ಎ.20 ರಿಂದ ಪುತ್ತೂರು ಎಪಿಎಂಸಿಯಲ್ಲಿ ಅಡಿಕೆ ಖರೀದಿ | ವರ್ತಕರ ಸಭೆ
ಪುತ್ತೂರು: ಪುತ್ತೂರು ತಾಲೂಕಿಗೆ ಸೀಮಿತವಾಗಿ ಖಾಸಗಿ ವರ್ತಕರಿಗೂ ಅಡಿಕೆ ಖರೀದಿಗೆ ಅವಕಾಶ ಕೊಡಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಮತ್ತು ಈ ರೀತಿ ಅವಕಾಶ ನೀಡಿದಾಗ ಒಂದಷ್ಟು ಸ್ಪರ್ಧಾತ್ಮಕ ದರದಲ್ಲಿ ಅಡಿಕೆ ಖರೀದಿ ನಡೆಯುತ್ತದೆ ಎಂಬ ನಿಟ್ಟಿನಲ್ಲಿ ಎಪಿಎಂಸಿಯ ಪ್ರಾಂಗಣದಲ್ಲಿ ಅಡಿಕೆ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ಕುರಿತಂತೆ ಶುಕ್ರವಾರ ಎಪಿಎಂಸಿ ಪ್ರಾಗಂಣದಲ್ಲಿ ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಯಾರ್ಡ್ ಅಡಿಕೆ ವರ್ತಕರ ಸಭೆ ನಡೆಯಿತು.
ವರ್ತಕರು ಲಾಕ್ಡೌನ್ ಅಂತ್ಯ ಕಾಣುವವರೆಗೂ ನಿರಂತರವಾಗಿ ಅಡಿಕೆ ಖರೀದಿ ಮಾಡಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಒಂದು ವೇಳೆ ಷರತ್ತು ಉಲ್ಲಂಘನೆ ಆದರೆ ಅವರಿಗೆ ಅವಕಾಶವಿಲ್ಲ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ವರ್ತಕರು ವಹಿಸಿಕೊಳ್ಳಬೇಕು ಎಂಬ ಎಸಿ ಡಾ.ಯತೀಶ್ ಉಳ್ಳಾಲ್ ಅವರ ಸೂಚನೆಯಂತೆ ಎಲ್ಲಾ ವರ್ತಕರು ವ್ಯವಹರಿಸಬೇಕು ಎಂದು ದಿನೇಶ್ ಮೆದು ಹೇಳಿದರು.
ಅಲ್ಲಿಗೆ ತಮ್ಮ ವಾಹನಗಳಲ್ಲಿ ಅಡಿಕೆ ತರಬೇಕು. ಎಪಿಎಂಸಿಯ ದೂರವಾಣಿ ನಂಬರ್ 08251-230434ಗೆ ಕರೆ ಮಾಡಬೇಕು. ಅಥವಾ ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಅವರ ಮೊಬೈಲ್ ಸಂಖ್ಯೆ 9449639510, ಅಧ್ಯಕ್ಷ ದಿನೇಶ್ ಮೆದು ಅವರ ಮೊಬೈಲ್ ಸಂಖ್ಯೆ 9008890045ಗೂ ಕರೆ ಮಾಡಬಹುದು.
Comments are closed.