Home latest ಭೀಕರತೆಯ ಪರಮಾವಧಿ : ಟೈಲರ್ ನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ ತೃತೀಯ ಲಿಂಗಿಗಳು!

ಭೀಕರತೆಯ ಪರಮಾವಧಿ : ಟೈಲರ್ ನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ ತೃತೀಯ ಲಿಂಗಿಗಳು!

Hindu neighbor gifts plot of land

Hindu neighbour gifts land to Muslim journalist

ಕೆಲವೊಂದು ವರದಿಗಳನ್ನು ಕಂಡಾಗ ಹೀಗೂ ಉಂಟೇ?? ಎಂಬ ಪ್ರಶ್ನೆ ಕಾಡದಿರದು!! ಮನುಷ್ಯರ ಮನಸ್ಥಿತಿಯೇ ವಿಭಿನ್ನ!! ಇದೇ ರೀತಿ ವಿಚಿತ್ರ ಮನಸ್ಥಿತಿಯ ವ್ಯಕ್ತಿಗಳು ಮಾಡಿರುವ ಪ್ರಹಸನ ಕೇಳಿದರೆ ನೀವೂ ಅಚ್ಚರಿಯಾಗುವುದು ಖಚಿತ.

ಹೌದು!! ಒಂದು ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಮುನ್ನಲೆಗೆ ಬಂದಿದೆ. ತಮ್ಮೊಂದಿಗೆ ಆತ ಕೂಡ ನಪುಂಸಕನಾಗಬೇಕು ಎನ್ನುವ ಉದ್ದೇಶದಿಂದ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಇಬ್ಬರು ತೃತೀಯ ಲಿಂಗಿಗಳು ವ್ಯಕ್ತಿಯೊಬ್ಬನ ಮರ್ಮಾಂಗವನ್ನೇ ಕತ್ತರಿಸಿದ ಆಘಾತಕಾರಿ ಘಟನೆ ನಡೆದಿದೆ.

ಠಾಣಾಭವನ ಮತ್ತು ಗರ್ಹಿ ಪುಖ್ತಾದಲ್ಲಿ ವಾಸಿಸುತ್ತಿದ್ದ ತೃತೀಯ ಲಿಂಗಿಗಳಾದ ಪಿಂಕಿ ಹಾಗೂ ರೇಷ್ಮಾ ಜೊತೆ ಉತ್ತಮ ಸಂಬಂಧ ಹೊಂದಿದ್ದ ಜಬ್ಬಾರ್‌ ವೃತ್ತಿಯಲ್ಲಿ ಟೈಲರ್‌ ಆಗಿದ್ದಾರೆ . ಜಬ್ಬಾರ್ ಗೆ ಚಹಾದಲ್ಲಿ ಅಮಲು ಪದಾರ್ಥವನ್ನು ಬೆರೆಸಿ ಕುಡಿಸಿ, ಆ ಬಳಿಕ ವೃಕ್ತಿಯ ಮರ್ಮಾಂಗವನ್ನು ಕತ್ತರಿಸಿ ಶುಗರ್‌ ಮಿಲ್‌ನಲ್ಲಿ ಎಸೆದ ಘಟನೆ ನಡೆದಿದೆ.

ಜಬ್ಬಾರ್ ಯಾವುದೋ ಕೆಲಸದ ನಿಮಿತ್ತ ಠಾಣಾಭವನಕ್ಕೆ ಹೋಗಿದ್ದು, ಅಲ್ಲಿ ಪಿಂಕಿ ಮತ್ತು ರೇಷ್ಮಾಳನ್ನು ನೋಡಿದ್ದಾರೆ. ಶಾಮ್ಲಿಯಿಂದ ಬಟ್ಟೆ ಖರೀದಿಸುವ ನೆಪದಲ್ಲಿ ಅವರನ್ನು ಕಾರಿನಲ್ಲಿ ಕೂರಿಸಿದ ಪಿಂಕಿ ಮತ್ತು ರೇಷ್ಮಾ ರವರೊಂದಿಗೆ ಕಾರಿನಲ್ಲಿ ಇನ್ನೂ ನಾಲ್ವರು ಕುಳಿತಿದ್ದರು.

ಕಾರಿನಲ್ಲಿ ಹೋಗುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಪಿಂಕಿ ಅವರ ತಂಡ ಜಬ್ಬಾರ್ ಗೆ ಚಹಾ ನೀಡಿದ್ದಾರೆ. ಅದನ್ನು ಕುಡಿದ ಬಳಿಕ ಪ್ರಜ್ಞೆ ತಪ್ಪಿದ್ದು, ಈ ಸಮಯದಲ್ಲಿ ಕಾರಿನಲ್ಲಿದ್ದ ತಂಡ ಟೈಲರ್ ನ ಮರ್ಮಾಂಗವನ್ನು ಕತ್ತರಿಸಿ ಠಾಣಾಭವನ ಜಿಲ್ಲೆಯ ಸಕ್ಕರೆ ಕಾರ್ಖಾನೆ ಬಳಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಸಂತ್ರಸ್ತ ಶಹಜಾದ್ ಅವರ ಪುತ್ರ ಜಬ್ಬಾರ್ ಠಾಣಾಭವನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಠಾಣಾ ಭವನ ಮತ್ತು ಗರ್ಹಿ ಗುಪ್ತಾದಲ್ಲಿ ವಾಸ ಮಾಡುತ್ತಿರುವ ಇಬ್ಬರು ತೃತೀಯ ಲಿಂಗಿಗಳ ಜೊತೆ ತಂದೆ ಉತ್ತಮ ಸ್ನೇಹ ಸಂಬಂಧ ಇಟ್ಟುಕೊಂಡಿದ್ದಾಗಿ ತಿಳಿಸಿದ್ದಾರೆ.

ಇವರ ಜೊತೆಗೆ ಜಬ್ಬಾರ್ ಕೂಡ ಠಾಣಾಭವನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಚಹಾ ನೀಡಿ ಪ್ರಜ್ಞೆ ತಪ್ಪಿಸಿ ಮರ್ಮಾಂಗ ಕೊಯ್ದ ಪ್ರಕರಣದ ಕುರಿತು ದೂರು ದಾಖಲಿಸಿ ಪ್ರಕರಣದ ವಿವರ ನೀಡಿದ್ದಾರೆ.

ಜಬ್ಬಾರ್‌ಗೆ ಪ್ರಜ್ಞೆ ಬಂದ ಕೂಡಲೇ ಮನೆಯವರಿಗೆ ಕರೆ ಮಾಡಿದ್ದು, ಮನೆಯವರು ತಕ್ಷಣ ಆತನನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಅವರನ್ನು ಉನ್ನತ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಸಿಂಗ್ ತಿಳಿಸಿದ್ದಾರೆ.

ಜಬ್ಬಾರ್‌ ನೀಡಿದ ದೂರಿನ ಆಧಾರದ ಮೇಲೆ, ಶಾಮ್ಲಿ ಎಎಸ್‌ಪಿ ಓಪಿ ಸಿಂಗ್ ಅವರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 328 ಮತ್ತು 326 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಯುತ್ತಿದೆ. ನಾವು ಮತ್ತೊಬ್ಬರೊಂದಿಗೆ ಸ್ನೇಹ ಬೆಳೆಸುವಾಗ ಜಾಗರೂಕರಾಗಿರಬೇಕು ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ .