Alien News : ಭೂಮಿಗೆ ಬರಲಿದ್ದಾರೆ ಅನ್ಯಗ್ರಹ ಜೀವಿಗಳು | ಡಿಸೆಂಬರ್ ನ ಈ ದಿನಾಂಕ ದಂದು ಬರುವುದು ಪಕ್ಕಾ!!!
ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆ, ಆಚರಣೆ ಇರುವುದು ಸಾಮಾನ್ಯ. ಜನರು ಕೆಲ ವಿಚಾರಗಳನ್ನು ಧಾರ್ಮಿಕ ನೆಲೆಗಟ್ಟಿನ ಆಧಾರದಲ್ಲಿ ಬೆಲೆ ಕೊಟ್ಟರೆ, ಮತ್ತೆ ಕೆಲ ಪಂಡಿತರು ಇಲ್ಲವೇ ವಿಜ್ಞಾನಿಗಳು ಅದಕ್ಕೆ ವೈಜ್ಞಾನಿಕ ತಳಹದಿಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾರೆ.
ಅನ್ಯ ಗ್ರಹಗಳಲ್ಲಿ ಜೀವಿಗಳಿದ್ದಾರೆ ಎಂದು ಕೆಲವರು ನಂಬಿದರೆ, ಮತ್ತೆ ಕೆಲವರು ಜೀವಿಗಳು ಇರಲು ಸಾಧ್ಯವೇ ಇಲ್ಲವೆಂಬ ವಾದ ನಡೆಸುವುದು ಸಾಮಾನ್ಯ. ಆದರೆ, ಈ ವಾದಗಳ ನಡುವೆ ಜಿಜ್ಞಾಸೆ, ಸಂಶೋಧನೆ ಬಹಳ ಹಿಂದಿನಿಂದಲೂ ನಡೆಯುತ್ತಾ ಬರುತ್ತಿದ್ದು, ಈ ಸಂವತ್ಸರದ ಕೊನೆಯಲ್ಲಿ ಪೃಥ್ವಿಗೆ ಅನ್ಯ ಗ್ರಹ ಜೀವಿಗಳು ಕಾಣಿಸಿಕೊಳ್ಳುತ್ತವೆ ಎಂಬ ಸುದ್ದಿ ಹರಿದಾಡುತ್ತಿದೆ.
ಕೆಲವೊಂದು ಸಿನಿಮಾಗಳಲ್ಲಿ ಏಲಿಯೆನ್ಸ್ ಅನ್ನು ಕಂಡು ಏಲಿಯೆನ್ಸ್ ಎನ್ನುವ ಅನ್ಯ ಜೀವಿ ಹೀಗಿರಬಹುದು ಎಂಬ ಕಲ್ಪನೆಯಲ್ಲಿ ಮುಳುಗಿರುತ್ತೇವೆ. ಅಮೀರ್ ಖಾನ್ ‘ಪಿಕೆ’ ಚಿತ್ರದಲ್ಲಿ ಒಬ್ಬ ಏಲಿಯನ್ ಆಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು ನೆನಪಿರಬಹುದು. ಇದಲ್ಲದೆ ಅನ್ಯಗ್ರಹ ಜೀವಿಗಳ ಕುರಿತು ಹಲವಾರು ಇಂಗ್ಲಿಷ್ ಚಿತ್ರಗಳು ಬಂದಿವೆ.
ರಾತ್ರಿಯಾದರೆ ಸಾಕು.. ರಾಶಿ ರಾಶಿ ನಕ್ಷತ್ರ ಪುಂಜಗಳ ಸಾಲು ನಾವೆಲ್ಲ ಕಣ್ತುಂಬಿ ಕೊಳ್ಳುತ್ತೇವೆ. ಇಡೀ ಬ್ರಹ್ಮಾಂಡದಲ್ಲಿ ಕೋಟಿಗಟ್ಟಲೆ ನಕ್ಷತ್ರಗಳ ಜೊತೆಗೆ ಸಾಕಷ್ಟು ಗ್ರಹಗಳಿರುವಾಗ ಯಾವುದಾದರೂ ಗ್ರಹದಲ್ಲಿ ಭೂಮಿಯಂತೆಯೇ ಜೀವಿಗಳಿರಬಾರದೇಕೆ ಎಂಬ ಅನುಮಾನ ಹಲವರನ್ನು ಕಾಡದಿರದು.ಈ ವಿಷಯದ ಕುರಿತು ವಿಜ್ಞಾನಿಗಳು ಇದರ ಬಗ್ಗೆ ಸಂಶೋಧನೆ ಕೈಗೊಳ್ಳುತ್ತಾ ಬರುತ್ತಿದ್ದಾರೆ.
ಆಗಾಗ, ಏಲಿಯನ್(Alien) ನೋಡಿದ್ದಾಗಿ, ಹಾರುವ ತಟ್ಟೆಗಳನ್ನು ನೋಡಿದ್ದರ ಕುರಿತಾಗಿ ಜಗತ್ತಿನ ಒಂದೊಂದು ಮೂಲೆಯಿಂದಲೂ ಸುದ್ದಿ ಬರುತ್ತಲೇ ಇದ್ದು, ಇದರ ನಡುವೆ ಏಲಿಯೆನ್ಸ್ ಅಂದರೆ ಹಾರುವ ಜೀವಿಯಾಗಿರಬಹುದು ಎಂಬ ನಮ್ಮದೇ ಕಲ್ಪನೆಯ ಲೋಕವನ್ನು ಸೃಷ್ಟಿಸಿಕೊಂಡಿರುತ್ತೇವೆ.
ಈವರೆಗೂ ಅದರ ಬಗ್ಗೆ ಸ್ಪಷ್ಟ ಮಾಹಿತಿ ಚಿತ್ರಣ ಇಲ್ಲದೇ ಇರುವುದರಿಂದ ಈ ವಿಷಯ ನಮ್ಮ ಕುತೂಹಲ ಕೆರಳಿಸುವುದರಲ್ಲಿ ಸಂಶಯವಿಲ್ಲ. ಈ ನಡುವೆ , ಅನೋ ಅಲಾರಿಕ್(Eno Alairic) ಎಂಬ ವ್ಯಕ್ತಿಯೊಬ್ಬ ಡಿಸೆಂಬರ್ 8ರಂದು ಭೂಮಿಗೆ ಏಲಿಯನ್ಸ್ ಬರುವುದಾಗಿ ಹೇಳಿದ್ದು, ತನ್ನನ್ನು ತಾನು ಟೈಮ್ ಟ್ರಾವೆಲರ್(Time traveler) ಎಂದು ಹೇಳಿಕೊಂಡಿರುವ ಈತನ ಈ ಹೇಳಿಕೆ ಸದ್ಯ ಎಲ್ಲೆಡೆ ಸಂಚಲನದ ಜೊತೆಗೆ ಅಚ್ಚರಿ ಮೂಡಿಸಿದೆ.
ವಿಜ್ಞಾನಿಗಳ ಪ್ರಕಾರ, ಇದುವರೆಗೆ ವಿದೇಶಿಯರು ಅಥವಾ UFOಗಳ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಬ್ರಹ್ಮಾಂಡವು ಎಷ್ಟು ವಿಶಾಲವಾಗಿದ್ದರೂ ನಾವು ಅದನ್ನು ಊಹಿಸಲೂ ಸಾಧ್ಯವಿಲ್ಲ. ಈ ಕಾರಣದಿಂದಾಗಿ, ಜಗದ ಯಾವ ಮೂಲೆಯ ರಹಸ್ಯವು ನಮಗೆ ತಿಳಿದಿಲ್ಲ. ಆದರೆ ಈ ಅನೋ ಅಲಾರಿಕ್ ಹೇಳಿಕೆ ಕೇಳುಗರಿಗೆ ಬೆರಗು ಮೂಡಿಸಿ ಸದ್ಯ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಟೈಂ ಟ್ರಾವೆಲಿಂಗ್ ಎಂದರೆ ಸಮಯದಲ್ಲಿ ಮುಂದಕ್ಕೆ ಮತ್ತು ಹಿಂದಕ್ಕೆ ಹೋಗಬಹುದೆನ್ನುವ ಪರಿಕಲ್ಪನೆಯಾಗಿದೆ. ಅನೋ ಅಲಾರಿಕ್ ಎಂಬ ವ್ಯಕ್ತಿಯು ತನ್ನನ್ನು ತಾನು ಟೈಂ ಟ್ರಾವೆಲರ್ ಎಂದು ಹೇಳಿಕೊಂಡಿದ್ದು, ಸದ್ಯ ಆತ ಟೈಂ ಟ್ರಾವೆಲಿಂಗ್ ಮೂಲಕ 2671ನೇ ಇಸವಿಯಲ್ಲಿ ಬದುಕುತ್ತಿದ್ದೆ ಎಂದು ಹೇಳಿಕೊಂಡಿದ್ದು, ಆತ ಹೇಳುವಂತೆ ಡಿಸೆಂಬರ್ನಲ್ಲಿ ಅನ್ಯಗ್ರಹ ಜೀವಿಗಳು ಭೂಮಿಗೆ ಇಳಿಯಲಿದ್ದಾರೆ.
