BIG BREAKING | ಒಂದೇ ರೂಮಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್ ಜೋಡಿ
ಮೈಸೂರು: ಇಲ್ಲಿನ ಹೋಟೆಲ್‌ನಲ್ಲಿ ತಂಗಿದ್ದ ಟಾಲಿವುಡ್ ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರಿಬ್ಬರ ಸಂಬಂಧಕ್ಕೆ ಕೊನೆಗೂ ಬಿಗ್ಟ್ವಿಸ್ಟ್ ಸಿಕ್ಕಿದ್ದು, ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಇಬ್ಬರು ಒಂದೇ ರೂಮ್ನಲ್ಲಿರುವುದು ದೃಶ್ಯ ಸಮೇತವಾಗಿ ಸಿಕ್ಕಿ ಬಿದ್ದಿದ್ದಾರೆ.
ಕಳೆದ ಮೂರು ದಿನಳಿಂದ ನರೇಶ್ ಪತ್ನಿ ರಮ್ಯಾ ರಘುಪತಿ ಅವರು ತಮ್ಮ ಪತಿ ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವೆ ಅಕ್ರಮ ಸಂಬಂಧವಿದೆ ಎಂದು ಆರೋಪ ಮಾಡಿದ್ದರು. ಇದೀಗ ಈ ಆರೋಪವನ್ನು ದೃಶ್ಯ ಸಮೇತವಾಗಿ ಜನರಿಗೆ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೆಲುಗು ನಟ ನರೇಶ್-ಪವಿತ್ರಾ ಲೋಕೇಶ್ ಮೈಸೂರಿನ ದಿ ಕೋರಮ್ ಹೋಟೆಲ್ನ ರೂಮ್ ನಂಬರ್ 3001ರಲ್ಲಿ ಇದ್ದರು. ಮುಂಜಾನೆಯಿಂದಲೂ ರಮ್ಯಾ ರಘುಪತಿ ಅವರು ರೂಮ್ ಹೊರಗೆ ಅವರ ಬರುವಿಕೆಗಾಗಿ ಕಾದು ಕುಳಿತಿದ್ದರು.
ಹೋಟೆಲ್‌ನಲ್ಲಿ ನರೇಶ್ ತನ್ನ ಹೆಸರಿನಲ್ಲಿಯೇ ರೂಮ್ ಬುಕ್ ಮಾಡಿದನ್ನು ಈ ಕುರಿತು ಹೋಟೆಲ್ ಮ್ಯಾನೇಜರ್ ರಕ್ಷಿತ್ ಅವರು ಖಚಿತಪಡಿಸಿದ್ದರು ಎಂಬ ಮಾಹಿತಿ ಲಭ್ಯ ಆಗಿದೆ. ಅಲ್ಲದೇ ನರೇಶ್ ರೂಮ್ಗೆ ನಿನ್ನೆ ರಾತ್ರಿ ಪವಿತ್ರಾ ಲೋಕೇಶ್ ಡೈರೆಕ್ಟಾಗಿ ಹೋದರು ಎಂಬ ಸ್ಫೋಟಕ ಮಾಹಿತಿಯನ್ನು ಸಹ ಬಹಿರಂಗಪಡಿಸಿದ್ದಾರೆ.
ಕಳೆದ ಒಂದು ವಾರದಿಂದ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಸಂಬಂಧದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು, ಇದಲ್ಲದೇ ಖುದ್ದು ಪವಿತ್ರ ಲೋಕೇಶ್ ಕೂಡ ನರೇಶ್ ಹಾಗೂ ತಮ್ಮ ನಡುವಿನ ಸಂಬಂಧ ಬಗ್ಗೆ ಸ್ಪಷ್ಟೀಕರಣ ನೀಡಿದ್ದರು. ಈ ನಡುವೆ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಂದು ಬೆಳಗ್ಗೆ ಮೈಸೂರಿನ ಹೋಟೆಲ್ ವೊಂದರ ರೂಮ್‌ನಲ್ಲಿ ತಂಗಿದ್ದ ವೇಳೆಯಲ್ಲಿ ರಮ್ಯಾ ರಮೇಶ್ ಅವರು ದಾಳಿ ನಡೆಸಿದ ಘಟನೆ ನಡೆದಿದೆ.
ಇನ್ನೂ ಇದೇ ವೇಳೇ ರಮ್ಯಾ ರಘುಪತಿ, ಪತಿ ನರೇಶ್, ಪವಿತ್ರಾ ಹೊರ ಬರುತ್ತಿದ್ದಂತೆಯೇ ಚಪ್ಪಲಿಯಲ್ಲಿ ಹಲ್ಲೆ ನಡೆಸಲು ಮುಂದಾಗಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ನರೇಶ್ ವರ್ತನೆ ಕಂಡು ಕಣ್ಣೀರಾಕಿದ ನರೇಶ್ ಪತ್ನಿ ರಮ್ಯಾ!
ಹೋಟೆಲ್ 3001 ರೂಂ. ನಲ್ಲಿ ಇದ್ದಾರೆಂದು ತಿಳಿದಾಗ, ನರೇಶ್ ಪತ್ನಿ ಕೂಡಾ ಸುದ್ದಿ ಕೇಳಿ ಆ ಹೋಟೆಲ್ ಗೆ ಬಂದಿದ್ದಾರೆ. ಆಕ್ರೋಶಗೊಂಡ ಪತ್ನಿ ಪವಿತ್ರ ಲೋಕೇಶ್ ಗೆ ಕಣ್ಣೀರು ಹಾಕುತ್ತಾ ಬೈಯುತ್ತಾ ಇರೋ ಮಾತನ್ನಾಡಿದ್ದಾರೆ. ಮೈಸೂರಿನವಳಾಗಿ, ಕರ್ನಾಟಕದವಳಾಗಿ ನೀನು ಈ ರೀತಿ ಮಾಡೋದು ಸರಿಯಾ ಎಂಬ ಆಕ್ರೋಶದ ಮಾತನ್ನು ರಮ್ಯಾ ಸಿಟ್ಟಲ್ಲಿ ಕೇಳಿದ್ದಾರೆ.
ಇದು ಒಂದು ಕಡೆಯಾದರೆ ಆದರೂ ಬೇರೆಯವರ ಸಂಸಾರದಲ್ಲಿ ಪವಿತ್ರ ಲೋಕೇಶ್ ಎಂಟ್ರಿ ಕೊಟ್ಟದ್ದು ಎಷ್ಟು ಸರಿ ಎಂದು ಜನ ಕೇಳುತ್ತಾ ಇದ್ದಾರೆ.
ಹೋಟೆಲ್ ನಿಂದ ಹೊರ ಬಂದ ಮಾಧ್ಯಮದವರನ್ನು ಕಂಡು ಕಳ್ಳ ನಗೆ ಬೀರುತ್ತಾ, ಒಂದು ಚೂರು ನಾಚಿಕೊಳ್ಳದ ನರೇಶ್ ಮಾಧ್ಯಮಕ್ಕೆ ಶಿಳ್ಳೆ ಹೊಡೆಯುತ್ತಾ ಲಿಫ್ಟ್ ಮೂಲಕ ಹೊರಗೆ ಹೋಗಿದ್ದಾರೆ. ನಂತರ ನರೇಶ್, ಪವಿತ್ರಾ ಒಂದೇ ಕಾರಿನಲ್ಲಿ ಹೊರಟಿದ್ದಾರೆ.