Shocking News | ಸಾಲ ಕಟ್ಟಲು ವಿಫಲ, ಬೈಕ್ ಗೆ ಕಟ್ಟಿ 2 ಕಿಲೋ ಮೀಟರ್ ಗೂ ಅಧಿಕ ದೂರ ಎಳೆದೊಯ್ದ ದುಷ್ಕರ್ಮಿಗಳು

ಸಾಲ ತೀರಿಸಲು ವಿಫಲ ಆದ ಕಾರಣಕ್ಕಾಗಿ ಯುವಕನೋರ್ವನನ್ನು ದ್ವಿಚಕ್ರವಾಹನಕ್ಕೆ ಕಟ್ಟಿ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಎಳೆದೊಯ್ದಿರುವ ಘಟನೆ ನಡೆದಿದೆ. ಯುವಕನನ್ನು ಕಟ್ಟಿ ಹಾಕಿ ಎಳೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗತೊಡಗಿದ್ದು, 2 ಕಿ.ಮೀ ವರೆಗೂ ಯುವಕನನ್ನು ಎಳೆದೊಯ್ಯಲಾಗಿದೆ.

ಅಲ್ಲಿದ್ದ ಸ್ಥಳೀಯರು ಈ ಕೃತ್ಯವನ್ನು ತಡೆಯಲು ಯತ್ನಿಸಿದರಾದರೂ, ದ್ವಿಚಕ್ರ ವಾಹನದಲ್ಲಿದ್ದ ದುಷ್ಕರ್ಮಿಗಳು ಮುಂದಾಗುವ ಪರಿಣಾಮಗಳ ಬಗ್ಗೆ ಬೆದರಿಕೆ ಹಾಕಿ ಈ ವಿಷಯದಲ್ಲಿ ಮಧ್ಯಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಕಟಕ್ ನಲ್ಲಿ ನಡೆದಿದೆ.

ಆ ಸಾಲಗಾರ ಯುವಕನನ್ನು ಎಳೆದೊಯ್ದ ಮಾರ್ಗದಲ್ಲಿ ಮೂರು ಟ್ರಾಫಿಕ್ ಚೆಕ್ ಪೋಸ್ಟ್ ಗಳಿದ್ದು, ಯಾವುದೇ ಪೊಲೀಸ್ ಗಸ್ತು ತಂಡ ಅಥವಾ ಸ್ಥಳೀಯ ಪೊಲೀಸರೂ ಈ ಕೃತ್ಯವನ್ನು ತಡೆಯಲು ಮುಂದಾಗಿಲ್ಲ. ಈಗ ಮಾನವ ಹಕ್ಕುಗಳ ಕಾರ್ಯಕರ್ತರು ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.

ಅಲ್ಲಿನ ಡಿಸಿಪಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ, ಸಿಸಿಟಿವಿ ಕ್ಯಾಮರಾಗಳು, ನಿಯಂತ್ರಣ ಕೊಠಡಿಯ ಮೂಲಕ ನಗರದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಿರುವುದಾಗಿ ಹೇಳುತ್ತಾರೆ. ಆದರೆ ಅಲ್ಲಿನ ಯಾವುದೇ ವ್ಯವಸ್ಥೆ – ಪೊಲೀಸ್ ನಿಯಂತ್ರಣ ಕೊಠಡಿಯಾಗಲೀ, ಟ್ರಾಫಿಕ್ ಸಿಬ್ಬಂದಿಗಳಾಗಲೀ – ಘಟನೆಯನ್ನು ತಡೆಯಲಿಲ್ಲ ಎಂಬ ಆರೋಪ ಮೂಡಿದೆ. ಈ ಬಗ್ಗೆ ಕಟಕ್ ಜಿಲ್ಲಾ ಡಿಸಿಪಿ ಪಿನಾಕ್ ಮಿಶ್ರಾ ಹೇಳಿಕೆ ನೀಡಿದ್ದಾರೆ. ವೀಡಿಯೋ ಆಧಾರದಲ್ಲಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.