Financial Year : ಅಮೆರಿಕದಲ್ಲಿ ಹಣಕಾಸು ವರ್ಷ ಅಕ್ಟೋಬರ್ ನಲ್ಲಿ | ಭಾರತದಲ್ಲಿ ಎಪ್ರಿಲ್ ನಿಂದ ಪ್ರಾರಂಭ- ಯಾಕೆ?
ನಮ್ಮಲ್ಲಿ ವರ್ಷದ ಆರಂಭ ಜನವರಿಯಿಂದ ಡಿಸೆಂಬರ್ ಗೆ ಅಂತ್ಯವಾಗುವುದು ಎಲ್ಲರಿಗೂ ತಿಳಿದಿರುವಂತದ್ದೇ!!! ಹಾಗೆಯೇ ಹಣಕಾಸು ವಹಿವಾಟಿಗೆ ಫೈನಾನ್ಷಿಯಲ್ ಇಯರ್ ಏಪ್ರಿಲ್ 1ರಿಂದ ಮಾರ್ಚ್ 31ರವರೆಗೆ ಪರಿಗಣಿಸುವುದು ವಾಡಿಕೆ.
ಈ ಅವಧಿಯಲ್ಲಿ ವರ್ಷದಲ್ಲಿ ಕಂಪನಿಗಳು ಆದಾಯ ಗಳಿಕೆ, ನಷ್ಟದ ವಿಮರ್ಶೆ ನಡೆಸಿ ಆದಾಯ ತೆರಿಗೆಯನ್ನು ಹಣಕಾಸು ದತ್ತಾಂಶಗಳನ್ನು ಪರಿಶೀಲಿಸಿ ಪಾವತಿ ಮಾಡಲಾಗುತ್ತದೆ.
ಭಾರತದಲ್ಲಿ ಏಪ್ರಿಲ್ 1ರಿಂದ ಮಾರ್ಚ್ 31ರವರೆಗಿನ ಹಣಕಾಸು ವರ್ಷವಿದ್ದಂತೆ ಬೇರೆ ದೇಶಗಳು ಕೂಡ ಇದೇ ಸಮಯವನ್ನು ಪರಿಗಣಿಸುತ್ತಾರೆ ಎನ್ನಲಾಗದು. ಅಮೆರಿಕದಲ್ಲಿ ಅಕ್ಟೋಬರ್ 1ರಿಂದ ಹಣಕಾಸು ವರ್ಷದ ಅವಧಿ ಆರಂಭವಾದರೆ, ಬೇರೆ ದೇಶಗಳಲ್ಲಿ ಹಣಕಾಸು ವರ್ಷದಲ್ಲಿ ಪರಿಗಣಿಸುವ ಅವಧಿ ವಿಭಿನ್ನವಾಗಿರುತ್ತದೆ.
ಒಂದು ವರ್ಷವನ್ನು ನಾಲ್ಕು ತ್ರೈಮಾಸಿಕ ಅವಧಿಗಳಾಗಿ ವಿಭಾಗಿಸಲಾಗುತ್ತದೆ. ಜನವರಿಯಿಂದ ಮಾರ್ಚ್‌ವರೆಗೆ ಒಂದು ಅವಧಿ, ಏಪ್ರಿಲ್‌ನಿಂದ ಜೂನ್‌ವರೆಗೆ ಇನ್ನೊಂದು, ಜುಲೈನಿಂದ ಸೆಪ್ಟೆಂಬರ್‌ವರೆಗೆ ಮತ್ತೊಂದು, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಮಗದೊಂದು ತ್ರೈಮಾಸಿಕ ಅವಧಿಯಾಗಿದೆ.
ಬೇರೆ ಬೇರೆ ದೇಶಗಳಲ್ಲಿ ಹಣಕಾಸು ವರ್ಷದ ಆರಂಭ ಈ ನಾಲ್ಕು ಅವಧಿಯ ಪೈಕಿ ಒಂದರದ್ದಾಗಿರುತ್ತದೆ. ಇರಾನ್ ಮೊದಲಾದ ಕೆಲ ದೇಶಗಳಲ್ಲಿ ಮಾತ್ರ ವಿಭಿನ್ನ ದಿನಗಳಲ್ಲಿ ಹಣಕಾಸು ವರ್ಷ ಆರಂಭವಾಗುತ್ತದೆ.
