Police: ಹಿಂದೂ ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮುಸ್ಲಿಮರ ಗ್ಯಾಂಗ್‌ನ ಬಂಧನ!

Share the Article

Police: ಬಿಹಾರದ ಪೂರ್ಣಿಯಾ ಇಲ್ಲಿ ಹಿಂದೂ ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಗ್ಯಾಂಗ್‌ನ ಮುಸ್ಲಿಂ ಸದಸ್ಯರನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನ ನಾಯಕ ಅಫ್ತಾಬ್ ಎಂದು ಹೇಳಲಾಗುತ್ತದೆ.

ಅಫ್ತಾಬ್ ‘ಅಂಕಿತ್ ತಿವಾರಿ’ ಎಂದು ಹೇಳಿಕೊಂಡು ಹಿಂದೂ ಹುಡುಗಿಯರನ್ನು ವಂಚಿಸುತ್ತಿದ್ದ. ಅವನ ಸಹಚರರಾದ ಮೌಸಮ್, ಶಕೀಬ್ ಮತ್ತು ಇತರರು ಸಹ ಹಿಂದೂ ಹುಡುಗಿಯರನ್ನು ಇದೇ ರೀತಿ ಹಿಂದೂ ಹೆಸರುಗಳನ್ನು ಇಟ್ಟುಕೊಂಡು ವಂಚಿಸುತ್ತಿದ್ದರು. ಈ ಗ್ಯಾಂಗ್‌ನಲ್ಲಿ ಜುಬೈದಾ ಹೆಸರಿನ ಮಹಿಳೆಯೂ ಸೇರಿದ್ದಾರೆ. ಅವಳು ತನ್ನ ಹೆಸರು ಕತ್ರಿನಾ ಎಂದು ಇಟ್ಟುಕೊಂಡಿದ್ದಳು.

 

ಪೂರ್ಣಿಯಾದ ಕಟಿಹಾರ್ ಮೋಡ್ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ ಹನ್ನೊಂದು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ. ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು. ಅವರೆಲ್ಲರನ್ನೂ ಬಾಲಾಪರಾಧಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಸದ್ಯ ಪೊಲೀಸರು (Police) 32 ಜನರನ್ನು ಬಂಧಿಸಿದ್ದಾರೆ. ಇವರಲ್ಲಿ 6 ಪುರುಷರು ಮತ್ತು 26 ಮಹಿಳೆಯರು ಇದ್ದಾರೆ. ಅಫ್ತಾಬ ಇನ್ನೂ ಪರಾರಿಯಾಗಿದ್ದಾನೆ.

ಓರ್ವ ಸಂತ್ರಸ್ತೆಯು ಮಾತನಾಡಿ, ಈ ಗ್ಯಾಂಗ್‌ನ ನಾಯಕ ಅಫ್ತಾಬ ಖಾನ್ ಆಗಿದ್ದಾನೆ. ಅವನು ತನ್ನನ್ನು ‘ಅಂಕಿತ್ ತಿವಾರಿ’ ಎಂದು ಹೆಳಿದ್ದನು. ಅವನು ‘ಥಾರ್’ ಕಾರು ಖರೀದಿಸಿದ್ದನು ಮತ್ತು ಅದರ ಮೇಲೆ ‘ಜೈ ಬಜರಂಗ ಬಲಿ’ ಎಂದು ಬರೆದಿದ್ದನು. ಅವನು ಹಿಂದೂ ಹುಡುಗಿಯರಿಗೆ ಮದುವೆಯ ಆಮಿಷವೊಡ್ಡಿ ಬೆದರಿಸುತ್ತಿದ್ದನು, ನಂತರ ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದನು’, ಎಂದು ಹೇಳಿದ್ದಾಳೆ.

Comments are closed.