ಶಾಪಿಂಗ್ ಮಾಲ್‌ಗಳಲ್ಲಿ ಮೊಬೈಲ್ ನಂಬರ್ ಕೊಡೋ ಮುಂಚೆ ಇರಲಿ ಎಚ್ಚರ | ನಿಮ್ಮ ನಂಬರ್ ಕೂಡ ಮಾರಾಟವಾದಿತು ಹುಷಾರ್!

ಇಂದು ಯಾವುದೇ ಒಂದು ಅಂಗಡಿಗೆ ತೆರಳಿದರೂ ಸರಿ ಗ್ರಾಹಕರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಾರೆ. ಅದು ಮಳಿಗೆಯ ಮಾಹಿತಿ ಅಪ್ಡೇಟ್ ಗೊ, ಜಾಹಿರಾತು ಕಳುಹಿಸಲು ಆಗಿರಬಹುದು. ಆದ್ರೆ, ಗ್ರಾಹಕರೇ ಎಚ್ಚರ, ವಾಣಿಜ್ಯ ಸಂಸ್ಥೆಗಳು ಗ್ರಾಹಕರ ನಂಬರ್ ಗಳನ್ನು ಕಾಲ್ ಸೆಂಟರ್ ಗೆ ನೀಡುತ್ತಿರುವ ಮಾಹಿತಿ ತಿಳಿದು ಬಂದಿದೆ.

ಹೌದು. ಶಾಪಿಂಗ್ ಮಾಲ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಖರೀದಿ ಮಾಡುವಾಗ ಕಡ್ಡಾಯವಾಗಿ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡು, ಅವನ್ನು ಕಾಲ್ ಸೆಂಟರ್‌ಗಳಿಗೆ ನೀಡುತ್ತಿದ್ದಾರೆ. ಈ ಮಾಹಿತಿ ಸೈಬರ್ ಕಳ್ಳರ ಪಾಲಾಗುತ್ತಿರುವುದರಿಂದ ಅನೇಕರು ಲಕ್ಷಗಟ್ಟಲೇ ಹಣ ಕಳೆದುಕೊಳ್ಳುತ್ತಿರುವ ಘಟನೆಯು ಬೆಳಕಿಗೆ ಬಂದಿದೆ. ಈ ಕುರಿತು ಎಚ್ಚೆತ್ತುಕೊಂಡ ಐಟಿ ಇಲಾಖೆ ಸೂಚನೆಯನ್ನು ನೀಡಿದೆ. ಬಳಕೆದಾರರ ಒಪ್ಪಿಗೆ ಇಲ್ಲದೇ ವೈಯಕ್ತಿಕ ಫೋನ್ ನಂಬರ್ ಪಡೆದುಕೊಳ್ಳುವುದು ನಿಯಮಗಳ ಉಲ್ಲಂಘನೆ ಎಂದು ಐಟಿ ಇಲಾಖೆ ಹೇಳಿದೆ.

ಕೆಲ ಕಾಲ್ ಸೆಂಟರ್​​ಗಳಿಂದ ಬರುವ ದೂರವಾಣಿ ಕರೆಗಳು ನಗರವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿವೆ. ವೈಯಕ್ತಿಕ ಫೋನ್ ಸಂಖ್ಯೆಯನ್ನು ಅವರು ಹೇಗೆ ತಿಳಿದಿದ್ದಾರೆಂದು ಯಾರಿಗೂ ಅರ್ಥವಾಗುವುದಿಲ್ಲ. ಇಂತಹ ಘಟನೆ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದ್ದು, ಈ ಕುರಿತು ಮಲಕಪೇಟೆಯ ಡೆಕಾಥ್ಲಾನ್‌ನಲ್ಲಿ ಶಾಪಿಂಗ್ ಮಾಡಿದ ತಾರ್ನಾಕ ಪ್ರದೇಶದ ವಿಜಯ್ ಗೋಪಾಲ್ ಎಂಬುವರು, ಬಿಲ್ ಪಾವತಿಸಲು ವೈಯಕ್ತಿಕ ದೂರವಾಣಿ ಸಂಖ್ಯೆ ಕಡ್ಡಾಯ ಎಂದು ಡೆಕಾಥ್ಲಾನ್ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂದು ಇತ್ತೀಚೆಗೆ ದೂರು ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಐಟಿ ಇಲಾಖೆ, ಇದು ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಮಾನದಂಡಗಳಿಗೆ ವಿರುದ್ಧವಾಗಿದೆ. ಇಂತಹ ಘಟನೆಗಳು ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈದರಾಬಾದ್ ನಗರದ ಮಲಕಪೇಟೆಯಲ್ಲಿರುವ ಡೆಕಾಥ್ಲಾನ್ ಸಂಸ್ಥೆಗೆ ಎಚ್ಚರಿಕೆ ನೀಡಿದೆ. ಆದರೆ, ಕಂಪನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಆದರೆ, ದೂರುದಾರ ವಿಜಯಗೋಪಾಲ್ ಈ ಕುರಿತು ಮಾತನಾಡಿ, ಕೇವಲ ನೋಟಿಸ್ ನೀಡಿ ಬಿಟ್ಟು ಬಿಡುವ ಬದಲು ರೂ. 25 ಸಾವಿರ ದಂಡ ವಿಧಿಸಿದರೆ ಬೇರೆ ಕಂಪನಿಗಳು ಇಂಥ ಕೆಲಸ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Leave A Reply

Your email address will not be published.