ಭಾರತದಲ್ಲಿ ಅನುಸರಿಸುವಂತೆ ಇನ್ನೂ ಹಲವು ದೇಶಗಳಲ್ಲಿ ಏಪ್ರಿಲ್ 1ರಿಂದ ಹಣಕಾಸು ವರ್ಷ ಆರಂಭವಾಗುತ್ತದೆ. ಚೀನಾ ಮೊದಲಾದ ಹಲವು ದೇಶಗಳಲ್ಲಿ ಕ್ಯಾಲೆಂಡರ್ ವರ್ಷದಂತೆ ಜನವರಿ 1ರಿಂದಲೇ ಹಣಕಾಸು ವರ್ಷವಾಗಿರುತ್ತದೆ.
ವಿಶ್ವದ ಬಹುದೇಶಗಳಲ್ಲಿ ಕ್ಯಾಲೆಂಡರ್ ವರ್ಷವೇ ಹಣಕಾಸು ವರ್ಷವಾಗಿದೆ. ಭಾರತದಲ್ಲಿ ಏಪ್ರಿಲ್ 1ರಿಂದ ಹಣಕಾಸು ವರ್ಷ ಅಥವಾ ಫೈನಾನ್ಷಿಯಲ್ ಇಯರ್ ಎಂದು ಪರಿಗಣಿಸುತ್ತಾರೆ ಎಂಬ ಕುತೂಹಲಕಾರಿ ಪ್ರಶ್ನೆ ಹಲವರನ್ನು ಕಾಡಿರಬಹುದು.
ಇದಕ್ಕೆ ಸ್ಪಷ್ಟ ಕಾರಣ ಸಿಗದೇ ಇದ್ದರೂ ಕೂಡ ಬ್ರಿಟನ್ ದೇಶದಲ್ಲಿ ಹಿಂದೆ ಏಪ್ರಿಲ್ 1ರಿಂದಲೇ ಹಣಕಾಸು ವರ್ಷ ಆರಂಭಿಸಲಾಗುತ್ತಿತ್ತು. ಬ್ರಿಟನ್‌ನಲ್ಲಿ ಸದ್ಯ ಏಪ್ರಿಲ್ 6ರಿಂದ ಹಣಕಾಸು ವರ್ಷ ಪ್ರಾರಂಭವಾಗುತ್ತದೆ. ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿದ್ದರಿಂದ ಇದೇ ಪದ್ಧತಿ ಅನುಕರಣೆ ಮಾಡಿ ಅನುಸರಿಡಿರಬಹುದು ಎಂಬ ಊಹೆಯಿದೆ.
ಇದರ ಜೊತೆಗೆ ಭಾರತದಲ್ಲಿ ಹಿಂದೂ ಕ್ಯಾಲೆಂಡರ್ ನ ಅನ್ವಯ ಯುಗಾದಿ ಹಬ್ಬವನ್ನು ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುವುದರಿಂದ ಈ ಸಮಯದಲ್ಲಿ ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಬಹುತೇಕ ಕೃಷಿ ಬೆಳೆಯನ್ನೂ ಋತು ಏಪ್ರಿಲ್‌ನಿಂದ ಆರಂಭಿಸುತ್ತಿದ್ದುದರಿಂದ ಏಪ್ರಿಲ್ 1ರಿಂದಲೇ ಹಣಕಾಸು ವರ್ಷವನ್ನು ಆರಂಭಿಸಲು ನಿರ್ಧರಿಸಿರಬಹುದು ಎಂಬ ಕಲ್ಪನೆಯೂ ಕೂಡ ಇದೆ.
ಜನವರಿ ಹಾಗೂ ಅಕ್ಟೋಬರ್‌ನಲ್ಲಿ ಹೆಚ್ಚು ಹಬ್ಬಗಳ ಆಚರಣೆ ನಡೆಯುವುದರಿಂದ ಅದರಲ್ಲೂ ಕೂಡ ಭಾರತದಲ್ಲಿ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಹಬ್ಬದ ಋತು ಇದ್ದು, ಈ ವೇಳೆ ವ್ಯಾಪಾರ ವಹಿವಾಟ ಬಹಳ ಹೆಚ್ಚಿರುತ್ತದೆ.
ಈ ಸಂದರ್ಭದಲ್ಲಿ ಲೆಕ್ಕಗಳನ್ನು ಪೂರ್ಣಗೊಳಿಸಲು ಕಷ್ಟವಾಗುತ್ತದೆ. ಹೀಗಾಗಿ, ಏಪ್ರಿಲ್ 1ರಿಂದ ಹಣಕಾಸು ವರ್ಷ ಆರಂಭಿಸಿರಬಹುದು.
