ಪೊಲೀಸನಿಂದ ಮಹಿಳೆಗೆ ವಂಚನೆ : 2 ಕೋಟಿ ಪರಿಹಾರಕ್ಕೆ ಆದೇಶ

Share the Article

ವಿವಾಹಿತ ಪುರುಷರಿಂದ ಮೋಸ ಹೋಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿವಾಹಿತ ಪುರುಷರು ಮದುವೆಯಾಗದ ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ದುರ್ಬಳಕೆ ಮಾಡಿಕೊಳ್ತಾರೆ.

ಇಂತಹ ಪ್ರಕರಣಗಳಲ್ಲಿ ಕೆಲವರು ಸಿಕ್ಕಿ ಹಾಕಿಕೊಂಡರೆ, ಮತ್ತೆ ಕೆಲವರು ನಾಜೂಕಾಗಿ ಎಸ್ಟೇಪ್ ಆಗುತ್ತಾರೆ. ಬ್ರಿಟನ್‌ನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬ ಮದುವೆಯಾಗಿರುವ ವಿಷಯ ಮುಚ್ಚಿಟ್ಟು ಪರಿಸರ ಕಾರ್ಯಕರ್ತೆಯನ್ನು ನಂಬಿಸಿ, ಪ್ರೀತಿ ಪ್ರೇಮ ಅಂತ ಆಟವಾಡಿದ್ದಾನೆ. ಸದ್ಯ ಖಾಕಿಯ ಮೋಸದ ನಾಟಕ ಮಹಿಳೆ ಎದುರು ಬಯಲಾಗಿದ್ದು, ಪೊಲೀಸ್ ಅಧಿಕಾರಿಗೆ ತಕ್ಕ ಶಾಸ್ತಿಯಾಗಿದೆ.

ಸಮಾಜವನ್ನು ಕಾಪಾಡಬೇಕಾದ ಖಾಕಿಯೇ ಮಹಿಳೆಗೆ ವಂಚಿಸಿದ್ದಾನೆ. ನಂತರ ಮಾಡಿದ್ದುಣೋ ಮಹಾರಾಯ ಎಂಬಂತೆ ಮಾಡಿದ ತಪ್ಪಿಗೆ ಕೋಟಿಗಟ್ಟಲೆ ಪರಿಹಾರ ನೀಡಿದ್ದಾನೆ. ಪರಿಸರ ಕಾರ್ಯಕರ್ತೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ಈ ಎಲ್ಲಾ ಆರೋಪಗಳ ಮೇಲೆ ಪೊಲೀಸ್ ಅಧಿಕಾರಿಯು ಮಹಿಳೆಗೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 2.3 ಕೋಟಿ ರೂಪಾಯಿ ಪರಿಹಾರ ನೀಡಿದ್ದಾನೆ.

Leave A Reply