ಜೀವಂತ ಗೆಳತಿಯ ಹೊಟ್ಟೆ ಕುಯ್ದು, ಗರ್ಭ ಕಿತ್ತು ತಾನೇ ಹೆತ್ತಿದ್ದೇನೆ ಎಂದು ಬಿಂಬಿಸಲು ಹೊರಟ ಕ್ರೂರಿಗೆ ಮರಣದಂಡನೆ !

ಮಹಿಳೆಯೊಬ್ಬರು 21 ವರ್ಷದ ಮಹಿಳೆಯನ್ನು ಕೊಂದು ಆಕೆಯ ಗರ್ಭದಲ್ಲಿರುವ ಮಗುವನ್ನು ಕತ್ತರಿಸಿದ ಕಾರಣಕ್ಕಾಗಿ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ.
ಅವರು ರೇಗನ್ ಮಿಚೆಲ್ ಸಿಮನ್ಸ್-ಹ್ಯಾನ್‌ಕಾಕ್ ಅವರನ್ನು ಕೊಂದು ಆಕೆಯ ಮಗಳನ್ನು ಅಪಹರಿಸಿದ ಕಾರಣಕ್ಕಾಗಿ ಈಗ ಮರಣ ದಂಡನೆ ಶಿಕ್ಷೆ ಅನುಭವಿಸುತ್ತಿದ್ದಾಳೆ. ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ಈ ಘಟನೆ ನಡೆದಿದೆ.

ಏನಿದು ಭಯಾನಕ ಮರ್ಡರ್?!

ಟೇಲರ್ ರೆನೆ ಪಾರ್ಕರ್ ಎಂಬ ಈ ಮಹಿಳೆ 2020 ರ ಅಕ್ಟೋಬರ್‌ನಲ್ಲಿ ತನ್ನ ಗೆಳತಿ ಸಿಮನ್ಸ್-ಹ್ಯಾನ್‌ಕಾಕ್‌ ಎಂಬ ಮಹಿಳೆಯ ತಲೆಗೆ ಐದು ಬಾರಿ ಹೊಡೆದಿದ್ದಳು. ನಂತರ  ಆಕೆಯನ್ನು “ಹಿಪ್‌ನಿಂದ ಹಿಪ್” ವರೆಗೆ ಹೊಟ್ಟೆ ಬಗೆದು ಕತ್ತರಿಸಿ ಹಾಕಿದ್ದಳು. ಸಿಮನ್ಸ್-ಹ್ಯಾನ್‌ಕಾಕ್ ನ ಮಗುವನ್ನು ತನ್ನ ಗರ್ಭದಿಂದ ಕತ್ತರಿಸಿದ ನಂತರವೂ ಆಕೆ ಜೀವಂತವಾಗಿದ್ದಳಂತೆ ಎಂದು ಹೇಳಲಾಗುತ್ತದೆ. ಆ ನಂತರ ಆಕೆಯ ಗರ್ಭದಿಂದ ಮಗುವನ್ನು ಕಿತ್ತುಕೊಂಡು ಕೊಲೆಗಾತಿ ಅಲ್ಲಿಂದ ಪರಾರಿ ಆಗಿದ್ದಳು.

ಇದೆಲ್ಲ ಘಟನೆಗಳು ಆ ನತದೃಷ್ಟ ಮಹಿಳೆಯ ಮೂರು ವರ್ಷದ ಮಗಳ ಮುಂದೆ ನಡೆದಿತ್ತು. ಸಿಮನ್ಸ್-ಹ್ಯಾಂಕಾಕ್ ಅನ್ನು ಒಬ್ಬಂಟಿಯಾಗಿ ಬಿಟ್ಟ ನಂತರ, ಕೊಲೆಗಾತಿ ಪಾರ್ಕರ್ ಮಗುವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಕಾರು ಓಡಿಸಿದ್ದಳು.

ಕೊಲೆ ನಡೆದಿದ್ದು ಯಾಕಾಗಿ ?!

ಕೊಲೆ ನಡೆಸಿದಾಕೆ ಕೂಡಾ 29 ವರ್ಷದ ಇಬ್ಬರು ಮಕ್ಕಳ ತಾಯಿ. ತನ್ನ ಬಾಯ್‌ಫ್ರೆಂಡ್‌ನನ್ನು ಕಳೆದುಕೊಳ್ಳುವ ಭಯದಲ್ಲಿ , ಗರ್ಭವತಿ ತನಗೆ ಮಕ್ಕಳಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಪಾರ್ಕರ್ ಹೀಗೆ ಹತ್ತು ತಿಂಗಳವರೆಗೆ ಸುಳ್ಳು ಹೇಳಿ ನಕಲಿ ಗರ್ಭಧಾರಣೆಯ ಸುದ್ದಿ ಮಾಡಿದ್ದಾಳೆ. ಅವಳು ಮಗುವಿನ ಲಿಂಗ ಬಹಿರಂಗಪಡಿಸುವ ಪಾರ್ಟಿಯನ್ನು ಕೂಡಾ ನಡೆಸಿದ್ದಳು ಮತ್ತು ತನ್ನ ತನ್ನ ನಕಲಿ ಗರ್ಭಧಾರಣೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಳು. ಹಾಗೇ ಬಾಯ್ ಫ್ರೆಂಡ್ ನಿಂದ ಮಗು ಆಯಿತು ಎನ್ನಲು ಆಕೆ ಅರ್ಜೆಂಟ್ ಆಗಿ ಮಗು ಒಂದನ್ನು ಹುಡುಕುತ್ತಿರುವಾಗ ಕಣ್ಣಿಗೆ ಬಿದ್ದದ್ದು ಈ, ರೇಗನ್ ಮಿಚೆಲ್ ಸಿಮನ್ಸ್-ಹ್ಯಾನ್‌ಕಾಕ್.

