ಮಗಳಿಗೆ ಏಡಿ ಕಚ್ಚಿತೆಂದು, ಸೇಡು ತೀರಿಸಲು ಜೀವಂತ ಏಡಿಯನ್ನು ತಿಂದ ತಂದೆ | ಅನಂತರ ನಡೆದದ್ದು ಭಯಾನಕ!!!

ಸೇಡಿಗೆ ಸೇಡು ಎಂದರೆ ಇದೆನಾ? ಅದು ಕೂಡಾ ಈ ಸೇಡು ಓರ್ವ ತಂದೆಯದ್ದು. ಇದು ಮಾತ್ರ ಅಂತಿಂಥ ಸೇಡಲ್ಲ. ತನ್ನ ಮಗಳಿಗೆ ಏಡಿ ಕಚ್ಚಿತೆಂದು ಅದೇ ಏಡಿಯನ್ನು ಜೀವಂತವಾಗಿ ತಿಂದು ಈಗ ಅಸ್ವಸ್ಥಗೊಂಡ ತಂದೆಯ ಕಥೆ ಇದು.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಹೌದು, ತನ್ನ ಮಗಳಿಗೆ ಕಚ್ಚಿದ ಏಡಿಯ ಜೊತೆಗೆ ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕು ಎಂದು ಅದನ್ನು ಜೀವಂತವಾಗಿ ಕಚ್ಚಿತಿಂದಿದ್ದಾನೆ‌. ಈ ಘಟನೆ ಚೀನಾದಲ್ಲಿ ನಡೆದಿದೆ. ಆದರೆ ಈ ರೀತಿ ಮಾಡಿದ್ದರಿಂದ ಈ ವ್ಯಕ್ತಿ ತೀವ್ರ ಅಸ್ವಸ್ಥಗೊಂಡಿದ್ದು ನಂತರ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪೂರ್ವ ಚೀನಾದ ಝಜಿಯಾಂಗ್(Zhejiang) ಪ್ರಾಂತದ 39 ವರ್ಷದ ಲು ಎಂಬಾತನ ಪುತ್ರಿಗೆ ಏಡಿಯೊಂದು ಕಚ್ಚಿದೆ. ಇದರಿಂದ ಕೆರಳಿದ ಲು ಆ ಏಡಿಯನ್ನು ಜೀವಂತ ಜಗಿದು ತಿಂದುಬಿಟ್ಟಿದ್ದಾನೆ. 2 ತಿಂಗಳ ಬಳಿಕ ಆತನಿಗೆ ತೀವ್ರ ಬೆನ್ನುನೋವು ಕಾಡಿದ್ದು ವೈದ್ಯರಲ್ಲಿ ತೆರಳಿದ್ದಾನೆ. ವೈದ್ಯರ ತಪಾಸಣೆಯಲ್ಲಿ ಆತನ ಎದೆ, ಹೊಟ್ಟೆ, ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬಂದಿದ್ದು ಆತನನ್ನು ವಿಚಾರಿಸಿದಾಗ 2 ತಿಂಗಳ ಹಿಂದೆ ಜೀವಂತ ಏಡಿಯನ್ನು ತಿಂದಿರುವ ಮಾಹಿತಿ ನೀಡಿದ್ದಾನೆ. ಆತನಿಗೆ ಅಲರ್ಜಿ ಸಮಸ್ಯೆಯಿಂದ ತೊಂದರೆ ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದಾನೆ ಎಂದು ವೈದ್ಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

error: Content is protected !!
Scroll to Top
%d bloggers like this: