BSNL : ಬಿಎಸ್ ಎನ್ ಎಲ್ ನಿಂದ ಭರ್ಜರಿ ಆಫರ್ | ಈ ಪ್ಲಾನ್ ಗಳ ವಿಶೇಷತೆ ತಿಳಿಯಿರಿ!!!

ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಗಳಾದ ರಿಲಯನ್ಸ್ ಜಿಯೋ (Reliance Jio), ಏರ್ಟೆಲ್ (Airtel) ಹಾಗೂ ವೋಡಾಫೋನ್ ಐಡಿಯಾ (Vodafone Idea) ಇತ್ತೀಚೆಗೆ ಬಿದ್ದವರಂತೆ ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿದೆ.

ಇದರ ಜೊತೆಗೆ 5ಜಿ ಸೇವೆಯನ್ನು ಕೂಡ ಪರಿಚಯಿಸುತ್ತಿರುವುದರಿಂದ ಹೀಗಿರುವಾಗ ಬಿಎಸ್​ಎನ್​ಎಲ್ ಸದ್ದಿಲ್ಲದೆ ಎರಡು ಹೊಸ ಧಮಾಕ ಯೋಜನೆಗಳನ್ನು ಅನಾವರಣ ಮಾಡಿತ್ತು. ಇದೀಗ ಮತ್ತೊಮ್ಮೆ ಹೊಸ ಪ್ಲಾನ್ ಮೂಲಕ ಜನರ ಮನ ಗೆಲ್ಲುವ ಪ್ರಯತ್ನ ನಡೆಸುತ್ತಿದೆ.

ಕೆಲವು ವರ್ಷಗಳ ಹಿಂದೆ ಟೆಲಿಕಾಂ ಮಾರುಕಟ್ಟೆ ಯಲ್ಲಿ ತನ್ನದೇ ಛಾಪು ಮೂಡಿಸಿ ನಂಬರ್ ಒನ್ ಸ್ಥಾನದಲ್ಲಿದ್ದ ಸರ್ಕಾರಿ ಒಡೆತನದ ಭಾರತೀಯ ಸಂಚಾರ್‌ ನಿಗಮ ಲಿಮಿಟೆಡ್ ಬಿಎಸ್​ಎನ್​ಎಲ್ (BSNL)​ ಇದೀಗ ಪಾತಾಳಕ್ಕೆ ಕುಸಿದ ಬಳಿಕ ಮೇಲೇಳಲು ಹರಸಾಹಸ ಪಡುತ್ತಿದೆ.

ಸರಕಾರದ ನೀತಿಗಳು, ಖಾಸಗಿ ಟೆಲಿಕಾಂ ಕಂಪನಿಗಳು ದರ ಸಮರ ಸೇರಿ ಅನೇಕ ಕಾರಣಗಳಿಂದ ಬಿಎಸ್​ಎನ್​ಎಲ್ ದೊಡ್ದ ಮಟ್ಟದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದರೂ ಕೂಡ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಯಾಕೇಜ್ ನೀಡಲು ಮುಂದಾಗಿದೆ.

ಬಿಎಸ್​ಎನ್​ಎಲ್​ 269 ರೂ. ಹಾಗೂ 769 ರೂ. ವಿನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದ ಬೆನ್ನಲ್ಲೆ, ಮತ್ತೆರಡು ಪ್ಲಾನ್ ಜಾರಿಗೆ ತರಲಾಗಿದೆ . ಭಾರತೀಯ ಸಂಚಾರ ನಿಗಮ ಇದೀಗ ಎರಡು ಹೊಸ ಪ್ರಮುಖ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದು, ಒಂದು ವರ್ಷ ವ್ಯಾಲಿಡಿಟಿ ಇರುವ 1198 ರೂಗಳ ಒಂದು ಪ್ಲಾನ್, ಮತ್ತು 3 ತಿಂಗಳು ವ್ಯಾಲಿಡಿಟಿ ಇರುವ 439 ರೂಗಳ ಇನ್ನೊಂದು ಪ್ಲಾನ್ ಅನ್ನು ಬಿಎಸ್‌ಎನ್‌ಎಲ್ ಜಾರಿಗೆ ತರಲು ಮುಂದಾಗಿದೆ.

ಬಿಎಸ್‌ಎನ್‌ಎಲ್ ತನ್ನ ಪ್ರೀಪೇಡ್ ಗ್ರಾಹಕರಿಗೆ ನೀಡಿರುವ ದೀಪಾವಳಿ ಆಫರ್ ಆಗಿದ್ದು 30 ದಿನಗಳ ವ್ಯಾಲಿಡಿಟಿ ಇರುವ 269 ರೂ ಮತ್ತು 90 ದಿನಗಳ ವ್ಯಾಲಿಡಿಟಿ ಇರುವ 769 ರೂಗಳ ಎಂಟರ್ಟೈನ್ಮೆಂಟ್ ಮತ್ತು ಗೇಮಿಂಗ್ ವೋಚರ್‌ಗಳನ್ನೂ ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಬಿಎಸ್‌ಎನ್‌ಎಲ್ ಎರಡು ಸ್ಪೆಷಲ್ ವೋಚರ್‌ಗಳನ್ನೂ ಬಿಡುಗಡೆ ಮಾಡಿದೆ. ಇವು ಮನರಂಜನೆ ಮತ್ತು ಗೇಮಿಗ್ ವೋಚರ್‌ಗಳು. 269 ರೂಪಾಯಿಯ ವೋಚರ್ 30 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದ್ದು, ಇದು ಅನ್‌ಲಿಮಿಟೆಡ್ ಕಾಲ್, ದಿನಕ್ಕೆ 2ಜಿಬಿ ಡಾಟಾ, ದಿನಕ್ಕೆ 100 ಎಸ್ಸೆಮ್ಮೆಸ್ ಸೌಲಭ್ಯ ನೀಡುತ್ತದೆ.

