Home Entertainment ಬರೋಬ್ಬರಿ 18 ಜನರ ಮೇಲೆ ಏಕಾಏಕಿ ದಾಳಿ ಮಾಡಿದ ಅಳಿಲು !! | ಈ ಸೈಕೋ...

ಬರೋಬ್ಬರಿ 18 ಜನರ ಮೇಲೆ ಏಕಾಏಕಿ ದಾಳಿ ಮಾಡಿದ ಅಳಿಲು !! | ಈ ಸೈಕೋ ಅಳಿಲಿನಿಂದ ಕಚ್ಚಿ ಗಾಯಗೊಂಡವರು ಆಸ್ಪತ್ರೆಗೆ ದಾಖಲು

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಮಂಗ ಆಟೋ ಚಾಲಕನ ವಿರುದ್ಧ ಸೇಡು ತೀರಿಸಿಕೊಳ್ಳಳು ಅಟ್ಟಾಡಿಸಿಕೊಂಡು ಹೋಗಿ ಗಾಯಗೊಳಿಸಿದ್ದನ್ನ ನೋಡಿದ್ದೇವೆ. ಆದರೆ ಮನುಷ್ಯರ ಮೇಲೆ ಕೋತಿ ದಾಳಿ ಸಾಮಾನ್ಯ. ಇಂತಹ ಕೋತಿ ದಾಳಿ ಅದೆಷ್ಟೋ ಬಾರಿ ನಡೆದು ಹೋಗಿದೆ. ಆದ್ರೆ ಮನುಷ್ಯನ ಗಾತ್ರ ಮಾತ್ರವಲ್ಲದೆ ಯಾವುದೇ ರೀತಿಯಲ್ಲೂ ಸಮವಲ್ಲದ ಅಳಿಲೊoದು ಜನರಿಗೆ ದಾಳಿ ಮಾಡಿ, ಶಕ್ತಿಗಿಂತ ಯುಕ್ತಿ ಮೇಲು ಎಂಬುದನ್ನು ಸಾಬೀತು ಪಡಿಸಿದ್ದು, ಈ ನಗಣ್ಯ ಗಾತ್ರದ ಅಳಿಲಿನ ಸ್ಟೋರಿ ಇಲ್ಲಿದೆ ನೋಡಿ.

ಹೌದು. ಇದೊಂದು ಸೈಕೋ ಅಳಿಲೆಂದೇ ಫೇಮಸ್. ಕ್ರಿಸ್​ಮಸ್ ಆಚರಣೆಯ ಸಂಭ್ರಮದಲ್ಲಿದ್ದ ಜನರಿಗೆ ಅಳಿಲೊಂದು ಸಂಕಷ್ಟ ತಂದೊಡ್ಡಿದ್ದ ಘಟನೆ ಇಂಗ್ಲೆಂಡ್​ನ ಫ್ಲಿಂಟ್​ಶೈರ್​​ನ ಬಕ್ಲಿಯಲ್ಲಿ ನಡೆದಿದೆ. ಕೇವಲ 2 ದಿನಗಳ ಅಂತದಲ್ಲಿ 18 ಜನರ ಮೇಲೆ ದಾಳಿ ಮಾಡಿದ್ದು, ಅವರಿಗೆ ಗಂಭೀರವಾಗಿ ಗಾಯಗಳಾಗಿದೆ.

ಮೊದಲಿಗೆ ಆಹಾರ ಹುಡುಕುತ್ತಾ ಅತ್ತಿತ್ತ ಓಡಾಡುತ್ತಿದ್ದ ಅಳಿಲು ತಕ್ಷಣ ಜನರ ಮೇಲೆ ದಾಳಿಗೆ ಮುಂದಾಗಿದೆ.ಆಹಾರ ಸಿಗದೆ ಪರದಾಡಿದ್ದಕ್ಕೋ ಏನು ಸಿಕ್ಕಸಿಕ್ಕವರ ಮೇಲೆ ಎರಗುತ್ತಿದ್ದ ಅಳಿಲು ಕಚ್ಚಿ ಗಾಯಗೊಳಿಸಲು ಆರಂಭಿಸಿದೆ. ಅಳಿಲು ಹಿಡಿಯಲು ಯತ್ನಿಸಿದರು ಸಾಧ್ಯವಾಗಿರಲಿಲ್ಲ. ಎರಡನೇ ದಿನವೂ ಸಹ ಅಳಿಲಿನ ಕಾಟ ಆರಂಭವಾಗಿದ್ದು, ಒಟ್ಟು 2 ದಿನದಲ್ಲಿ 18 ಜನರ ಮೇಲೆ ದಾಳಿ ಮಾಡಿದೆ. ಬಳಿಕ ವಿವಿಧೆಡೆ ಬಲೆಗಳನ್ನು ಹಾಕಿ ಅಳಿಲು ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.