New India Co-operative Bank Scam: ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಪ್ರಕರಣ; ಮತ್ತೊಂದು ಬಂಧನ

New India Co-operative Bank Scam: ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ ಹಗರಣ ಪ್ರಕರಣದಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ EOW ಡೆವಲಪರ್ ಅನ್ನು ಬಂಧಿಸಿದೆ. ಬಂಧಿತ ಡೆವಲಪರ್ ಹೆಸರು ಧರ್ಮೇಶ್ ಪಾನ್ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ 122 ಕೋಟಿ ರೂ.ಗಳಲ್ಲಿ 70 ಕೋಟಿ ರೂ.ಗಳನ್ನು ಧರ್ಮೇಶ್ ತೆಗೆದುಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ. ಪ್ರಮುಖ ಆರೋಪಿ ಜನರಲ್ ಮ್ಯಾನೇಜರ್ ಹಿತೇಶ್ ಮೆಹ್ತಾ ಅವರಿಂದ 2024ರ ಮೇ ಮತ್ತು ಡಿಸೆಂಬರ್‌ನಲ್ಲಿ 1.75 ಕೋಟಿ ರೂ. ಮತ್ತು 2025ರ ಜನವರಿಯಲ್ಲಿ 50 ಲಕ್ಷ ರೂ.ಗಳನ್ನು ಧರ್ಮೇಶ್ ಪಡೆದಿದ್ದಾರೆ ಎಂದು EOW ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಿನ್ನೆ ಪೊಲೀಸರು ಸುದೀರ್ಘ ವಿಚಾರಣೆ ಬಳಿಕ ಹಿತೇಶ್ ಮೆಹ್ತಾ ಅವರನ್ನು ಬಂಧಿಸಿದ್ದಾರೆ.
ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಹಗರಣದ ತನಿಖೆಯ ಭಾಗವಾಗಿ ಆರ್ಥಿಕ ಅಪರಾಧಗಳ ವಿಭಾಗ (EOW) ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಹಿತೇಶ್ ಮೆಹ್ತಾ ಅವರನ್ನು ಬಂಧಿಸಿದೆ. 122 ಕೋಟಿ ರೂಪಾಯಿ ಅವ್ಯವಹಾರ ಮಾಡಿರುವ ಆರೋಪ ಅವರ ಮೇಲಿದೆ. 2020ರಿಂದ 2025ರ ನಡುವೆ ಹಗರಣ ನಡೆದಿದೆ. ಬ್ಯಾಂಕ್‌ನ ಖಾತೆ ಮತ್ತು ನಗದು ಲೆಕ್ಕದಲ್ಲಿ ಅಕ್ರಮಗಳು ಕಂಡುಬಂದಿವೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಆರ್ಥಿಕ ಅಪರಾಧ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ದಾದರ್ ಮತ್ತು ಗೋರೆಗಾಂವ್ ಶಾಖೆಗಳಲ್ಲಿ ಅಕ್ರಮವಾಗಿ ಹಣ ಹಿಂಪಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ಇದರ ಹಿಂದೆ ಹಿತೇಶ್ ಮೆಹ್ತಾ ಕೈವಾಡವಿದೆ ಎಂದು ಹೇಳಲಾಗಿದೆ.
Comments are closed.