Mandya: ಮಂಡ್ಯ: 8 ವರ್ಷದ ಬಾಲಕಿ ಮೇಲೆ ಹಾಡಹಗಲೇ ಮೂವರಿಂದ ಗ್ಯಾಂಗ್ರೇಪ್

Mandya: ಎಂಟು ವರ್ಷದ ಬಾಲಕಿ ಮೇಲೆ ಮೂವರು ಕಾಮುಕರಿಂದ ಗ್ಯಾಂಗ್ರೇಪ್ ಮಾಡಿರುವಂತಹ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ. ಬಾಲಕಿಗೆ ಕೇಕ್ ಕೊಡಿಸಿ, ಚಾಕುವಿನಿಂದ ಬೆದರಿಸಿ ಸರ್ಕಾರಿ ಶಾಲಾ ಆವರಣದಲ್ಲೇ ಕೃತ್ಯವೆಸಗಲಾಗಿದೆ. ಸದ್ಯ ಅಸ್ವಸ್ಥ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಜ.31ರಂದು ಮೂವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. 2 ದಿನ ಕಳೆದರೂ ಹೊಟ್ಟೆ ನೋವು, ರಕ್ತಸ್ರಾವ ನಿಲ್ಲದ ಹಿನ್ನೆಲೆ ಬಾಲಕಿಯ ಚಿಕ್ಕಮ್ಮ ಬಂದು ವಿಚಾರಿಸಿದಾಗ ನಡೆದ ಘಟನೆ ಬಗ್ಗೆ ಬಾಲಕಿ ಬಾಯಿಬಿಟ್ಟಿದ್ದಾಳೆ.
Comments are closed.