ಜೊತೆಗೆ ಎಷ್ಟು ಬೇಕಾದರು ಬಿಎಸ್‌ಎನ್‌ಎಲ್‌ನ ಟ್ಯೂನ್‌ಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಚಾಲೆಂಜಸ್ ಅರೇನಾ ಗೇಮ್‌ಗಳನ್ನು ಆಡಬಹುಸಾಗಿದೆ. ಇನ್ನೂ ಹಲವು ಎಂಟರ್ಟೈನ್ಮೆಂಟ್ ಸೌಲಭ್ಯಗಳನ್ನು ಈ ಪ್ಲಾನ್‌ನಿಂದ ಪಡೆಯಬಹುದು.

769 ರೂಪಾಯಿಯ ವೋಚರ್ ಕೂಡ ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ನೀಡುತ್ತದೆ. ಆದರೆ, ವ್ಯಾಲಿಡಿಟಿ ಅವಧಿ ಮೂರು ತಿಂಗಳು ಇರುತ್ತದೆ.

1198 ರೂ.ಗಳ ಪ್ಲಾನ್ ಮೂಲಕ ಮೂಲ ಸೌಲಭ್ಯಗಳೊಂದಿಗೆ ಸುದೀರ್ಘ ಅವಧಿ ಅಂದರೆ, ಒಂದು ವರ್ಷ ವ್ಯಾಲಿಡಿಟಿ ಹೊಂದಿದೆ. ಇದರ ಜೊತೆಗೆ ಪ್ರತೀ ತಿಂಗಳು 3ಜಿಬಿ ಡಾಟಾ, 300 ನಿಮಿಷ ಟಾಕ್ ಟೈಮ್, 30 ಎಸ್ ಎಂ ಎಸ್ ಸೌಲಭ್ಯ ಕೂಡ ಬಿ ಎಸ್ ಎನ್ ಎಲ್ ಗ್ರಾಹಕರಿಗೆ ದೊರೆಯಲಿದೆ.

ಹೆಚ್ಚು ಇಂಟರ್ನೆಟ್ ಬಳಸದೇ ಕೇವಲ ಕರೆಗೆ ಮಾತ್ರ ಬಳಸುವುದಾದರೆ ಬಿಎಸ್‌ಎನ್‌ಎಲ್‌ನ ಈ ಪ್ಲಾನ್ ಹೇಳಿ ಮಾಡಿಸಿದಂತೆ ಇದೆ. ಗ್ರಾಹಕರು ಹೆಚ್ಚು ಇಂಟರ್ನೆಟ್ ಅವಶ್ಯಕತೆ ಬೇಕೆನಿಸಿದಾಗ ಅದಕ್ಕಾಗಿ ಅಲ್ಪ ಹಣ ಕಟ್ಟಿ ಡಾಟಾ ಟಾಪ್ ಅಪ್ ತೆಗೆದುಕೊಳ್ಳಬಹುದಾಗಿದೆ.

439 ರೂ. ಪ್ಲಾನ್ ನಲ್ಲಿ ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುವ ಅಗತ್ಯ ಇರುವ ಜನರಿಗೆ ಈ ಪ್ಲಾನ್ ಸೂಕ್ತವಾಗಿದೆ. 439 ರೂಪಾಯಿಯ ಈ ಪ್ಲಾನ್ 90 ದಿನ, ಅಂದರೆ ಮೂರು ತಿಂಗಳ ಕಾಲ ವ್ಯಾಲಿಡಿಟಿ ಹೊಂದಿದೆ. ಜೊತೆಗೆ ಇದು ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಒದಗಿಸುತ್ತದೆ.

ಆದರೆ, ಈ ಪ್ಲಾನ್‌ನಲ್ಲಿ ಡಾಟಾ ದೊರೆಯುವುದಿಲ್ಲ. ಇಂಟರ್ನೆಟ್‌ನ ಅಗತ್ಯ ಇಲ್ಲದೇ, ಕೇವಲ ದೂರವಾಣಿ ಕರೆ ಮಾತ್ರ ಉಪಯೋಗಿಸಬೇಕೆನ್ನುವವರಿಗೆ ಒಳ್ಳೆಯ ಪ್ಲಾನ್ ಆಗಿದೆ.

ಇದರ ಜೊತೆಗೆ ತಿಂಗಳಿಗೆ 150 ರೂಪಾಯಿಗಿಂತ ಕಡಿಮೆ ದರಕ್ಕೆ ಈ ಸೌಲಭ್ಯ ಪಡೆಯಬಹುದಾಗಿದೆ. ಇದಲ್ಲದೆ ಗಂಟೆಗಟ್ಟಲೆ ಬೇಕಾದರೂ ಮಾತನಾಡಬಹುದಾಗಿದೆ. ಜೊತೆಗೆ 300 ಎಸ್ಸೆಮ್ಮೆಸ್ ಕಳುಹಿಸಬಹುದಾಗಿದೆ.

Leave A Reply

Your email address will not be published.