ಏಪ್ರಿಲ್ 1ರಿಂದ ಮಾರ್ಚ್ 31ರ ಹಣಕಾಸು ವರ್ಷ ಇರುವ ದೇಶಗಳ ಪಟ್ಟಿ ಹೀಗಿವೆ: ಭಾರತ, ಜಪಾನ್, ಕೆನಡಾ, ಸೌತ್ ಆಫ್ರಿಕಾ, ನ್ಯೂಜಿಲೆಂಡ್, ಆಂಟಿಗುವಾ ಅಂಡ್ ಬರ್ಬುಡಾ, ಬಾರ್ಬಡೋಸ್, ಬೆಲಿಜೆ, ಬೋಟ್ಸವಾನ, ಬ್ರೂನೆ, ಸ್ವಾಜಿಲ್ಯಾಂಡ್, ಜಮೈಕಾ, ಕುವೇತ್, ಲೆಸೋತೋ, ನಮೀಬಿಯಾ, ಕತಾರ್, ಸೇಂಟ್ ಲೂಸಿಯಾ, ಸಿಂಗಾಪುರ ದೇಶ ಗಳಲ್ಲಿ ಏಪ್ರಿಲ್ 1ರಿಂದ ಮಾರ್ಚ್ 31ರ ಅವಧಿಯನ್ನು ಫೈನಾನ್ಷಿಯಲ್ ಇಯರ್ ಎಂದು ಪರಿಗಣಿಸುತ್ತಾರೆ.
ನೇಪಾಳದಲ್ಲಿ ಜುಲೈ 16ರಿಂದ ಹಣಕಾಸು ವಹಿವಾಟುಗಳು ಆರಂಭವಾದರೆ, ಅಫ್ಗಾನಿಸ್ತಾನದಲ್ಲಿ ಡಿಸೆಂಬರ್ 21ರಿಂದ, ಇರಾನ್ನಲ್ಲಿ ಮಾರ್ಚ್ 21ರಿಂದ ,ಬ್ರಿಟನ್: ಏಪ್ರಿಲ್ 6ರಿಂದ, ಇಥಿಯೋಪಿಯಾ ಜುಲೈ 8ರಿಂದ ಹಾಗೆಯೇ ಸಮೋವಾದಲ್ಲಿ ಜೂನ್ 1ರಿಂದ ಹಣಕಾಸಿನ ವ್ಯವಹಾರ ಆರಂಭವಾಗುತ್ತವೆ. ಈ ಮೇಲಿನ ಪಟ್ಟಿಗಳಲ್ಲಿ ಇಲ್ಲದ ದೇಶಗಳಲ್ಲಿ ಹಣಕಾಸು ವರ್ಷ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಇರುತ್ತದೆ.
ಜುಲೈ 1ರಿಂದ ಹಣಕಾಸು ವರ್ಷವಿರುವ ದೇಶಗಳು ಆಸ್ಟ್ರೇಲಿಯಾ, ಬಾಂಗ್ಲಾದೇಶ, ಬಹಮಾಸ್, ಭೂತಾನ್, ಕ್ಯಾಮರೂನ್, ಈಜಿಪ್ಟ್, ಕೀನ್ಯಾ, ಮಲಾವಿ, ಮಾರಿಷಸ್, ನೌರು, ಪಾಕಿಸ್ತಾನ, ಟೋಂಗಾ, ಉಗಾಂಡ, ತಾಂಜಾನಿಯಾ.
ಆಗಸ್ಟ್ 1ರಿಂದ ಹಣಕಾಸು ವರ್ಷ ಇರುವ ದೇಶಗಳ ಪಟ್ಟಿ ಹೀಗಿವೆ.
ಅಮೆರಿಕ, ಹೈತಿ, ಲಾವೋ, ಮಾರ್ಷನ್ ಐಲೆಂಡ್ಸ್, ಮೈಕ್ರೋನೇಷ್ಯಾ, ಮಯನ್ಮಾರ್, ಪಲಾವೋ, ಥಾಯ್ಲೆಂಡ್, ಟ್ರಿನಿಡಾಡ್ ಟೊಬಾಗೊ ಈ ದೇಶದಲ್ಲಿ ಹಣಕಾಸು ವಹಿವಾಟುಗಳು ಆಗಸ್ಟ್ 1ರಿಂದ ಆರಂಭವಾಗುತ್ತವೆ.