ಮದುವೆಯಾಗ ಬೇಕಿದ್ದ ಹುಡುಗನನ್ನೇ ಕೊಲೆ ಮಾಡಿದ ಭಾವೀ ಪತ್ನಿ !!!

ತಾನು ಮದುವೆಯಾಗಬೇಕಿದ್ದ ಯುವತಿಯ ಅಶ್ಲೀಲ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಯುವಕನನ್ನು ಮದುವೆಯಾಗಬೇಕಿದ್ದ ಯುವತಿಯೇ ದಾರುಣವಾಗಿ ಕೊಂದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಯುವತಿಯ ಅಶ್ಲೀಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟದ್ದು ಓರ್ವ ವೈದ್ಯನೆಂದರೆ ನೀವು ನಂಬಲೇಬೇಕು.

 

ವಿಕಾಸ್ (27) ಎಂಬಾತನೇ ಕೊಲೆಯಾದ ವೈದ್ಯ. ಈಗ ಕೊಲೆ ಮಾಡಿರುವ ಆರೋಪ ಪ್ರತಿಭಾ ಎಂಬಾಕೆ ಮೇಲಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10ನೇ ತಾರೀಖು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಪ್ರತಿಭಾ, ಗೌತಮ್ ಸುಶೀಲ್ ಹಾಗೂ ಸೂರ್ಯ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ : ಪ್ರತಿಭಾ ಹಾಗೂ ವಿಕಾಸ್ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ಕೂಡಾ ನಿರ್ಧರಿಸಿದ್ದರು. ಈ ವೇಳೆ ವಿಕಾಸ್ ಲ್ಯಾಪ್‌ಟಾಪ್‌ನಲ್ಲಿ ಪ್ರತಿಭಾರ ಅಶ್ಲೀಲ ಫೋಟೋಗಳು ಪತ್ತೆಯಾಗಿದ್ದವು. ಅದನ್ನು ವಿಕಾಸ್ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಇದನ್ನು ನೋಡಿ ದಿಗಿಲುಗೊಂಡ ಪ್ರತಿಭಾ ಪ್ರಶ್ನೆ ಮಾಡಿದ್ದಾರೆ. ಅನಂತರ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ.

ಸ್ವಲ್ಪ ಹೊತ್ತಾದ ನಂತರ ವಿಕಾಸ್ ಜತೆ ಮಾತನಾಡಬೇಕು ಎಂದುಕೊಂಡು ಅವನನ್ನು ಒಂದು ಕಡೆ ಕರೆಸಿಕೊಂಡಿದ್ದಳು ಪ್ರತಿಭಾ. ಈ ವೇಳೆ ಸ್ನೇಹಿತರಾದ ಸುಶೀಲ್, ಸೂರ್ಯ ಹಾಗೂ ಗೌತಮ್ ಆ ಜಾಗಕ್ಕೆ ಮೊದಲೇ ಪ್ಲಾನ್ ಮಾಡಿದಂತೆ ಬಂದಿದ್ದರು. ಈ ವೇಳೆ ಆರೋಪಿಗಳು ವಿಕಾಸ್ ತಲೆ ಮೇಲೆ ಬಲವಾಗಿ ಹೊಡೆದಿದ್ದಾರೆ. ನಂತರ ಆಸ್ಪತ್ರೆಗೆ ಸೇರಿಸಿದ್ದಾರೆ. ಆ ಬಳಿಕ ವಿಕಾಸನ ಪಾಲಕರಿಗೆ ವಿಷಯ ತಿಳಿಸಿದ್ದಾರೆ.

ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿಕಾಸ್ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave A Reply

Your email address will not be published.