ಮೊದಲೇ ಮಾಡಿದ ಪ್ಲಾನಿನ ಹಾಗೆ ಈ ಕೊಲೆಗಾತಿ ಟೇಲರ್ ಲತಾ ದೃಷ್ಟಿಯ ತಲೆಗೆ ಹೊಡೆದು ಸೊಂಟದ ಒಂದು ಬದಿಯಿಂದ ಇನ್ನೊಂದು ಬದಿಗೆ ಚಾಕು ಹಾಕಿ ಆ ಮಹಿಳೆಯ ಗರ್ಭದಲ್ಲಿದ್ದ ಮಗುವನ್ನು ಕುಯ್ದು ತೆಗೆದಿದ್ದಳು. ನಂತರ ಆ ಮಗುವನ್ನು ತನ್ನ ತೊಡೆಯಲ್ಲಿಟ್ಟುಕೊಂಡು ಕಾರು ಚಲಾಯಿಸಿ ಅಲ್ಲಿಂದ ಪಲಾಯಣ ಗೈದಿದ್ದಳು. ಅಲ್ಲದೆ ಅದೇ ಮಹಿಳೆಯ ಹರಿದ ಗರ್ಭ ಸ್ರಾವವನ್ನು ತನ್ನ ಪ್ಯಾಂಟಿನ ಮೇಲೆ ಹಾಕಿಕೊಂಡು ತನಗೆ ಹೆರಿಗೆ ಆಗಿದೆ ಎಂದು ಬಿಂಬಿಸಲು ಹೊರಟಿದ್ದಳು. ಆದರೆ ಕೊಲೆಯ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಈ ಮಹಿಳೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಇದೀಗ ನ್ಯಾಯಾಲಯವು ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸುವತ್ತ ಹೊರಟಿದೆ.

“ಇದು ತ್ವರಿತ ಸಾವು ಅಲ್ಲ” ಎಂದು ಸಹಾಯಕ ಜಿಲ್ಲಾ ವಕೀಲ ಲಾರೆನ್ ರಿಚರ್ಡ್ಸ್ ಹೇಳಿದ್ದಾರೆ. “ಅವಳು ಅವಳನ್ನು ಕತ್ತರಿಸುತ್ತಲೇ ಇದ್ದಳು. ಟೇಲರ್ ಅಲ್ಲಿಂದ ಹೊರಬರಲು ಮತ್ತು ಅವಳ ಯೋಜನೆಗಳೊಂದಿಗೆ ಮುಂದುವರಿಯಲು ರೇಗನ್ ಸಾಕಷ್ಟು ವೇಗವಾಗಿ ಸಾಯುವುದಿಲ್ಲ ಎಂದು ನಾನು ಭಾವಿಸುತ್ತೇನೆ.” “ಟೇಲರ್ ಳು, ಆ ಮಹಿಳೆಯ ಹೊಟ್ಟೆಯನ್ನು, ಸೊಂಟದಿಂದ ಸೊಂಟಕ್ಕೆ ಕತ್ತರಿಸಲು ಪ್ರಾರಂಭಿಸಿದಾಗ ರೇಗನ್ ಅನುಭವಿಸಿದ ನೋವು … ವಿವರಿಸಲಾಗದಂತಿದೆ” ಎಂದು ಅವರು ಹೇಳಿದ್ದಾರೆ .

ಆರು ಮಹಿಳೆಯರು ಮತ್ತು ಆರು ಪುರುಷರು ಇರುವ ಈ ಕೇಸಿನ ವಿಚಾರಣಾ ಜಡ್ಜ್ಮೆಂಟ್ ಅನ್ನು ಅನ್ನು ಬರೆಯಲು ತಪ್ಪಿತಸ್ಥರ ತೀರ್ಪು ಬರಲು ನ್ಯಾಯಾಧೀಶರು ಕೇವಲ ಒಂದು ಗಂಟೆ ತೆಗೆದುಕೊಂಡರು. ಆಕೆ ಸ್ವತಹ ಮಗುವನ್ನು ಹೊಂದಿರುವ ತಾಯಿಯಾಗಿದ್ದು ತನ್ನ ಗೆಳತಿಗೆ ಇಂತಹ ದ್ರೋಹ ಬಗೆದಿರಂದು ಮನಗಂಡ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ. ಅಲ್ಲಿನ ಪ್ರಾಸಿಕ್ಯೂಟರ್‌ಗಳು ಮರಣದಂಡನೆಯನ್ನು ಬಯಸುತ್ತಿದ್ದಾರೆ, ಆದರೆ ನ್ಯಾಯಾಧೀಶರು ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಗೆ ಮತ ಹಾಕಬಹುದು ಎನ್ನಲಾಗಿದೆ.

Leave A Reply

Your email address will not be published.