ಮೈಸೂರು, ಅಲೀಮ್ ನಗರ | ಮುಂದುವರಿದ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ
ಮೈಸೂರಿನ NR ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಅಲೀಮ್ ನಗರದಲ್ಲಿ ಮುಸ್ಲಿಮರ ದೊಡ್ಡ ಸಂತೆಯೆ ಇದೆ. ಅಲ್ಲಿನ ಒಂದು ಗಲ್ಲಿಯಲ್ಲಿ ಕೊರೋನಾ ಲಕ್ಷಣ ನಿಮಿತ್ತ ಸರ್ವೆ ನಡೆಯುತ್ತಿತ್ತು. ಅಲ್ಲಿಂದ ಆಶಾ ಕಾರ್ಯಕರ್ತೆ ವಾಪಸ್ಸು ಬರುವಾಗ ಒಂದಷ್ಟು ಜನ
ಒಟ್ಟಾಗಿ ಕೂತಿದ್ರು. ಗುಂಪಾಗಿ ಮಾತಾಡಿದ್ರು. ಯಾವುದೇ ಸಾಮಾಜಿಕ ಅಂತರ ಇರಲಿಲ್ಲ. ಆಗ
ಮಾಸ್ಕ್ ಹಾಕೊಳ್ಳಿ ಅಂತ ಆಶಾ ಕಾರ್ಯಕರ್ತೆಯಾದ ಸುಮಯಾ ಪಿರ್ದೋಷ್ ಎಂಬವರು ಆ ಗುಂಪಿಗೆ ಸಲಹೆ ನೀಡಿದ್ದಾರೆ. ನಂಗೆ ಯಾಕ್ ಹೇಳ್ತೀರಿ. ಅಂತ ಅಲ್ಲಿದ್ದವರು ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಈ ಸಂಬಂಧ NR ಪೊಲೀಸು ಸ್ಟೇಷನ್ ನಲ್ಲಿ FIR ದಾಖಲಾಗಿದೆ. ಮೂರು ಜನರನ್ನು ಬಂಧಿಸಲಾಗಿದೆ.
ಪದೇ ಪದೇ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಿಂದನೆಯ ಬಗ್ಗೆ ಜನರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.