Home ಬೆಂಗಳೂರು ಹಿಂದೂ ಯುವತಿಯೊಂದಿಗೆ ಮುಸ್ಲಿಂ ಯುವಕನ ಲವ್ | ದರ್ಗಾಕ್ಕೆ ಕರೆದುಕೊಂಡು ಹೋಗಿ ಮತಾಂತರ ಆರೋಪ |

ಹಿಂದೂ ಯುವತಿಯೊಂದಿಗೆ ಮುಸ್ಲಿಂ ಯುವಕನ ಲವ್ | ದರ್ಗಾಕ್ಕೆ ಕರೆದುಕೊಂಡು ಹೋಗಿ ಮತಾಂತರ ಆರೋಪ |

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಮಾಡಬಾರದು.. ಮಾಡಿದರೆ ಜಗಕ್ಕೆ ಹೆದರಬಾರದು…ಎಂಬ ಮಾತಿನಂತೆ ಪ್ರೀತಿಯ ನಶೆಯಲ್ಲಿ ಬಿದ್ದವರಿಗೆ ಹೊರಗಿನ ಪ್ರಪಂಚದ ಅರಿವೇ ಇಲ್ಲದಂತೆ ತಮ್ಮದೇ ಪ್ರಣಯ ಲೋಕದಲ್ಲಿ ಮುಳುಗಿ ಮನೆ, ಸಂಸಾರದ ಕಟ್ಟುಪಾಡುಗಳಿಗೆ ಗುಡ್ ಬೈ ಹೇಳಿ ಓಡಿ ಹೋಗುವ ಪ್ರಕರಣಗಳೂ ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ.


ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಬಲೆಗೆ ಬಿದ್ದು, ಕುರುಡು ಪ್ರೀತಿಯ ಬೆನ್ನತ್ತಿ ಮತ್ತೆ ಒದ್ದಾಡುತ್ತ ಜೀವ ಕಂಟಕ ಸೃಷ್ಟಿಸಿಕೊಳ್ಳುವ ಅನೇಕ ಪ್ರಮೇಯಗಳು ಜರುಗುತ್ತಿದೆ.

ಕೆಲವೊಮ್ಮೆ ತಿಳಿದು ಮಾಡುವ ತಪ್ಪಿಗೆ ದೊಡ್ದ ಮಟ್ಟದ ಬೆಲೆ ತೆರಬೇಕಾಗುವ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ.
ಈ ರೀತಿಯ ಲವ್ ಜಿಹಾದ್ ಪ್ರಕರಣವೊಂದು ವರದಿಯಾಗಿದ್ದು, ಹಿಂದೂ ಯುವತಿಯನ್ನು ಮತಾಂತರ ಮಾಡಿದ ಮುಸ್ಲಿಂ ಯುವಕನ ವಿರುದ್ದ ಪ್ರಕರಣ ದಾಖಲಾಗಿದೆ.


ಹಿಂದೂ ಯುವತಿಯನ್ನು ಪ್ರೀತಿಸಿ ನೆರೆಯ ರಾಜ್ಯದ ದರ್ಗಾಕ್ಕೆ ಕರೆದೊಯ್ದು ಮತಾಂತರ ಮಾಡಿದ ಆರೋಪದಡಿ ಮುಸ್ಲಿಂ ಯುವಕನೊಬ್ಬನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶ ಮೂಲದ ದಂಪತಿ ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು , ದಂಪತಿಗೆ ಮೂರು ಹೆಣ್ಣು ಹಾಗೂ ಒಂದು ಗಂಡು ಮಗನಿದ್ದಾನೆ. ದಂಪತಿಯ ಮೂರನೇ ಮಗಳು ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದು, ಮನೆಯಲ್ಲೇ ಇದ್ದಳು.

ಈಕೆ ತನ್ನದೇ ಬಡಾವಣೆಯ ಸೈಯದ್‌ ಮೋಯಿನ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆರು ತಿಂಗಳ ಹಿಂದೆಯಷ್ಟೇ ಈ ವಿಚಾರ ಪೋಷಕರಿಗೆ ಗೊತ್ತಾಗಿ ಈ ವೇಳೆ ಪೋಷಕರು ಯುವತಿಗೆ ಬುದ್ಧಿವಾದ ಹೇಳಿದ್ದಾರೆ.
ಅ.5ರಂದು ಸಂಜೆ 4ಕ್ಕೆ ಅಂಗಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಹೋಗಿದ್ದ ಯುವತಿ ರಾತ್ರಿಯಾದರೂ ಮನೆಗೆ ವಾಪಸ್ಸಾಗದೆ ಇದ್ದಾಗ ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದರೂ ಕೂಡ ಎಲ್ಲಿಯೂ ಪತ್ತೆಯಾಗಿಲ್ಲ.

ಹೀಗಾಗಿ, ಪ್ರಿಯಕರ ಸೈಯದ್‌ ಮೋಯಿನ್‌ ಜತೆಗೆ ಯುವತಿ ಹೋಗಿರಬಹುದು ಎಂದು ಪೋಷಕರು ಅನುಮಾನಿಸಿ, ಪೋಲಿಸ್ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರ ಬಿ.ಕೆ.ನಗರ ನಿವಾಸಿ 23ರ ಹರೆಯದ ಸೈಯದ್‌ ಮೋಯಿನ್‌ ಬಂಧಿತನಾಗಿದ್ದು ಆರೋಪಿಯು ಅ.5ರಂದು ತನ್ನದೇ ಬಡಾವಣೆಯ 18 ವರ್ಷದ ಯುವತಿಯನ್ನು ಆಂಧ್ರಪ್ರದೇಶಕ್ಕೆ ಕರೆದೊಯ್ದು ದರ್ಗಾವೊಂದರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿದ್ದು ತಿಳಿದು ಬಂದಿದೆ.

ಆದರೆ, ಯುವತಿ ಸ್ವಯಂ ಮತಾಂತರವಾಗಲೂ ಒಪ್ಪಿಗೆ ನೀಡಿದ್ದಾಳಾ ಇಲ್ಲವೇ ಪ್ರಿಯಕರನ ಒತ್ತಾಯಕ್ಕೆ ಮಣಿದು ಮತಾಂತರ ವಾಗಿರುವುದೋ ಎಂಬುದು ತಿಳಿದು ಬಂದಿಲ್ಲ. ಇದರ ಕುರಿತಾಗಿ ಮುಂದಿನ ವಿಚಾರಣೆ ಬಳಿಕವಷ್ಟೇ ಸತ್ಯ ಬಹಿರಂಗವಾಗಬೇಕಾಗಿದೆ.