Home Food ಹಸಿ ಈರುಳ್ಳಿಯನ್ನು ತಿನ್ನೋ ಅಭ್ಯಾಸ ನಿಮಗಿದೆಯೇ? | ಹಾಗಿದ್ರೆ ತಿಳಿದುಕೊಳ್ಳಿ ಇದರಿಂದ ಉಂಟಾಗೋ ಸಮಸ್ಯೆ!!

ಹಸಿ ಈರುಳ್ಳಿಯನ್ನು ತಿನ್ನೋ ಅಭ್ಯಾಸ ನಿಮಗಿದೆಯೇ? | ಹಾಗಿದ್ರೆ ತಿಳಿದುಕೊಳ್ಳಿ ಇದರಿಂದ ಉಂಟಾಗೋ ಸಮಸ್ಯೆ!!

Hindu neighbor gifts plot of land

Hindu neighbour gifts land to Muslim journalist

ಈರುಳ್ಳಿಯಿಲ್ಲದೇ ಸಾಮಾನ್ಯವಾಗಿ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ನಮ್ಮ ಭಾರತೀಯ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಅಷ್ಟೇ ಅಲ್ಲದೆ, ಹಸಿ ಈರುಳ್ಳಿಯನ್ನು ಹೋಟೆಲ್ ಗಳಲ್ಲಿ ಆಹಾರದ ಜೊತೆ ತಿನ್ನಲು ಕೂಡ ನೀಡುತ್ತಾರೆ. ಆದ್ರೆ, ಈರುಳ್ಳಿಯನ್ನು ಯಾವ ರೀತಿ ತಿನ್ನುವುದು ಸೂಕ್ತ ಎಂದು ತಿಳಿದುಕೊಳ್ಳುವುದು ಸೂಕ್ತ.

ಈರುಳ್ಳಿಯಲ್ಲಿ ವಿವಿಧ ಜೀವಸತ್ವಗಳು, ಖನಿಜಗಳು ಮತ್ತು ಪ್ರಬಲವಾದ ಸಸ್ಯ ಸಂಯುಕ್ತಗಳನ್ನು ಒಳಗೊಂಡಿದೆ. ಇದರ ವಿಶೇಷವಾದ ಗುಣಗಳಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುತ್ತದೆ. ಹೀಗಾಗಿ ಈರುಳ್ಳಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದೇ ಹೇಳ್ತಾರೆ. ಆದರೆ ಹಸಿ ಈರುಳ್ಳಿಯ ಅತಿಯಾದ ಸೇವನೆ ಆರೋಗ್ಯಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತದೆ. ಹೆಚ್ಚು ಈರುಳ್ಳಿ ಸೇವನೆ ನಿಮಗೆ ಹಲವು ಆರೋಗ್ಯ ಸಮಸ್ಯೆ ಉಂಟು ಮಾಡಬಹುದು. ಅಲ್ಲದೆ, ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಈ ಕುರಿತು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಲಿನ್ ಕ್ಯಾಂಡಿ ಅವರು ಮಾಹಿತಿ ನೀಡಿದ್ದು, ಈರುಳ್ಳಿ ಅಡುಗೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮತ್ತು ಇದು ಆರೋಗ್ಯಕರ ಪ್ರಯೋಜನ ನೀಡುತ್ತದೆ. ಆದರೆ ಹಸಿ ಈರುಳ್ಳಿ ತಿನ್ನುವುದರಿಂದ ಕೆಲವು ಅನಾನುಕೂಲತೆ ಇದೆ ಎಂದು ಅವರು ಹೇಳುತ್ತಾರೆ. ಹೆಚ್ಚಿನ ಪ್ರಮಾಣದ ಸಾವಯವ ಗಂಧಕ ಹೊಂದಿದೆ. ಇದು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅನೇಕ ಪ್ರಯೋಜನ ನೀಡುತ್ತದೆ.

ಎನ್‌ ಸಿಬಿಐ ಸೈಟ್‌ನಲ್ಲಿ ಪ್ರಕಟವಾದ ಪಬ್‌ ಮೆಡ್ ಸೆಂಟ್ರಲ್‌ ಸಂಶೋಧನೆ ಪ್ರಕಾರ, ಈರುಳ್ಳಿಯ ಹೊರ ಪದರವು ಹೆಚ್ಚು ಫ್ಲೇವನಾಯ್ಡ್‌ ಹೊಂದಿದೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಹಾಗಾಗಿ ಈರುಳ್ಳಿ ಕತ್ತರಿಸುವಾಗ ನೀವು ಕನಿಷ್ಠ ಈ ಪದರ ತೆಗೆದು ಹಾಕಬೇಕು. ಮತ್ತೊಂದೆಡೆ, ಈರುಳ್ಳಿ ಬೇಯಿಸಿ ತಿಂದರೆ ಅದರಲ್ಲಿನ ಪೋಷಕಾಂಶಗಳು ಬಹಳ ಕಡಿಮೆ ಆಗುತ್ತವೆ ಇದು ಗ್ಯಾಸ್ ಸಮಸ್ಯೆ ಉಂಟು ಮಾಡಲ್ಲ. ಹಾಗಿದ್ರೆ ಹಸಿ ಈರುಳ್ಳಿ ಸೇವನೆಯ ಅನಾನುಕೂಲಗಳು ಯಾವುದು ಎಂಬುದನ್ನ ತಿಳಿದುಕೊಂಡು ಬರೋಣ..

