Home Breaking Entertainment News Kannada Kantara : ಕರ್ನಾಟಕದಲ್ಲಿ ಕಾಂತಾರ ಸಿನಿಮಾದ ಬರೋಬ್ಬರಿ ಒಂದು ಕೋಟಿ ಟಿಕೆಟ್ ಸೇಲ್ | ಒಟ್ಟು...

Kantara : ಕರ್ನಾಟಕದಲ್ಲಿ ಕಾಂತಾರ ಸಿನಿಮಾದ ಬರೋಬ್ಬರಿ ಒಂದು ಕೋಟಿ ಟಿಕೆಟ್ ಸೇಲ್ | ಒಟ್ಟು ಕಲೆಕ್ಷನ್‌ ಎಷ್ಟು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಜನರ ಮನದಲ್ಲಿ ಅಚ್ಚೊತ್ತಿದೆ. ಅಷ್ಟೇ ಅಲ್ಲದೆ, ಇದುವರೆಗೆ ಹಲವಾರು ದಾಖಲೆಗಳನ್ನು ಉಡೀಸ್ ಮಾಡಿದೆ. ಇದೀಗ ‘ಕಾಂತಾರ’ ದಿಂದ ಹೊಸದೊಂದು ದಾಖಲೆ ನಿರ್ಮಾಣವಾಗಿದೆ.

ಕರ್ನಾಟಕದಲ್ಲಿ 77 ಲಕ್ಷ ‘ಕಾಂತಾರ’ ಸಿನಿಮಾದ ಟಿಕೆಟ್ ಸೇಲ್ ಆಗಿತ್ತು. ಆದರೆ ಇದೀಗ ಕರ್ನಾಟಕದಲ್ಲಿ ‘ಕಾಂತಾರ’ ಸಿನಿಮಾದ ಬರೋಬ್ಬರಿ ಒಂದು ಕೋಟಿ ಟಿಕೆಟ್‌ ಮಾರಾಟವಾಗಿದೆ. ಇದು ಹೊಂಬಾಳೆ ಬ್ಯಾನರ್‌ನಲ್ಲೇ ಹೊಸ ದಾಖಲೆಯಾಗಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಿಸಿದ್ದ, ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ನಟನೆಯ ‘ರಾಜಕುಮಾರ’ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಅಷ್ಟೇ ಅಲ್ಲದೆ, ಈ ಸಿನಿಮಾದ 65 ಟಿಕೆಟ್ ಗಳು ಸೇಲ್ ಆಗಿದ್ದವು. 2018ರಲ್ಲಿ ಹೊಂಬಾಳೆ ನಿರ್ಮಿಸಿದ್ದ ಮತ್ತೊಂದು ಸೂಪರ್ ಹಿಟ್ ಚಿತ್ರ ‘ಕೆಜಿಎಫ್ 1’ ಬಿಡುಗಡೆ ಆಗಿತ್ತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ದೇಶದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಹಾಗೇ ಕರ್ನಾಟಕದಲ್ಲಿ ಈ ಚಿತ್ರದ 75 ಲಕ್ಷ ಟಿಕೆಟ್ ಸೇಲ್ ಆಗಿದ್ದವು. ಆದರೆ ಇದೀಗ ಹೊಂಬಾಳೆ ಸಂಸ್ಥೆ ನಿರ್ಮಿಸಿರುವ ‘ಕಾಂತಾರ’ ಚಿತ್ರದ ಬರೋಬ್ಬರಿ ಒಂದು ಕೋಟಿ ಟಿಕೆಟ್ ಸೇಲ್ ಆಗಿರುವುದು ಬಹುದೊಡ್ಡ ದಾಖಲೆಯಾಗಿದೆ.

ರಿಷಬ್‌ ಶೆಟ್ಟಿ, ಸಪ್ತಮಿ ಗೌಡ ನಟನೆಯ ‘ಕಾಂತಾರ’ ಸಿನಿಮಾವು ಕರ್ನಾಟಕದಲ್ಲಿ 180 ಕೋಟಿ ರೂ.ಗಳಿಗೂ ಅಧಿಕ ಗಳಿಕೆಯಾಗಿದೆ. ಒಟ್ಟಾಗಿ ಭಾರತದಲ್ಲಿ ಕಾಂತಾರ ಸಿನಿಮಾ 275 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಗಳಿಸಿದೆ. ಇನ್ನೂ, ವಿಶ್ವದಾದ್ಯಂತ ಈ ಸಿನಿಮಾದ ಗಳಿಕೆಯು ಸರಿ ಸುಮಾರು 350 ಕೋಟಿ ರೂ. ಗಡಿ ತಲುಪಿದೆ ಎಂದು ತಿಳಿದುಬಂದಿದೆ.

ನಟ ರಿಷಬ್ ಶೆಟ್ಟಿ , ಶಿವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ, ನಟಿ ಸಪ್ತಮಿ ಗೌಡ, ಲೀಲಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನೂ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ದೀಪಕ್‌ ರೈ, ಮಾನಸಿ ಸುಧೀರ್ ಸೇರಿದಂತೆ ಹಲವಾರು ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ಧಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಇನ್ನೂ, ಈ ಸಿನಿಮಾ ಸಾಕಷ್ಟು ಜನರ ಮನದಲ್ಲಿ ನೆಲೆಯಾಗಿದೆ. ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಕಾಂತಾರ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.