ಖುಲ್ಲಂ ಖುಲ್ಲ ಕಿಸ್ಸಿಂಗ್ ಮಾಡಿದ ನಿವಿ ಚಂದನ್ ಶೆಟ್ಟಿ ಜೋಡಿ | ಲಿಪ್ ಲಾಕ್ ಗೆ ಫಿದಾ ಆದ ನೆಟ್ಟಿಗರು

Share the Article

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ಕಿರುತೆರೆಯ ಸ್ಟಾರ್ ಜೋಡಿ ಎಂದೇ ಹೇಳಬಹುದು. ಸೋಷಿಯಲ್ ಮೀಡಿಯಾದಲ್ಲಿ (Social Media) ಸದಾ ಆಕ್ಟಿವ್ ಆಗಿರುತ್ತಾರೆ ಈ ಜೋಡಿ. ಏನಾದರೊಂದು ಫನ್ನಿ ವೀಡಿಯೋ ಮಾಡಿ ಅಭಿಮಾನಿಗಳೊಂದಿಗೆ ತಮ್ಮ ಅಪ್ಡೇಟ್‌ಗಳನ್ನು ಶೇರ್ ಮಾಡುತ್ತಲೇ ಇರುವ ಜೋಡಿ ಈ ಹಿಂದೆ ಲಿಪ್ ಕಿಸ್ ಮಾಡಿದ ವಿಡಿಯೋ (Video) ಶೇರ್ ಮಾಡಿದ್ದರು. ಆದರೆ ಈಗ ಮತ್ತೊಮ್ಮೆ ಖುಲ್ಲಂ ಖುಲ್ಲ ಕಿಸ್ಸಿಂಗ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇದರಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಲಿಪ್ ಕಿಸ್ ಮಾಡುವ ದೃಶ್ಯ ಇದೆ. ನಿವೇದಿತಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದು ಈಗಾಗಲೇ ವೈರಲ್ (Viral) ಆಗ್ಬಿಟ್ಟಿದೆ.
ಪತಿಯನ್ನು ಹಗ್ ಮಾಡಿ ನಿವೇದಿತಾ ಲಿಪ್ ಕಿಸ್ ಮಾಡುವ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮನೆಯೊಳಗಿನ ದೃಶ್ಯ, ಕಾರ್ ಪ್ರಯಾಣ, ಏರ್ಪೋಟ್ ಲುಕ್ ಎಲ್ಲಾ ಇದೆ. ವಿಡಿಯೋ ಶೇರ್ ಮಾಡುವಾಗ ನಿವೇದಿತಾ ಅವರು ನಾನು ಈಗಲೇ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಆದರೆ ಈ ಕಿಸ್ಸಿಂಗ್ ವೀಡಿಯೋವನ್ನು ಇಷ್ಟಪಡದ ಕೆಲವೊಂದು ನೆಟ್ಟಿಗರು ಬೆಡ್‌ರೂಂಗೆ ಹೋಗಿ, ಪಬ್ಲಿಕ್‌ನಲ್ಲಿ ಯಾಕೆ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು ನೀವಿಬ್ಬರೂ ಗಂಡ ಹೆಂಡತಿ ಅನ್ನೋದು ಇಡೀ ಭಾರತಕ್ಕೇ ಗೊತ್ತು ಬಿಡಿ ಎಂದಿದ್ದಾರೆ. ಅಂತೂ ಇಂತೂ ಅಭಿಮಾನಿಗಳು ಕಿರುತೆರೆ ಜೋಡಿಯ ವಿಡಿಯೋ ನೋಡಿ ಖುಷಿಪಟ್ಟಿದ್ದಾರೆ.

ಏನೇ ಆಗಲಿ, ನಿವೇದಿತಾ ಗೌಡ ಪೋಸ್ಟ್ ಮಾಡಿರುವ ಈ ವಿಡಿಯೋಗೆ ಇಲ್ಲಿವರೆಗೂ ಸುಮಾರು 96 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. ಅಂದರೆ 1 ಲಕ್ಷ ಲೈಕ್ಸ್ ಹತ್ತಿರ ತಲುಪಿದೆ ಈ ವಿಡಿಯೋ. 1000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ.

https://www.instagram.com/reel/CkaaS6Ipysl/?utm_source=ig_web_copy_link
Leave A Reply