ಗ್ಯಾಸ್:
ಡಾಕ್ಟರ್ ಕ್ಯಾಂಡಿ ಅವರ ಪ್ರಕಾರ, ಹೆಚ್ಚು ಹಸಿ ಈರುಳ್ಳಿ ಸೇವನೆ ಮಾಡಿದರೆ ಗ್ಯಾಸ್, ಎದೆಯುರಿ, ವಾಂತಿ, ಹೊಟ್ಟೆಯಲ್ಲಿ ಉಬ್ಬುವುದು ಮುಂತಾದ ಸಮಸ್ಯೆ ಕಾಣಿಸುತ್ತವೆ. ಬೇಯಿಸಿದ ಈರುಳ್ಳಿ ತಿನ್ನಲು ಸಲಹೆ ನೀಡಲಾಗುತ್ತದೆ.

ಬಾಯಿಯ ದುರ್ಗಂಧ:
ಸಲಾಡ್ ಅಥವಾ ಇತರ ಯಾವುದೇ ಆಹಾರ ಪದಾರ್ಥಗಳಲ್ಲಿ ಹಸಿ ಈರುಳ್ಳಿ ತಿಂದರೆ ನಿಮ್ಮ ಬಾಯಿಯಿಂದ ದುರ್ವಾಸನೆ ಬರುತ್ತದೆ.

ರಕ್ತದ ಸಕ್ಕರೆ ಕಡಿಮೆ ಮಾಡುತ್ತದೆ:
ಹಸಿ ಈರುಳ್ಳಿ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. ಹಾಗಾಗಿ ಸಕ್ಕರೆ ಸಮಸ್ಯೆ ಇರುವವರು ಹಸಿ ಈರುಳ್ಳಿ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಸ್ಕಿನ್ ರಾಶಸ್:
ಕೆಲವರಿಗೆ ಈರುಳ್ಳಿ ರಸ ಚರ್ಮದ ಮೇಲೆ ಹಚ್ಚಿದ ನಂತರ ತುರಿಕೆ, ಉರಿ ಮತ್ತು ದದ್ದು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈರುಳ್ಳಿ ರಸ ಬಳಸುವ ಮೊದಲು, ಪ್ಯಾಚ್ ಪರೀಕ್ಷೆ ಮಾಡಿಸಿ.

ಗರ್ಭಾವಸ್ಥೆಯಲ್ಲಿ:
ಗರ್ಭಿಣಿಯರು ಸಾಮಾನ್ಯವಾಗಿ ಎದೆಯುರಿ, ವಾಂತಿ ಮತ್ತು ವಾಕರಿಕೆ ಅನುಭವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಹಸಿ ಈರುಳ್ಳಿ ಸೇವನೆ ಹಾನಿ ಉಂಟು ಮಾಡುತ್ತದೆ.

ಲಿಥಿಯಂ:
ಹಸಿ ಈರುಳ್ಳಿ ಸೇವನೆಯಿಂದ ದೇಹದಲ್ಲಿ ಲಿಥಿಯಂ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ.

ರಕ್ತದೊತ್ತಡ:
ಹಸಿ ಈರುಳ್ಳಿ ಸೇವನೆಯು ಸಂಕೋಚನ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡ ಮಟ್ಟ ಕಡಿಮೆ ಮಾಡುತ್ತದೆ. ಹಾಗಾಗಿ ರಕ್ತದೊತ್ತಡದ ಔಷಧಿ ತೆಗೆದುಕೊಳ್ಳುವ ರೋಗಿಗಳು ಈರುಳ್ಳಿ ಸೇವಿಸುವ ವಿಷಯದಲ್ಲಿ ವೈದ್ಯಕೀಯ ಸಲಹೆ ಪಡೆಯಬೇಕು.

ವಾಯು ಮತ್ತು ಎದೆಯುರಿ:
ಹಸಿ ಈರುಳ್ಳಿಯಲ್ಲಿ ಕಂಡು ಬರುವ ಕರಗುವ ಫೈಬರ್ ಫ್ರಕ್ಟಾನ್‌ಗಳು ಸಹ ವಾಯು ಮತ್ತು ಎದೆಯುರಿ ಉಂಟು ಮಾಡುತ್ತವೆ.