Rajasthan : ಅನಾರೋಗ್ಯಕ್ಕೊಳಗಾದ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲು ಸ್ವಯಂ ನಿವೃತ್ತಿ ಪಡೆದ ಸರ್ಕಾರಿ ನೌಕರ – ನಿವೃತ್ತಿ ಪಾರ್ಟಿಯಲ್ಲೇ ಕುಸಿದು ಬಿದ್ದು ಪತ್ನಿ ಸಾವು !!

Rajasthan: ರಾಜಸ್ಥಾನದಲ್ಲಿ ಒಂದು ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ತನ್ನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಆಕೆಯ ಸೇವೆಯನ್ನು ಮಾಡಬೇಕು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸರ್ಕಾರಿ ನೌಕರರು ಒಬ್ಬರು ಅವಧಿಪೂರ್ವ ನಿವೃತ್ತಿಯನ್ನು ಪಡೆದಿದ್ದರು. ನಿವೃತ್ತಿಯ ಹಿನ್ನೆಲೆಯಲ್ಲಿ ಅದ್ದೂರಿ ಪಾರ್ಟಿಯನ್ನು ಕೂಡ ಆಯೋಜಿಸಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಈ ನಿವೃತ್ತಿ ಕಾರ್ಯಕ್ರಮದಲ್ಲಿಯೇ ಪತ್ನಿ, ತನ್ನ ಪತಿಯ ಮುಂದೆ ಹೃದಯಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.

ಹೌದು, ಸೆಂಟ್ರಲ್ ವೇರ್ಹೌಸಿಂಗ್ನಲ್ಲಿ ಮ್ಯಾನೇಜರ್ ಆಗಿರುವ ದೇವೇಂದ್ರ ಸ್ಯಾಂಡಲ್ ಅವರು ತಮ್ಮ ಪತ್ನಿಯನ್ನ ನೋಡಿಕೊಳ್ಳಲು ಡಿಸೆಂಬರ್ 24 ರಂದು ಸ್ವಯಂ ನಿವೃತ್ತಿ (VRS) ಪಡೆದಿದ್ದರು. ಮಂಗಳವಾರ ಕಚೇರಿಯಲ್ಲಿ ಅವರ ಕೊನೆಯ ದಿನವಾಗಿದ್ದು, ಅವರ ಸಹೋದ್ಯೋಗಿಗಳು ವಿದಾಯ ಪಾರ್ಟಿಯನ್ನ ಆಯೋಜಿಸಿದ್ದರು. ದೇವೇಂದ್ರ ಅವರ ಪತ್ನಿ ದೀಪಿಕಾ ಅಲಿಯಾಸ್ ಟೀನಾ ಕೂ ದೇವೇಂದ್ರ ಅವರೊಂದಿಗೆ ಕಚೇರಿಗೆ ಬಂದಿದ್ದರು. ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರೂ, ಅವರು ಹೆಚ್ಚಿನ ಉತ್ಸಾಹದಲ್ಲಿದ್ದರು ಮತ್ತು ನಿವೃತ್ತಿಯ ನಂತರ ತಮ್ಮ ಪತಿಯೊಂದಿಗೆ ಹೆಚ್ಚಿನ ಸಮಯ ಕಳೆಯುವ ಬಗ್ಗೆ ಉತ್ಸುಕರಾಗಿದ್ದರು.

ಸಂಭ್ರಮದ ವೇಳೆ ತಮ್ಮ ಕಚೇರಿಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ತಮ್ಮ ಸಹೋದ್ಯೋಗಿಗೆ ಬೀಳ್ಕೊಡುಗೆ ನೀಡುತ್ತಿದ್ದರು. ಈ ವೇಳೆ ಅವರ ಪತ್ನಿ ಹಾಗೂ ಮಗಳು ಕೂಡ ಅಲ್ಲಿ ಉಪಸ್ಥಿತರಿದ್ದರು. ಒಬ್ಬೊಬ್ಬರೇ ಬಂದು ದಂಪತಿಗಳಿಬ್ಬರಿಗೂ ಮಾಲೆಗಳನ್ನು ಹಾಕಿ ಅಭಿನಂದಿಸುತಿದ್ದರು. ಇದರ ನಡುವೆ ಆಟೋಪಚಾರಗಳು ಎಲ್ಲವೂ ನಡೆದಿತ್ತು. ಆದರೆ ಈ ವೇಳೆ ಇದ್ದಕ್ಕಿದ್ದಂತೆ ಪತ್ನಿಯೋ ಕುಸಿದು ಬಿದ್ದಿದ್ದಾರೆ. ನೆರೆದವರೆಲ್ಲರೂ ಅವರನ್ನು ಸಂತೈಸಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ. ಆಘಾತ ಮತ್ತು ಆತಂಕಗೊಂಡ ಅಲ್ಲಿದ್ದವರು ಮಹಿಳೆಯನ್ನ ಆಸ್ಪತ್ರೆಗೆ ಕರೆದೊಯ್ದರು, ಆದ್ರೆ, ಅಲ್ಲಿ ವೈದ್ಯರು ಮೃತ ಪಟ್ಟಿದ್ದಾಳೆ ಎಂದು ಘೋಷಿಸಿದ್ದಾರೆ.

Leave A Reply

Your email address will not be published.