South korea: ದಕ್ಷಿಣ ಕೊರಿಯಾದ ಖ್ಯಾತ ನಟಿ ಶವವಾಗಿ ಪತ್ತೆ !!

South Korea : ದಕ್ಷಿಣ ಕೊರಿಯಾದ ಖ್ಯಾತ ನಟಿ ಕಿಮ್ ಸೇ-ರಾನ್ ಶವವಾಗಿ ಪತ್ತೆಯಾಗಿದ್ದಾರೆ. ಹೌದು, ಬ್ಲಡ್ಹೌಂಡ್ಸ್ ಮತ್ತು ದಿ ಮ್ಯಾನ್ ಫ್ರಮ್ ನೋವೇರ್ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ದಕ್ಷಿಣ ಕೊರಿಯಾದ 24 ವರ್ಷದ ನಟಿ ಕಿಮ್ ಸೇ-ರಾನ್ ಭಾನುವಾರ ಸಿಯೋಲ್’ನ ಸಿಯೋಂಗ್ಸು-ಡಾಂಗ್ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

 

ದೊರೆತ ಮಾಹಿತಿ ಪ್ರಕಾರ ರಾನ್ ಅವರನ್ನು ಸ್ನೇಹಿತರೊಬ್ಬರು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ನಟಿ ಶವಪತ್ತೆಯಾಗಿದೆ. ಈ ಕುರಿತು ಪೊಲೀಸ ಅಧಿಕಾರಿಯೊಬ್ಬರು ಮಾತನಾಡಿ “ನಾವು ಇನ್ನೂ ಯಾವುದೇ ಮಾಹಿತಿ ಪತ್ತೆಹಚ್ಚಿಲ್ಲ, ಆದರೆ ಸಾವಿನ ಸಂದರ್ಭಗಳ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

Comments are closed.