ಮನೆಕಟ್ಟೋ ಮಂದಿಗೆ ಬಿಗ್ ಶಾಕ್ | ಸಿಮೆಂಟ್ ಕಂಪನಿಗಳಿಂದ ಬೆಲೆ ಏರಿಕೆಯ ನಿರ್ಧಾರ

ದಿನದಿಂದ ದಿನಕ್ಕೆ ದಿನಸಿಯಿಂದ ಹಿಡಿದು, ಗೃಹಪಯೋಗಿ ವಸ್ತುಗಳ ಜೊತೆಗೆ ಪ್ರತಿ ವಸ್ತುಗಳ ದರ ಏರಿಕೆಯಾಗುತ್ತಿದ್ದು ಸಾಮಾನ್ಯ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ ಕೋರೋನಾ ಮಹಾಮಾರಿ ಎದುರಾದ ಬಳಿಕ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈನಡುವೆ ಮನೆ ಕಟ್ಟುವ ಕನಸನ್ನು ಹೊತ್ತವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.


ಹೌದು. ಸಿಮೆಂಟ್ ಕಂಪನಿಗಳು ಕಳೆದ ತಿಂಗಳು ಪ್ರತಿ ಚೀಲಕ್ಕೆ ಸುಮಾರು 3-4 ರೂ.ಗಳ ಹೆಚ್ಚಳದ ನಂತರ ನವೆಂಬರ್ ನಲ್ಲಿ ಪ್ರತಿ ಚೀಲಕ್ಕೆ 10 ರಿಂದ 30 ರೂ.ಗಳ ನಡುವೆ ಬೆಲೆಯನ್ನು ಹೆಚ್ಚಿಸಲು ಯೋಜನೆ ರೂಪಿಸಿಕೊಡಿವೆ. ಈ ಕುರಿತು ಎಮ್ಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಇತ್ತೀಚಿನ ವಲಯ ವರದಿಯಲ್ಲಿ ತಿಳಿಸಿದೆ.


2022 ರ ಅಕ್ಟೋಬರ್ ನಲ್ಲಿ ಸರಾಸರಿ ಪ್ಯಾನ್-ಇಂಡಿಯಾ ಸಿಮೆಂಟ್ ಬೆಲೆ ಏರಿಕೆಯು ಪ್ರತಿ ಚೀಲಕ್ಕೆ ಸುಮಾರು 3-4 ರೂ.ಗಳಷ್ಟಿತ್ತು . ತಿಂಗಳಿನ ಆಧಾರದ ಮೇಲೆ, ಬೆಲೆಗಳು ಪೂರ್ವ ಮತ್ತು ದಕ್ಷಿಣದಲ್ಲಿ ಶೇಕಡಾ 2-3 ರಷ್ಟು ಮತ್ತು ಪಶ್ಚಿಮದಲ್ಲಿ ಸುಮಾರು ಶೇಕಡಾ 1 ರಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.


ಆದರೆ ಉತ್ತರ ಮತ್ತು ಮಧ್ಯ ಪ್ರದೇಶಗಳಲ್ಲಿ ಶೇಕಡಾ 1-2 ರಷ್ಟು ಕುಸಿದಿದ್ದು, ಸಿಮೆಂಟ್ ಕಂಪನಿಗಳು ನವೆಂಬರ್ 22 ರಂದು ಪ್ರದೇಶಗಳಾದ್ಯಂತ ಪ್ರತಿ ಚೀಲಕ್ಕೆ 10-30 ರೂ.ಗಳ ಬೆಲೆ ಏರಿಕೆಗೆ ಪ್ರಯತ್ನಿಸುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಈ ಬೆಲೆ ಏರಿಕೆಯ ಬಹಿರಂಗಪಡಿಸುವ ಸಾದ್ಯತೆ ದಟ್ಟವಾಗಿದೆ.

Leave A Reply

Your email address will not be published.