ಈ ಪಟ್ಟಿಯಲ್ಲಿರುವ ಸ್ಮಾರ್ಟ್ಫೋನ್ ಖರೀದಿಸಿ, ಏರ್ಟೆಲ್ ನಿಂದ ಆರು ಸಾವಿರ ಗೆಲ್ಲಿ!
ಟೆಲಿಕಾಂ ಕಂಪನಿಯಾದ ಏರ್ಟೆಲ್ ಗ್ರಾಹಕರಿಗೆ ಸದಾ ಆಫರ್ ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ 6 ಸಾವಿರ ರೂಪಾಯಿಯನ್ನು ಗೆಲ್ಲುವ ಅವಕಾಶ ನೀಡುತ್ತಿದೆ.
ಸ್ಮಾರ್ಟ್ಫೋನ್ ಖರೀದಿಸಿದ 30 ದಿನಗಳ ಒಳಗಾಗಿ ನೀವು ಈ ಕೊಡುಗೆಯನ್ನು ಕ್ಲೈಮ್ ಮಾಡಬೇಕು. ಈ ಕೊಡುಗೆಯನ್ನು ಏರ್ಟೆಲ್ ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಿದೆ. ಈ ಆಫರ್ ಇನ್ನೂ ಮುಂದುವರೆದಿದ್ದು, ಹತ್ತು ಹೊಸ ಸ್ಮಾರ್ಟ್ಫೋನ್ಗಳೊಂದಿಗೆ ಈ ಆಫರ್ನಲ್ಲಿ ಒಳಗೊಂಡಿರುವ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ಏರ್ಟೆಲ್ ನವೀಕರಿಸಿದೆ.
ಏರ್ಟೆಲ್ ಈ ಕ್ಯಾಶ್ಬ್ಯಾಕ್ 6 ಸಾವಿರ ರೂಪಾಯಿಗಳನ್ನು ಬಳಕೆದಾರರ ಖಾತೆಗೆ ಎರಡು ಭಾಗಗಳಲ್ಲಿ ವರ್ಗಾಯಿಸುತ್ತದೆ. ಈ ಕ್ಯಾಶ್ಬ್ಯಾಕ್ನ ಮೊದಲ ಭಾಗ ಅಂದರೆ 2000 ರೂಪಾಯಿಗಳನ್ನು ಏರ್ಟೆಲ್ ಬಳಕೆದಾರರು ಸತತ 18 ತಿಂಗಳುಗಳವರೆಗೆ ರೂ 249 ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಯೋಜನೆಗಳನ್ನು ಖರೀದಿಸಿದಾಗ ಅವರ ಖಾತೆಗೆ ವರ್ಗಾಯಿಸಲಾಗುತ್ತದೆ. ಬಳಕೆದಾರರು ಮೂರು ವರ್ಷ ಅಥವಾ 36 ತಿಂಗಳವರೆಗೆ ನಿರಂತರ ರೀಚಾರ್ಜ್ ಮಾಡಿದಾಗ ಉಳಿದ ನಾಲ್ಕು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.
ಈ ಕೊಡುಗೆಯ ಅಡಿಯಲ್ಲಿ, ಏರ್ಟೆಲ್ ಬಳಕೆದಾರರಿಗಾಗಿ ಹತ್ತು ಹೊಸ ಸ್ಮಾರ್ಟ್ಫೋನ್ಗಳನ್ನು ಪಟ್ಟಿಗೆ ಸೇರಿಸಿದೆ. ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸುವ ಮೂಲಕ, ನೀವು ರೂ.6 ಸಾವಿರ ಕ್ಯಾಶ್ಬ್ಯಾಕ್ಗೆ ಅರ್ಹರಾಗುತ್ತೀರಿ. ಏರ್ಟೆಲ್ ಪಟ್ಟಿಯಲ್ಲಿರುವ ಸ್ಮಾರ್ಟ್ಫೋನ್ಗಳೆಂದರೆ Itel A16 Plus, Itel A17, Itel A37, Itel P17, Nokia C01 Plus, Xiaomi Poco M3 Pro 5G, Tecno Pop6 Pro, Infinix Smart 6 HD, Motorola Moto G22 ಮತ್ತು Oppo A16E.
ನೀವು ಕ್ಯಾಶ್ಬ್ಯಾಕ್ ಪಡೆಯಲು ಬಯಸಿದರೆ, ಅದಕ್ಕಾಗಿ ನಿಮಗೆ 15 ದಿನಗಳನ್ನು ನೀಡಲಾಗುತ್ತದೆ. ಅಲ್ಲದೆ, ನಿಮ್ಮ ಕ್ಯಾಶ್ಬ್ಯಾಕ್ ವರ್ಗಾವಣೆಯಾಗುವ ಖಾತೆಯು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನ ಖಾತೆಯಲ್ಲಿದೆ. ನೀವು ಖಾತೆಯನ್ನು ಹೊಂದಿಲ್ಲದಿದ್ದರೆ, ನೀವು ಅದನ್ನು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ತೆರೆಯಬಹುದು.