Home Interesting ಹಾವುಗಳ ಕಾಟ ತಡೆಯಲಾರದೆ ಇಡೀ ಬಂಗಲೆಗೆ ಬೆಂಕಿ ಇಟ್ಟ ಈ ಭೂಪ | ಇವನ ಈ...

ಹಾವುಗಳ ಕಾಟ ತಡೆಯಲಾರದೆ ಇಡೀ ಬಂಗಲೆಗೆ ಬೆಂಕಿ ಇಟ್ಟ ಈ ಭೂಪ | ಇವನ ಈ ಕೃತ್ಯದಿಂದ ಉಂಟಾದ ನಷ್ಟ ಎಷ್ಟು ಗೊತ್ತಾ??

Hindu neighbor gifts plot of land

Hindu neighbour gifts land to Muslim journalist

ಕೆಲವೊಂದು ಬಾರಿ ನಾವು ಅದೆಷ್ಟೇ ಜಾಗ್ರತೆವಹಿಸಿದರೂ ತಪ್ಪುಗಳು ನಡೆದೇ ನಡೆಯುತ್ತದೆ.ಅಧಿಕ ಮುಂದಾಲೋಚನೆಯಿಂದಲೂ ಅಪಾಯ ಕಟ್ಟಿಟ್ಟ ಬುತ್ತಿ.ಹೀಗೆ ಇಲ್ಲೊಬ್ಬ ಅತೀ ಬುದ್ಧಿವಂತಿಕೆಯಿಂದ ಉಪಾಯ ಮಾಡಿ ತಲೆ ಮೇಲೆ ಕೈ ಹಿಡುವ ಪರಿಸ್ಥಿತಿಗೆ ಬಂದಿದ್ದಾನೆ.ಅಷ್ಟಕ್ಕೂ ಆತನ ಆ ಐಡಿಯಾ ಏನು? ಅದರಿಂದ ಎಷ್ಟು ನಷ್ಟವಾಯಿತೆಂದು ನೀವೇ ನೋಡಿ.

ಇಲ್ಲೊಬ್ಬ ವ್ಯಕ್ತಿ ಮನೆಗೆ ನುಗ್ಗಿದ್ದ ಹಾವನ್ನು ಹೊರಗೋಡಿಸೋ ಪ್ರಯತ್ನದಲ್ಲಿ ತನ್ನ 10 ಸಾವಿರ ಅಡಿ ವಿಸ್ತರಣದಲ್ಲಿ ನಿರ್ಮಿಸಿದ್ದ ಮನೆಯನ್ನೇ ಸುಟ್ಟುಹಾಕಿದ್ದಾನೆ.ಹಾವು ಓಡಿಸಿದ್ರೆ ಮನೆ ಹೇಗೆ ಸುಟ್ಟೋಯ್ತು ಅಂತ ಪ್ರಶ್ನೆ ಮೂಡ್ತಿದೆಯೇ? ಕಾರಣ ಇಲ್ಲಿದೆ ನೋಡಿ.ಅಂದಹಾಗೆ ಅಮೆರಿಕದ ಮೇರಿಲ್ಯಾಂಡ್​ನಲ್ಲಿ ಈ ಘಟನೆ ನಡೆದಿದೆ.

ಈತ ಮನೆಗೆ ಹಾವು ನುಗ್ಗಿದ್ದರಿಂದ ಅದನ್ನು ಓಡಿಸೋಕೆ ಅಂತ ಮನೆಯಲ್ಲಿ ಹೊಗೆ ಹಾಕಿದ್ದಾನೆಆದ್ರೆ ಬೆಂಕಿ ಹೊತ್ತಿಕೊಳ್ಳುವ ವಸ್ತುವಿಗೆ ಹತ್ತಿರದಲ್ಲೇ ಈ ಹೊಗೆ ಹಾಕಲು ಮಾಡಿದ ಕೆಂಡವನ್ನು ಇರಿಸಿದ್ದ.ಹೀಗಾಗಿ ಹೊಗೆ ಬದಲಿಗೆ ಇಡೀ ಮನೆಯೇ ಹೊತ್ತಿ ಉರಿದಿದೆ. ಇದ್ರಿಂದ ಸುಮಾರು 10 ಲಕ್ಷ ಡಾಲರ್ ಅಂದ್ರೆ ಸುಮಾರು 7.40 ಕೋಟಿ ರೂಪಾಯಿಯ ನಷ್ಟ ಅನುಭವಿಸಿದ್ದಾರೆ. ಆದ್ರೆ ಹಾವು ಮನೆಯಿಂದ ಹೊರಗೆ ಹೋಯ್ತಾ ಅಥವಾ ಅದೂ ಸುಟ್ಟುಹೋಯ್ತಾ ಅನ್ನೋದು ಇನ್ನೂ ಗೊತ್ತಾಗಿಲ್ಲ.