ದಿನಕ್ಕೆ 10,000 ಹೆಜ್ಜೆ : ನಿಮ್ಮ ಈ ಸಮಸ್ಯೆಗಳು ನಿವಾರಣೆ – ಅಧ್ಯಯನ

ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಇತ್ತೀಚಿನ ದಿನಗಳಲ್ಲಿ ಒತ್ತಡಯುತ ಜೀವನ ಶೈಲಿಯ ನಡುವೆಯೂ ಆರೋಗ್ಯದ ಕಡೆ ಗಮನ ಹರಿಸಲು ಕೆಲವರು ಸೆಣಸಾಡು ತ್ತಲೆ ಇರುತ್ತಾರೆ. ಯೋಗ, ವ್ಯಾಯಾಮ ದಿನದ ಕೆಲವು ಗಂಟೆಗಳನ್ನು ಆರೋಗ್ಯದ ಕಾಳಜಿಗೆ ವ್ಯಯಿಸುವವರು ಕೂಡ ಇದ್ದಾರೆ.

 

ನಡಿಗೆಯಿಂದ ಹೆಚ್ಚುವರಿ ತೂಕವನ್ನು ಇಳಿಸಲು, ದೇಹವನ್ನು ಹದಗೊಳಿಸಿ ಶರೀರದ ಆಕಾರವನ್ನೂ ಸರಿಪಡಿಸಲು ನಡಿಗೆ ಸಹಕಾರಿಯಾಗಿದೆ. ಒಂದು ದಿನದಲ್ಲಿ ನೀವು ಎಷ್ಟು ಹೆಜ್ಜೆಗಳನ್ನು ಇಡುತ್ತೀರೋ ಅಷ್ಟೇ ನಮ್ಮ ನಡಿಗೆಯ ವೇಗವು ಅಷ್ಟೇ ಮುಖ್ಯ ಎಂದು ಹೊಸ ಸಂಶೋಧನೆಯೊಂದು ಸೂಚಿಸಿದೆ. ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯುವುದು ಬುದ್ಧಿಮಾಂದ್ಯತೆ, ಹೃದ್ರೋಗ, ಕ್ಯಾನ್ಸರ್ ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ನಡಿಗೆಯಿಂದ ಸ್ನಾಯುಗಳ ಶಕ್ತಿ ವೃದ್ಧಿಸುತ್ತದೆ. ದೇಹದ ಎಲ್ಲ ಸ್ನಾಯುಗಳೂ ಚಲನಶೀಲವಾಗುತ್ತವೆ. ಸಾಮಾನ್ಯ ನಡಿಗೆಗಿಂತ ವೇಗದ ನಡಿಗೆ ಉತ್ತಮ. ಆದರೆ, ಕೆಲವರಿಗೆ ವೇಗದ ನಡಿಗೆ ಮಾಡಲು ಮಂಡಿಯ ಕೀಲುಗಳು ಸಹಕರಿಸಲಾರವು. ಅದಕ್ಕಾಗಿ ನಿಮಗೆ ಹಿತವೆನಿಸುವಷ್ಟು ವೇಗದ ನಡಿಗೆ ಮಾಡಬಹುದು.

ತೂಕ ಇಳಿಸಿಕೊಳ್ಳಲು ಪವರ್‌ ವಾಕಿಂಗ್‌ ಮಾಡಿದರೆ, ಇದು ವೇಗದ ನಡಿಗೆಯಾಗಿದ್ದು, ಓಟ ಅಥವಾ ಜಾಗಿಂಗ್‌ ವೇಳೆ ಕರಗುವಷ್ಟೇ ಕ್ಯಾಲೊರಿ ಪವರ್‌ ವಾಕಿಂಗ್‌ನಲ್ಲೂ ಕರಗುತ್ತದೆ. ಇದಕ್ಕೆ ಮಧ್ಯಮ ಅಥವಾ ತೀವ್ರ ವೇಗದ ನಡಿಗೆ ಮಾಡಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಾಮಾನ್ಯ ಸಮಸ್ಯೆಯಾಗಿದೆ. ಸಿಹಿತಿಂಡಿಗಳನ್ನು ತಿನ್ನುವ ಅಭ್ಯಾಸವನ್ನು ನಿಯಂತ್ರಿಸುವ ಜತೆಗೆ ನೀವು ಪ್ರತಿದಿನ ಬೆಳಿಗ್ಗೆ ನಡೆದರೆ, ಮಧುಮೇಹವು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣದಲ್ಲಿರುತ್ತದೆ. ಮಧುಮೇಹವನ್ನು ನಿಯಂತ್ರಿಸಲು ವಾಕಿಂಗ್ ಅನ್ನು ರಾಮಬಾಣವೆಂದು ಪರಿಗಣಿಸಲಾಗುತ್ತದೆ.

ನಡಿಗೆಯಿಂದ ಬೆನ್ನುಮೂಳೆಯ ರಚನೆಗಳಿಗೆ ಪೋಷಣೆ ದೊರೆಯುತ್ತದೆ. ರಕ್ತಪರಿಚಲನೆ ಸರಾಗವಾಗಿ ಮೃದು ಅಂಗಾಂಶಗಳಿಗೆ ಪೋಷಕಾಂಶಗಳು ರವನೆಯಾಗುತ್ತವೆ. ಜತೆಗೆ ವಿಷಕಾರಿ ಅಂಶಗಳು ವಿಸರ್ಜನೆಯಾಗುತ್ತವೆ. ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ನಮ್ಯತೆ ದೊರೆಯುತ್ತದೆ ಮತ್ತು ದೇಹದ ಭಂಗಿ ಮತ್ತು ಚಲನೆಗಳು ಸರಿಯಾಗಿರುತ್ತವೆ.

ಅಧಿಕ ಕೊಲೆಸ್ಟ್ರಾಲ್ ಹೃದಯ ಸಮಸ್ಯೆಗಳಿಗೆ ಪ್ರಮುಖ ಕಾರಣವೆಂದು ಪರಿಗಣಿಸಲಾಗುತ್ತದೆ. ಮುಂಜಾನೆಯ ವಾಕ್ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸಲು ನೆರವಾಗುತ್ತದೆ .

“ಆರೋಗ್ಯ ಪ್ರಯೋಜನಗಳಿಗಾಗಿ ಜನರು ದಿನಕ್ಕೆ 10,000 ಹೆಜ್ಜೆಗಳನ್ನು ಇಡುವುದು ಮಾತ್ರವಲ್ಲದೆ ವೇಗವಾಗಿ ನಡೆಯುವ ಗುರಿಯನ್ನು ಹೊಂದಬಹುದು” ಎಂದು ಸಿಡ್ನಿಯ ಸಂಶೋಧಕರು ತಿಳಿಸಿದ್ದಾರೆ.
ಕಡಿಮೆ ಸಕ್ರಿಯ ವ್ಯಕ್ತಿಗಳಿಗೆ,ದಿನಕ್ಕೆ 3,800 ಹೆಜ್ಜೆಗಳಿಗಿಂತ ಕಡಿಮೆ ಹೆಜ್ಜೆಗಳು ಬುದ್ಧಿಮಾಂದ್ಯತೆಯ ಅಪಾಯವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಬಹುದು ಎಂದು ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅಧ್ಯಯನದ ಮೂಲಕ ಕಂಡು ಕೊಂಡಿದ್ದಾರೆ.

ನಡಿಗೆ ಅನೇಕ ರೋಗಗಳನ್ನು ಗುಣಪಡಿಸಲು ನೆರವಾಗಲಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಅಲ್ಲದೆ ಮಧುಮೇಹ ಇರುವವರು ಮುಂಜಾನೆ ನಡೆದರೆ ಅರೋಗ್ಯದ ದೃಷ್ಟಿಯಿಂದ ಉತ್ತಮ.

Leave A Reply

Your email address will not be published.