Puducherry: ಮೈ ಗೆ 120 ಮದ್ಯದ ಬಾಟಲಿಗಳನ್ನು ಅಂಟಿಸಿಕೊಂಡು ಕದಿಯುವಾಗ ಸಿಕ್ಕಿಬಿದ್ದ ಕಳ್ಳ !!

Puducherry: ಇಂದು ವಿಚಿತ್ರ ರೀತಿಯ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳ್ಳರ ಪ್ಲಾನಿಗೆ ನಿಜಕ್ಕೂ ಸಲಾಂ ಹೊಡೆಯಬೇಕು ಎನಿಸುತ್ತದೆ. ಅಂತೆಯೇ ಇದೀಗ ಮತ್ತೊಂದು ಇಂಥದ್ದೇ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಕಳ್ಳನೊಬ್ಬ ತನ್ನ ಮೈಯೊಳಗೆ 120 ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಸಿಕ್ಕಿಬಿದ್ದಿದ್ದಾನೆ.

 

ಹೌದು,  ಪುದುಚೇರಿಯಲ್ಲಿ ವ್ಯಕ್ತಿಯೋರ್ವ ಮೈಮೇಲೆಲ್ಲಾ ಬಾಟ್ಲಿಗಳನ್ನು ಅಂಟಿಸಿಕೊಂಡು ಸಾಗಣೆ ಮಾಡುತ್ತಿದ್ದ ವಿಚಿತ್ರ ಘಟನೆಯೊಂದು ನಡೆದಿದೆ. ಈ ರೀತಿ ವಿಚಿತ್ರ ಕಳ್ಳತನ ಮಾಡಿ ಸಿಕ್ಕಿಬಿದ್ದ ವ್ಯಕ್ತಿಯನ್ನು ನಾಗಮಣಿ ಎಂದು ಗುರುತಿಸಲಾಗಿದ್ದು, ಶನಿವಾರ ಪೊಲೀಸರು ಬಂಧಿಸಿದ್ದಾರೆ.

 

ಅಂದಹಾಗೆ ಬಂಧಿತ ನಾಗಮಣಿ ತನ್ನ ಮೈಮೇಲೆಲ್ಲಾ ಮದ್ಯದ ಬಾಟ್ಲಿಗಳನ್ನು ಅಂಟಿಸಿಕೊಂಡಿದ್ದ. ಹೊಟ್ಟೆ, ಸೊಂಟ, ಬೆನ್ನು, ತೊಡೆ, ಕಾಲುಗಳ ಮೇಲೆ ಒಟ್ಟು 120 ಬಾಟ್ಲಿಗಳನ್ನು ಟೇಪ್‌ನಿಂದ ಅಂಟಿಸಿಕೊಂಡು ತಂದಿದ್ದ. ಅನುಮಾನದ ಮೇರೆಗೆ ನಾಗಮಣಿಯನ್ನು ತಡೆದು ಪರಿಶೀಲಿಸಿದಾಗ ಪೊಲೀಸರಿಗೆ ಆತನ ಮೈಮೇಲೆಲ್ಲಾ ಬಾಟ್ಲಿಗಳಿರುವುದು ಕಂಡುಬಂದಿತು. ಮದ್ಯದ ಬಾಟ್ಲಿಗಳನ್ನು ವಶಪಡಿಸಿಕೊಂಡ ಪೊಲೀಸರು ನಾಗಮಣಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

Comments are closed.