ಡಿಸೆಂಬರ್ 8ರಂದು ದೈತ್ಯ UFOನಿಂದ ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಇಳಿಯುತ್ತಾರೆ ಎಂದು ಭವಿಷ್ಯ ನುಡಿದಿದ್ದು, ಅವರು ಮನುಷ್ಯರೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ . ಭಾರತದಲ್ಲಿ ಟಿಕ್ಟಾಕ್ ಅನ್ನು ನಿಷೇಧಿಸಿದ್ದರೂ ಅನೇಕ ಜನರು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಮೂಲಕ ಈ ವೀಡಿಯೊವನ್ನು ಡೌನ್ಲೋಡ್ ಮಾಡಿದ್ದಾರೆ.
ಈತ ಏಲಿಯನ್ಸ್ ಬಗ್ಗೆ ಮಾಹಿತಿ ನೀಡಿದ್ದಲ್ಲ ಎಂದು ತಿಳಿದು ಬಂದಿದ್ದು, ಭೂಮಿಯ ಭವಿಷ್ಯವನ್ನು ಬದಲಾಯಿಸುವ ಒಟ್ಟು 4 ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದಾನೆ ಎಂದು ತಿಳಿದು ಬಂದಿದೆ.
ಐದು ವಿಷಯಗಳು ಮತ್ತವು ಸಂಭವಿಸುವ ದಿನಗಳ ಬಗ್ಗೆ ತಿಳಿಯುವುದಾದರೆ , ಟೈಮ್ ಟ್ರಾವೆಲರ್ನಿಂದ ಊಹಿಸಲಾದ ದಿನಗಳ ಪ್ರಕಾರ, ನವೆಂಬರ್ 30, 2022 ಜೇಮ್ಸ್ ವೆಬ್ ದೂರದರ್ಶಕವು ಭೂಮಿಯ ಪ್ರತಿಬಿಂಬಿತ ಆವೃತ್ತಿಯ ಗ್ರಹವನ್ನು ಕಂಡು ಹಿಡಿಯಲಿದೆ.
ಡಿಸೆಂಬರ್ 8, 2022: ಹೊಸ ರೀತಿಯ ಲೋಹಗಳು ಮತ್ತು ಅನ್ಯಲೋಕದ ಜಾತಿಗಳನ್ನು ಹೊಂದಿರುವ ದೊಡ್ಡ ಉಲ್ಕೆಯು ಭೂಮಿಗೆ ಅಪ್ಪಳಿಸುತ್ತದೆ. ಫೆಬ್ರವರಿ 6, 2023: ಹದಿಹರೆಯದ 4 ಹುಡುಗರ ಗುಂಪು ಪ್ರಾಚೀನ ಅವಶೇಷಗಳನ್ನು ಕಂಡುಕೊಳ್ಳಲಿದೆ. ಮತ್ತು ಇದರಲ್ಲಿ ಇತರ ಗೆಲಕ್ಸಿಗಳಿಗೆ ಬಾಗಿಲು ತೆರೆಯುವ ಸಾಧನವನ್ನು ಕಂಡುಕೊಳ್ಳಲಿದೆ.
ಮಾರ್ಚ್ 23, 2023: ಮರಿಯಾನಾ ಕಂದಕವನ್ನು ಅನ್ವೇಷಿಸುವ ವಿಜ್ಞಾನಿಗಳ ತಂಡವು ಪ್ರಾಚೀನ ಪ್ರಭೇದಗಳನ್ನು ಕಂಡುಹಿಡಿಯಲಿದೆ.
ಸ್ವಯಂಘೋಷಿತ ಸಮಯ ಪ್ರಯಾಣಿಕ ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿರುವುದು ಇದೇ ಮೊದಲಲ್ಲ ಎಂದು ತಿಳಿದು ಬಂದಿದ್ದು, ಕಳೆದ ಬಾರಿ ಆತ ಹೇಳಿದಂತೆ, ಮುಂದಿನ ವರ್ಷದಲ್ಲಿ 3 ಅಡಿ ಜೇಡ, 18 ಅಡಿ ಬೀಟ್ ಮತ್ತು 1 ಅಡಿ ಇರುವೆ ಆವಿಷ್ಕಾರವಾಗುತ್ತದೆ ಎಂದಿದ್ದಾರೆ.
ಕೆಲವೊಮ್ಮೆ ಕೆಲವು ವಿಷಯಗಳು ಘಟಿಸಲು ಸಾಧ್ಯವೇ ಇಲ್ಲ ಎಂದು ತಿಳಿದಿದ್ದರೂ ಕೂಡ ಬೇರೆಯವರ ಮಾತನ್ನು ನಂಬಿ ಪವಾಡಗಳು ನಡೆಯುತ್ತವೆ ಎಂದು ಕುತೂಹಲದಿಂದ ಕಾದು ನೋಡುವ ಕೌತುಕ ಹಲವರಿಗಿದೆ.