬರ್ಕೆನ್‍ಸ್ಟಾಕ್ ಪ್ರಧಾನ ಕಚೇರಿಯಲ್ಲಿ, ಕೊಲ್ನ್, ಜರ್ಮನಿಯ ಕಲೋನ್‍ನಲ್ಲಿ ಪೀಠೋಪಕರಣ ಮೇಳ, 2018 ರಲ್ಲಿ ಡೈ ಝೀಟ್ ಮ್ಯಾಗಜೀನ್‍ಗಾಗಿ ಝೀಟ್ ಈವೆಂಟ್ ಬರ್ಲಿನ್ ಮತ್ತು ಇತ್ತೀಚೆಗೆ ಜರ್ಮನಿಯ ಸ್ಟಟ್‍ಗಾರ್ಟ್‍ನಲ್ಲಿರುವ ಹಿಸ್ಟರಿ ಮ್ಯೂಸಿಯಂನಲ್ಲೂ ಇಡಲಾಗಿತ್ತು. ಇದಷ್ಟೇ ಅಲ್ಲದೇ,ನ್ಯೂಯಾರ್ಕ್‍ನ ಸೋಹೋದಲ್ಲಿನ ಬಿರ್ಕೆನ್‍ಸ್ಟಾಕ್‍ನಲ್ಲಿ, ಯುನೈಟೆಡ್ ಸ್ಟೇಟ್ಸ್ ಶಾಪ್ಸ್‍ಗಳು ಸೇರಿದಂತೆ ಇನ್ನೂ ಹಲವೆಡೆ ಪ್ರದರ್ಶನಕ್ಕೆ ಇಡಲಾಗಿತ್ತು.