Home Interesting ಹಾವಿನೊಂದಿಗೆ ಸರಸವಾಡುತ್ತಿದ್ದಾಳೆ ಈ ಸುಂದರಿ !!| ಆದ್ರೆ ಮುಂದೆ ನಡೆದಿದ್ದನ್ನು ಮಾತ್ರ ಜೀವನದಲ್ಲಿ ಎಂದೂ ಮರೆಯಲ್ಲ...

ಹಾವಿನೊಂದಿಗೆ ಸರಸವಾಡುತ್ತಿದ್ದಾಳೆ ಈ ಸುಂದರಿ !!| ಆದ್ರೆ ಮುಂದೆ ನಡೆದಿದ್ದನ್ನು ಮಾತ್ರ ಜೀವನದಲ್ಲಿ ಎಂದೂ ಮರೆಯಲ್ಲ ಈ ಯುವತಿ

Hindu neighbor gifts plot of land

Hindu neighbour gifts land to Muslim journalist

ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಅದರಲ್ಲೂ ವಿಷಕಾರಿ ಹಾವುಗಳ ಕುರಿತ ವಿಷಯ ಕೇಳಿದರೇನೇ ಹಲವರು ಹೌಹಾರುತ್ತಾರೆ. ಹಾವು ಎದುರಿಗೆ ಬಂದರೆ ಸಾಕು ಅತಿರಥ-ಮಹಾರಥರು ಕೂಡ ಒಂದು ಕ್ಷಣ ಭಯಭೀತರಾಗುತ್ತಾರೆ. ಏಕೆಂದರೆ ಹಾವು ತೆವಳುವುದನ್ನು ನೋಡಿದರೆ ಸಾಕು ಮೈಮೇಲಿನ ರೋಮಗಳು ಎದ್ದು ನಿಲ್ಲುತ್ತವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಾವುಗಳ ಹಲವು ವೀಡಿಯೋಗಳು ನೋಡಲು ಸಿಗುತ್ತವೆ. ಇವುಗಳಲ್ಲಿ ಕೆಲ ವೀಡಿಯೋಗಳು ತುಂಬಾ ಅಪಾಯಕಾರಿಯಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ವೀಡಿಯೋವೊಂದು ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಈ ವೀಡಿಯೋ ಓರ್ವ ಯುವತಿ ಹಾಗೂ ಹಾವಿಗೆ ಸಂಬಂಧಪಟ್ಟಿದೆ. ಈ ವೀಡಿಯೋದಲ್ಲಿ ಯುವತಿ ಹಾವಿನ ಜೊತೆಗೆ ಚೆಲ್ಲಾಟವಾಗುತ್ತಿರುವುದನ್ನು ನೋಡಿದರೆ ಮೈಯಲ್ಲಿ ನಡುಕ ಹುಟ್ಟುತ್ತದೆ. ಆದರೆ, ನಂತರ ಹಾವು ಯುವತಿಯ ಜೊತೆಗೆ ನಡೆದುಕೊಂಡ ರೀತಿಯನ್ನು ನೋಡಿದರೆ, ಯುವತಿ ಘಟನೆಯನ್ನು ತನ್ನ ಜೀವನದಲ್ಲಿಯೇ ಮರೆಯಲು ಸಾಧ್ಯವಿಲ್ಲ ಎಂಬಂತಿದೆ.

ವೀಡಿಯೋದಲ್ಲಿ ಯುವತಿ ಒಂದು ಅಪಾಯಕಾರಿ ಹಾವನ್ನು ತನ್ನ ಕೈಯಲ್ಲಿ ಹಿಡಿದಿರುವುದನ್ನು ನೀವು ನೋಡಬಹುದು. ಈ ಸಂದರ್ಭದಲ್ಲಿ ಅವಳು ಹಾವಿನ ಜೊತೆಗೆ ಚೆಲ್ಲಾಟವಾಡಲು ಪ್ರಯತ್ನಿಸುತ್ತಾಳೆ. ಏತನ್ಮಧ್ಯೆ ಹಾವು ಯುವತಿಯ ಮೇಲೆ ಕೋಪಗೊಳ್ಳುತ್ತದೆ. ಬಳಿಕ ಅದು ಯುವತಿಯ ಬಲಗೈಯನ್ನು ಕಚ್ಚುವುದನ್ನು ಕೂಡ ನೀವು ನೋಡಬಹುದು.

ಹಲವು ಬಾರಿ ಹಾವು ಯುವತಿಯ ಕೈಮೇಲೆ ದಾಳಿ ಮಾಡಲು ಯತ್ನಿಸುವುದನ್ನು ನೀವು ವೀಡಿಯೋದಲ್ಲಿ ಕಾಣಬಹುದು. ಇದರಿಂದ ಯುವತಿ ಭಯಭೀತಳಾಗುತ್ತಾಳೆ. ವೀಡಿಯೋದಲ್ಲಿ ಯುವತಿ ಹಾವಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದನ್ನು ನೀವು ನೋಡಬಹುದು. ಒಂದು ದಾಳಿಯಲ್ಲಿ ಹಾವು ಯುವತಿಯ ಹೆಬ್ಬೆರಳನ್ನೇ ಗುರಿಯಾಗಿಸಿದೆ.

snake._.world ಹೆಸರಿನ ಖಾತೆಯಲ್ಲಿ ಈ ವೀಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೋ ಎಷ್ಟೊಂದು ಭಯಾನಕವಾಗಿದೆ ಎಂದರೆ, ಇಂಟರ್ನೆಟ್ ನಲ್ಲಿ ಎಲ್ಲೆಂದರಲ್ಲಿ ಈ ವೀಡಿಯೋ ಕುರಿತು ಚರ್ಚಿಸಲಾಗುತ್ತಿದೆ. ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಈ ವೀಡಿಯೋ ಸಾವಿರಾರು ಬಾರಿ ವೀಕ್ಷಣೆಗೆ ಒಳಗಾಗಿದೆ.

https://www.instagram.com/reel/CdjOeu3Du0z/?igshid=YmMyMTA2M2Y=
ವೈರಲ್ ವೀಡಿಯೋ